ಮದ್ಯ ಸೇವನೆಯ ನಂತರ ನಿಮ್ಮ ಕಣ್ಣುಗಳು ಕೆಂಪಾಗುತ್ತವೆಯೇ? ಹಾಗಿದ್ದರೆ, ಈ "ರೆಡ್​ ಸಿಗ್ನಲ್"​ ಏನು ಸೂಚಿಸುತ್ತದೆ! Alcohol

untitled-design-59-6906f57b7d738
Published on

Alcohol: ಮದ್ಯಪಾನವು ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಈ ವಿಚಾರ ತಿಳಿದಿದ್ದರೂ, ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆಲವು ಜನರು ವಾರಾಂತ್ಯದಲ್ಲಿ ಕುಡಿದರೆ, ಕೆಲವರು ವಾರ ಪೂರ್ತಿ ಕುಡಿಯುತ್ತಾರೆ. ಮದ್ಯಪಾನವು ಅನೇಕರ ಜೀವನಶೈಲಿಯ ಒಂದು ಭಾಗವಾಗಿದೆ ಎಂದು ತಿಳಿಯಬಹುದಾಗಿದೆ.

ಅತಿಯಾದ ಮದ್ಯ ಸೇವನೆಯು ಅನೇಕ ನಮ್ಮ ದೇಹದಲ್ಲಿನ ಅಂಗಗಳ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸುತ್ತವೆ. ವಿಶೇಷವಾಗಿ ಕಣ್ಣುಗಳ ಮೇಲೆ.. ಹೌದು, ಮದ್ಯಪಾನವು ನಮ್ಮ ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕುಡಿದ ಕೆಲವೇ ಸಮಯದಲ್ಲಿ ಕಣ್ಣುಗಳು ಕೆಂಪಾಗುತ್ತವೆ. ಇದು ಏಕೆ ಎಂದು ಇಲ್ಲಿಯವರೆಗೂ ಹಲವಾರು ಜನರಿಗೆ ತಿಳಿದುಬಂದಿಲ್ಲ. ಹಾಗಿದ್ದರೆ, ಅದಕ್ಕೆ ಕಾರಣ ಏನು ಎಂದು ತಿಳಿಯೋಣ ಬನ್ನಿ...

ಸಂಶೋಧನೆಗಳ ಪ್ರಕಾರ, ಮದ್ಯಪಾನವು ನಮ್ಮ ದೇಹದಲ್ಲಿರುವ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮದ್ಯ ಸೇವನೆಯ ನಂತರ ನಮ್ಮ ಕಣ್ಣುಗಳ ಸಣ್ಣ ರಕ್ತನಾಳಗಳು ಹಿಗ್ಗಲು ಪ್ರಾರಂಭಿಸುತ್ತವೆ. ಹಿಗ್ಗಿದ ರಕ್ತನಾಳಗಳ ಮೂಲಕ ರಕ್ತದ ಹರಿವು ಹೆಚ್ಚಾಗುವುದರಿಂದ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದು ದೇಹದ ಪ್ರತಿಕೂಲ ಸಮಸ್ಯೆಗಳಲ್ಲಿ ಒಂದಾಗಿ ಪರಿಣಾಮ ಬೀಳುತ್ತದೆ. ಇದರ ಪರಿಣಾಮ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ.

ಜನರು ಪ್ರತಿನಿತ್ಯ ಅತಿಯಾದ ಮದ್ಯ ಸೇವನೆ ಮಾಡುವುದರಿಂದ ದೃಷ್ಟಿ ಬಹಳ ಬೇಗನೆ ಮಂದಾಗುತ್ತದೆ. ಹಾಗೆಯೇ ಈ ಅಭ್ಯಾಸವು ದೃಷ್ಟಿ ಕಳೆದುಕೊಳ್ಳುವಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ಈ ಸ್ಥಿತಿ ತಾತ್ಕಾಲಿಕವಾಗಿದ್ದರೂ, ಇದು ಆಗಾಗ್ಗೆ ಸಂಭವಿಸುವುದರಿಂದ ದೇಹದ ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮಗಳು ಬೀಳಲಾರಂಭಿಸುತ್ತದೆ. ಈ ಕಾರಣದಿಂದಾಗಿ ಮದ್ಯಪಾನ ಮಾಡುವಾಗ ಮಿತಿಯನ್ನು ಅನುಸರಿಸಲು ಮತ್ತು ದೇಹದಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳತ್ತ ಬಹಳ ಎಚ್ಚರ ವಹಿಸಬೇಕು.

ಮದ್ಯ ಸೇವನೆಯ ಅಪಾಯಗಳಿಂದ ಪಾರಾಗಲು ಸಲಹೆಗಳೇನು?

1. ಮಿತಿಗಳನ್ನು ನಿಗದಿಪಡಿಸಿ

ಪ್ರತಿದಿನಿ ಮದ್ಯವನ್ನು ಸೇವಿಸುವಂತವರು ನಿಮ್ಮ ಮಿತಿಯನ್ನು ನಿಗದಿಪಡಿಸಿ. ಎಷ್ಟು ಸೇವಿಸಿದ್ದೇನೆ ಎಂದು ಡೈರಿಯಲ್ಲಿ ಬರೆದು ತೆಗೆದುಕೊಳ್ಳಿ. ಇದು ಆರೋಗ್ಯವನ್ನು ಹದಗೆಟ್ಟದಂತೆ ತಡೆಯುತ್ತದೆ.

2. ನೀರು ಮತ್ತು ಆಹಾರದೊಂದಿಗೆ ಸಮತೋಲನ

ಮದ್ಯ ಸೇವಿಸುವಾಗ ಯಾವಾಗಲು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. ಇದು ಡಿಹೈಡ್ರೇಶನ್ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಹಾಗಾಗಿ ಮದ್ಯದ ನಡುವೆ ನೀರು ಕುಡಿಯಿರಿ.

3. ಚಲನೆ ಮತ್ತು ಡ್ರೈವಿಂಗ್ ತಪ್ಪಿಸಿ

ಮದ್ಯ ಸೇವನೆಯ ನಂತರ ಯಾವುದೇ ಕಾರಣಕ್ಕೂ ಡ್ರೈವಿಂಗ್​ ಮಾಡಬೇಡಿ. ಈ ವೇಳೆ ಟ್ಯಾಕ್ಸಿ ಅಥವಾ ಡ್ರೈವರ್ ಬಳಸಿ. ಇದು ಆದಷ್ಟು ಅಪಾಯವನ್ನು ತಡೆಗಟ್ಟುತ್ತದೆ.

4. ಮದ್ಯರಹಿತ ದಿನಗಳ ಆಯ್ಕೆ

ಮನೆಯಲ್ಲಿ ವಾರಕ್ಕೆ 2-3 ದಿನಗಳು ಮದ್ಯ ರಹಿತವಾಗಿರಲಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಇದರ ಬದಲಿಗೆ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಿ. ಇವು ನಿಮ್ಮನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net