

ಪ್ರಯಾಣ ಅಥವಾ ಪ್ರವಾಸವೆಂದರೆ ಯಾರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಪ್ರಯಾಣ ಎಲ್ಲರಿಗೂ ಖುಷಿ ಕೊಡುವುದಿಲ್ಲ. ಏಕೆಂದರೆ ಪ್ರಯಾಣಿಸುವಾಗ ಅನೇಕರಿಗೆ ವಾಕರಿಕೆ ಬರುತ್ತದೆ. ನಿಮಗೂ ಸಹ ಹೀಗೆ ಆಗುತ್ತಿದ್ದರೆ ಈ ಟಿಪ್ಸ್ ಅನ್ನು ಒಮ್ಮೆ ಪ್ರಯತ್ನಿಸಿ ನೋಡಿ...
ನಿಂಬೆ
ನಿಂಬೆ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ಪ್ರಯಾಣದ ಸಮಯದಲ್ಲಿ ವಾಂತಿ, ವಾಕರಿಕೆ ಮತ್ತು ಚಡಪಡಿಕೆಗೂ ಸಹಾಯ ಮಾಡುತ್ತದೆ. ಸಮಸ್ಯೆ ಉಲ್ಬಣಿಸಿದಾಗ ನಿಂಬೆಯನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಮರೆಯದಿರಿ. ನೀವು ಬಯಸಿದರೆ ನೀರಿನ ಬಾಟಲಿಯಲ್ಲಿ ನಿಂಬೆ ಪಾನಕವನ್ನು ಕೂಡ ಇಟ್ಟುಕೊಳ್ಳಬಹುದು. ಇದು ನಿಮಗೆ ಆರಾಮಾಗಿರಲು ಸಹಾಯ ಮಾಡುತ್ತದೆ.
ಬಾಳೆಹಣ್ಣು
ನೀವು ಸಾಮಾನ್ಯ ದಿನಗಳಲ್ಲಿ ಬಾಳೆಹಣ್ಣುಗಳನ್ನು ತಿನ್ನುತ್ತೀರಿ. ಆದರೆ ಪ್ರಯಾಣ ಮಾಡುವಾಗ ನಿಮ್ಮ ಬ್ಯಾಗ್‌ನಲ್ಲಿ ಬಾಳೆಹಣ್ಣುಗಳನ್ನು ಇಟ್ಟುಕೊಳ್ಳಿ. ಈ ಹಣ್ಣು ಪೊಟ್ಯಾಶಿಯಂ ಅನ್ನು ಪುನಃಸ್ಥಾಪಿಸುವ ಗುಣವನ್ನು ಹೊಂದಿದೆ ಮತ್ತು ವಾಂತಿಯಿಂದ ಉತ್ತಮ ಪರಿಹಾರವನ್ನು ನೀಡುತ್ತದೆ. ದೀರ್ಘ ಪ್ರಯಾಣದ ಸಮಯದಲ್ಲಿ ನಿಮಗೆ ವಾಕರಿಕೆ ಅಥವಾ ತಲೆತಿರುಗುವಿಕೆ ಕಂಡುಬಂದರೆ ಬಾಳೆಹಣ್ಣು ತಿನ್ನಿರಿ.
ಶುಂಠಿ
ಶುಂಠಿಯನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುತ್ತೇವೆ. ಆದರೆ ಪ್ರಯಾಣದ ಸಮಯದಲ್ಲಿ ನಿಮಗೆ ವಾಂತಿ ಸಮಸ್ಯೆ ಇದ್ದರೆ ಅದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಇದು ವಾಕರಿಕೆ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ತ್ವರಿತ ಪರಿಹಾರವನ್ನೂ ನೀಡುತ್ತದೆ. ನೀವು ಶುಂಠಿ ಕ್ಯಾಂಡಿ, ಶುಂಠಿ ಚಹಾ ಮತ್ತು ಶುಂಠಿ ಬೆರೆಸಿದ ಬಿಸಿನೀರನ್ನೂ ಪ್ಲಾಸ್ಕ್‌ನಲ್ಲಿ ಇಡಬಹುದು. ಇದರಿಂದ ಚಡಪಡಿಕೆ ದೂರವಾಗುತ್ತದೆ ಮತ್ತು ವಾಂತಿ ನಿಲ್ಲುತ್ತದೆ.