

ಬೆಂಗಳೂರು: ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೂ ಇದನ್ನು ಕೆಲವು ಪದಾರ್ಥಗಳೊಂದಿಗೆ ಸೇವಿಸಬಾರದು. ಹಾಲು ಮತ್ತು ಕೆಲವು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ದೇಹಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ.
*ಆಯುರ್ವೇದದ ಪ್ರಕಾರ, ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಬಾರದು. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ, ನಿಮಗೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಬಾಧಿಸಬಹುದು.
*ಹಾಲಿನೊಂದಿಗೆ ಹುಳಿ ಹಣ್ಣುಗಳನ್ನು ಸೇವಿಸುವುದೂ ಹಾನಿಕಾರಕವೆಂದು ಸಾಬೀತಾಗಿದೆ. ಒಂದು ವೇಳೆ ಈ ಮಿಶ್ರಣವನ್ನು ನೀವು ಒಟ್ಟಿಗೆ ಸೇವಿಸಿದ್ದೇ ಆದಲ್ಲಿ ವಾಂತಿ ಅಥವಾ ಹೊಟ್ಟೆ ನೋವಿನ ಸಮಸ್ಯೆಗಳು ಕಾಡಬಹುದು. ಆದ್ದರಿಂದ ಈ ಎರಡನ್ನೂ ಸೇವಿಸುವ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಬೇಕು.
*ಹಾಲಿನೊಂದಿಗೆ ಬೆಲ್ಲವನ್ನು ಸೇವಿಸಬಾರದು. ಈ ಎರಡು ಪದಾರ್ಥಗಳು ಒಟ್ಟಾಗಿ ಸೇವಿಸಿದರೆ ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು.
*ಹಾಗೆಯೇ ಮೀನು ಸೇವನೆಯ ನಂತರ ಹಾಲು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.