

laziness; ನಾವು ಯಾವುದೇ ಒಂದು ಕೆಲಸ ಮಾಡಲು ಪ್ಲಾನ್ ಮಾಡಿ, ನಂತರ ಅದನ್ನು ಪೂರ್ಣಗೊಳಿಸದೇ ಸೋಮಾರಿಯಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಪ್ರೇರೇಪಿಸುತ್ತಾ ಇರುವುದು ಮತ್ತು ನಮ್ಮ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸೋಮಾರಿತನವನ್ನು ಹೋಗಲಾಡಿಸಿಕೊಳ್ಳುವುದು ಬಹಣ ಮುಖ್ಯ. ಹಾಗಿದ್ರೆ ನಿಮ್ಮಲ್ಲಿನ ಸೋಮಾರಿತನವನ್ನು ಸೋಲಿಸಲು ಕೆಲವು ಪ್ರಮುಖ ಮಾರ್ಗಗಳನ್ನು ತಿಳಿಯೋಣ.
ವಿಶ್ರಾಂತಿ ಮತ್ತು ಆರೋಗ್ಯ: ಸಾಕಷ್ಟು ನಿದ್ರೆ, ಆರೋಗ್ಯಕರ ಆಹಾರ ಮತ್ತು ಸ್ವಲ್ಪ ವ್ಯಾಯಾಮವು ನಿಮ್ಮಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಸಣ್ಣ ಕೆಲಸಗಳಿಂದ ಪ್ರಾರಂಭ: ಕೆಲವೊಮ್ಮೆ ದೊಡ್ಡ ಕೆಲಸಗಳನ್ನು ನೋಡಿದ ಬಳಿಕ ನಾವು ಸೋಮಾರಿಗಳಾಗುತ್ತೇವೆ. ಹಾಗಾಗಿ ಸಣ್ಣ ಕೆಲಸಗಳನ್ನು ಪ್ರಾರಂಭಿಸಿ. ಇದು ನಿಮಗೆ ಆತ್ಮವಿಶ್ವಾಸವನ್ನು ನೀಡುವುದರ ಜೊತೆಗೆ ಕ್ರಮೇಣ ದೊಡ್ಡ ಕೆಲಸಗಳು ಸಹ ಸುಲಭವಾಗಿ ಕಾಣಿಸುತ್ತವೆ.
2 ನಿಮಿಷಗಳ ನಿಯಮವನ್ನು ಅನುಸರಿಸಿ : ಒಂದು ಕೆಲಸವನ್ನು 2 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾದರೆ ಅದನ್ನು ತಕ್ಷಣ ಮಾಡಿ. ಈ ಅಭ್ಯಾಸವು ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸವನ್ನು ಪೂರ್ಣಗೊಳಿಸುವ ವೇಗವನ್ನು ಹೆಚ್ಚಿಸುತ್ತದೆ.
ಸರಿಯಾದ ಪ್ಲಾನ್ : ಮುಂದೂಡುವ ಅಭ್ಯಾಸವನ್ನು ಬಿಡಲು ಸರಿಯಾದ ವೇಳಾಪಟ್ಟಿ ರಚಿಸುವುದು ಬಹಳ ಮುಖ್ಯ. ದಿನ, ವಾರ ಅಥವಾ ತಿಂಗಳಿಗೆ ಒಂದು ಯೋಜನೆಯನ್ನು ಮಾಡಿ ಮತ್ತು ಅದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು. ಅದರಲ್ಲೂ ತುರ್ತು ಕೆಲಸಕ್ಕೆ ಆದ್ಯತೆ ನೀಡಬೇಕು.
ಸ್ಪಷ್ಟ ಗುರಿಗಳು: ನಿಮಗೆ ಏನು ಬೇಕು ಎಂದು ತಿಳಿಯದ ಹೊರತು ನೀವು ಯಾವುದೇ ಕೆಲಸವನ್ನು ಸರಿಯಾಗಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ತಿಳಿಯಿರಿ.
(ಏಜೆನ್ಸೀಸ್)
ಮನಸ್ಸಿನ ನಿಯಂತ್ರಣ : ಫೋನ್ಗಳು, ಸಾಮಾಜಿಕ ಮಾಧ್ಯಮ ಅಥವಾ ಟಿವಿಯಂತಹ ವಸ್ತುಗಳು ಹೆಚ್ಚಾಗಿ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನೀವು ಕೆಲಸ ಮಾಡುವಾಗ ಅವುಗಳಿಂದ ದೂರವಿದ್ದರೆ ಒಳ್ಳೆಯದು.