ಬೆನ್ನು ನೋವಿನಿಂದ ಮುಕ್ತಿ ಪಡೆಯಲು ಈ ವ್ಯಾಯಾಮ ಸಾಕು!: ಸಂಶೋಧನಾ ವರದಿ ಉಲ್ಲೇಖ | Back Pain

Back Pain
Published on

Back Pain: ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಈ ಒಂದು ಸರಳ ವ್ಯಾಯಾಮ ಅದನ್ನು ಮುಕ್ತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಕೆಲ ವರದಿಗಳು ಉಲ್ಲೇಖಿಸಿವೆ.

ವಿಶ್ವದಾದ್ಯಂತ 600 ಮಿಲಿಯಲ್​ಗೂ ಅಧಿಕ ಜನರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಇದು ಉತ್ಪ್ರೇಕ್ಷೆಯಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (WHO) 2020ರ ಅಂಕಿಅಂಶಗಳ ಪ್ರಕಾರ, 619 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2025ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು.

ದೈನಂದಿನ ಜಂಜಾಟ, ಕೆಲಸದ ಒತ್ತಡ ಹಿನ್ನೆಲೆ ನೀವು ವ್ಯಾಯಾಮ ಮಾಡದೇ ಇರುವುದು ಸಾಮಾನ್ಯ. ಆದರೆ, ಬೆನ್ನು ನೋವು ಹೆಚ್ಚಳವಾಗಬಾರದೆಂದರೆ ದಿನಕ್ಕೆ ಒಂದು 20 ನಿಮಿಷ ನಡಿಗೆ ಮಾಡಿದ್ರೆ ಸಾಕು ಎನ್ನುತ್ತೀವೆ ಸಂಶೋಧನಾ ವರದಿಗಳು. ಹೌದು, ನಡಿಗೆಯು ಬೆನ್ನು ನೋವನ್ನು ಕಡಿಮೆ ಮಾಡಲು ಮತ್ತು ತಡೆಯಲು ನಿಮಗೆ ಸಹಾಯ ಮಾಡುತ್ತದೆ.

ವರದಿಗಳು ಹೇಳೊದೇನು?

The Lancetನಲ್ಲಿ ಪ್ರಕಟವಾದ ಮ್ಯಾಕ್ವೇರಿ ವಿಶ್ವವಿದ್ಯಾಲಯದ ಸ್ಪೈನಲ್ ಪೇನ್ ರಿಸರ್ಚ್ ಗ್ರೂಪ್ ನಡೆಸಿದ ಕ್ಲಿನಿಕಲ್ ಟ್ರಯಲ್‌ ಪ್ರಕಾರ, ನಡಿಗೆಯೂ ಬೆನ್ನು ನೋವನ್ನು ಕೇವಲ ನಿಯಂತ್ರಣದಲ್ಲಿಡುದಲ್ಲದೆ, ಪೂರ್ತಿಯಾಗಿ ವಾಸಿ ಮಾಡುವಲ್ಲಿ ಸಹಾಯ ಮಾಡುತ್ತದೆ. ನಡಿಗೆ ಎಂಬ ಸರಳ ಮತ್ತು ಎಲ್ಲರಿಗೂ ಸಾಧ್ಯವಾದ ವ್ಯಾಯಾಮ, ಹೆಚ್ಚುವರಿ ವೆಚ್ಚವಿಲ್ಲದೆ ಅಥವಾ ಉಪಕರಣಗಳಿಲ್ಲದೆ ಬೆನ್ನುನೋವಿಗೆ ಪರಿಣಾಮಕಾರಿಯಾದ ಪರಿಹಾರ ನೀಡಬಹುದು ಎಂದು ಈ ಅಧ್ಯಯನ ಹೇಳಿದೆ.

ಕ್ಲಿನಿಕಲ್ ಟ್ರಯಲ್‌ ನಡೆದಿದ್ದೇಗೆ?

ಈ ಅಧ್ಯಯನಕ್ಕಾಗಿ ಸಂಶೋಧಕರು  ಬೆನ್ನುನೋವಿನಿಂದ ಬಳಲುತ್ತಿದ್ದ 701 ವಯಸ್ಕರನ್ನ ಆಯ್ಕೆ ಮಾಡಿಕೊಂಡು ಅವರಿಗೆ 6 ತಿಂಗಳ ಕಾಲ ವಾಕಿಂಗ್ ಮತ್ತು ಫಿಸಿಯೋಥೆರಪಿ ಸೆಷನ್‌ಗಳನ್ನು ನಡೆಸಿದ್ದರು. ಈ ಚಿಕಿತ್ಸೆಯಲ್ಲಿ ಭಾಗವಹಿಸಿದರಿಗೆ 1 ರಿಂದ 3 ವರ್ಷಗಳ ನಂತರ ವಾಕಿಂಗ್​ನಿಂದ ಬೆನ್ನು ನೋವು ಕಡಿಮೆಯಾಗಿದ್ದನ್ನ ಕಂಡುಕೊಂಡಿದ್ದಾರೆ.  ಸಂಶೋಧಕರ ಪ್ರಕಾರ, ಬೆನ್ನು ನೋವು ಅನುಭವಿಸಿ ಚೇತರಿಸಿಕೊಂಡವರಲ್ಲಿ 10 ಮಂದಿಯಲ್ಲಿ 7 ಮಂದಿಗೆ ಒಂದು ವರ್ಷದೊಳಗೆ ಮತ್ತೆ ಆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ ಸಾಮಾನ್ಯ ಎನ್ನಲಾಗಿದೆ.(ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net