ಶಂಕಿತ ನಾಲ್ವರು ಅಲ್​ ಖೈದಾ ಉಗ್ರರನ್ನು ಬಂಧಿಸಿದ ಭಯೋತ್ಪಾದಕ ನಿಗ್ರಹದಳ | Terrorists

terrorists ats
Published on

Terrorists: ನಕಲಿ ನೋಟು ದಂಧೆ ಮತ್ತು ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್​ ಖೈದಾ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರನ್ನ ಗುಜರಾತ್ ಭಯೋತ್ಪಾದಕ ನಿಗ್ರಹದಳ (ಎಟಿಎಸ್​) ಅಧಿಕಾರಿಗಳು ಬಂಧಿಸಿದ್ದಾರೆ.

ಶಂಕಿತ ಉಗ್ರರಾದ ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ ಹಾಗೂ ಜೀಶನ್ ಅಲಿಯನ್ನ ಬುಧವಾರ ಗುಜರಾತ್​ನಲ್ಲಿ ಎಟಿಎಸ್ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅದರಲ್ಲಿ ಓರ್ವನನ್ನ ಅನ್ಯ ರಾಜ್ಯದಿಂದ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಶಂಕಿತ ಉಗ್ರರು ಬಹಳ ಸಮಯದಿಂದ ಅಲ್-ಖೈದಾ ಸಂಘಟನೆ ಜೊತೆ ಸಂಬಂಧ ಹೊಂದಿದ್ದು, ಅಲ್​ ಖೈದಾ ಸಿದ್ಧಾಂತವನ್ನ ಹರಡಲು ಸಾಮಾಜಿಕ ಮಾಧ್ಯಮಗಳು ಮತ್ತು ಅನುಮಾನಸ್ಪದ ಅಪ್ಲಿಕೇಶನ್​ಗಳನ್ನ ಬಳಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net