

Health tips: ಮಳೆಗಾಲ ಬಂತೆಂದರೆ ಸಾಕು ಜ್ವರ, ಶೀತ, ಕೆಮ್ಮು, ಮಲೇರಿಯಾ, ಡೆಂಗಿ ಈ ರೀತಿಯ ಹಲವಾರು ಕಾಯಿಲೆಗಳು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ವೈರಲ್ ಜ್ವರವು ಸೌಮ್ಯ ಸ್ವಭಾವವನ್ನು ಹೊಂದಿರುತ್ತದೆ. ಹಾಗೇ ಡೆಂಗ್ಯೂ ಇದು ಮೊದ ಮೊದಲು ಜ್ವರದಂತಹ ಲಕ್ಷಣಗಳಲ್ಲಿ ಪ್ರಾರಂಭವಾಗಿ ನಂತರ, ರೋಗಿಗಳಲ್ಲಿ ತೀವ್ರವಾಗಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಡೆಂಗ್ಯೂ ಜ್ವರವು ವೈರಸ್ ಸೋಕಿತ ಸೊಳ್ಳೆ ಕಡಿಯುವುದರಿಂದ ಬರುತ್ತದೆ. ಇದು ಮೊದಲು ಅಧಿಕ ಜ್ವರ, ಆಯಾಸ, ಹೊಟ್ಟೆನೋವು, ತಲೆನೋವು, ವಾಂತಿ, ವಾಕರಿಕೆ, ಜ್ವರ ಬಂದ 2 ದಿನಗಳ ನಂತರ ಚರ್ಮದ ಮೇಲೆ ಕಾಣುವ ದದ್ದುಗಳು ಈ ರೀತಿಯ ಸಮಸ್ಯೆಗಳಿಂದ ಡೆಂಗ್ಯೂ ಹರಡುತ್ತದೆ.
ಪಪಾಯಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಕಿಣ್ವವನ್ನು ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಇದು ಪ್ಲೇಟ್ಲೇಟ್ಸ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಸವನ್ನು ದಿನಕ್ಕೊಮ್ಮೆ ಸೇವಿಸುವುದರಿಂದ ದೇಹದಲ್ಲಿ ಪ್ಲೇಟ್ಲೇಟ್ಗಳ ಸಂಖ್ಯೆ ಕ್ಷೀಣಿಸುವುದಿಲ್ಲ.
ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಪ್ಲೇಟ್‌ಲೆಟ್ ಎಣಿಕೆಯನ್ನು ಹೆಚ್ಚಿಸಲು ಮತ್ತು ದೇಹದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಪ್ಲೇಟ್‌ಲೆಟ್ ಕಡಿಮೆಯಾಗಿವುದಿಲ್ಲ. ಜ್ವರದಿಂದ ಬೇಗನೆ ಗುಣಮುಖವಾಗಲು ಇದು ಸಹಾಯ ಮಾಡುತ್ತದೆ.
ಎಳನೀರು ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಡೆಂಗ್ಯೂ ಸಮಯದಲ್ಲಿ ದೇಹದ ನಿರ್ಜಲೀಕರಣವನ್ನು ತಡೆಗಟ್ಟಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುವುದರಿಂದ ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಕಿತ್ತಳೆ, ನಿಂಬೆ, ಮೂಸಂಬಿ, ನೆಲ್ಲಿಕಾಯಿ ಮತ್ತು ಕಿವಿ ಹಣ್ಣುಗಳಲ್ಲಿ ವಿಟಮಿನ್ ಸಿ ಇದ್ದು, ಇವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೀರ್ಘಕಾಲಿಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಈ ಹಣ್ಣುಗಳು ಡೆಂಗ್ಯೂ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಈ ಟೀಯಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೃದಯ,ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸಿ ಜೀರ್ಣಾಂಗ ಕಾರ್ಯವಾಗಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.ಹಾಗೆಯೇ ಈ ಬೆಳ್ಳುಳ್ಳಿ ಸೇವನೆಯು ಡೆಂಗ್ಯೂ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಸಿರು ತರಕಾರಿಗಳಲ್ಲಿ ವಿಟಮಿನ್ ಎ,ಸಿ,ಕೆ, ಕಬ್ಬಿಣ, ಮೆಗ್ನೀಶಿಯಂನಂತಹ ಅನೇಕ ಪೌಷ್ಟಿಕಾಂಶಗಳಿರುವುದರಿಂದ ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. (ಏಜೆನ್ಸೀಸ್)