Washing Clothes : ರಾತ್ರಿ ಬಟ್ಟೆ ಒಗೆಯಬಾರದು ಯಾಕೆ ಗೊತ್ತಾ?

clothes
Published on

Washing Clothes: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಒತ್ತಡದ ಜೀವನದಲ್ಲಿ ಯಾವ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಜಾನೆ ಮಾಡಬೇಕಾದ ಕೆಲಸಗಳು ರಾತ್ರಿ, ರಾತ್ರಿ ಮಾಡಬೇಕಾದ ಕೆಲಸಗಳನ್ನು ಮುಂಜಾನೆ ಮಾಡುತ್ತಿದ್ದಾರೆ.

ನಗರಗಳಲ್ಲಿ ವಾಸಿಸುವವರ ಜೀವನ ತಿನ್ನುವುದು ಮತ್ತು ಕುಡಿಯುವುದರಿಂದ ಹಿಡಿದು ಬಟ್ಟೆ ಒಗೆಯುವವರೆಗೆ ಪ್ರತಿಯೊಂದು ವಿಷಯವೂ ಬದಲಾಗಿದೆ. ಬೆಳಗ್ಗೆ ಆಫೀಸ್ ಕೆಲಸಕ್ಕೆ ತರಾತುರಿಯಲ್ಲಿ ಹೋಗಿ ಸಂಜೆ ಮನೆಗೆ ಬಂದ ನಂತರ ಮನೆ ಕೆಲಸ ಮಾಡಿ ಮುಗಿಸಿಕೊಳ್ಳುತ್ತಾರೆ. ನಾವು  ಸಂಜೆ ಬಟ್ಟೆಯನ್ನು ಯಾಕೆ ವಾಶ್​​ ಮಾಡಬಾರದು ಎನ್ನುವ ಕುರಿತಾಗಿ ತಿಳಿಸಿ ಕೊಡಲಿದ್ದೇವೆ...

ವಾಸ್ತು ಪ್ರಕಾರ, ಕೊಳಕು ಬಟ್ಟೆ ಒಗೆಯಲು ಸರಿಯಾದ ಸಮಯವಿದೆ. ಅದಕ್ಕಾಗಿಯೇ ರಾತ್ರಿಯ ಬದಲು ಬೆಳಿಗ್ಗೆ ಬಟ್ಟೆ ಒಗೆಯಬೇಕು ಎಂದು ಹೇಳಲಾಗುತ್ತದೆ. ಆದರೆ ಮುಂಜಾನೆ ತರಾತುರಿಯಲ್ಲಿ ಕೆಲಸಕ್ಕೆ ಹೋಗುವವರು ರಾತ್ರಿ ವೇಳೆ ಸಮಯ ವ್ಯರ್ಥ ಮಾಡದೆ ಎಲ್ಲ ಕೆಲಸಗಳನ್ನು ಮುಗಿಸಬೇಕು ಎಂದು ಭಾವಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ಬಟ್ಟೆ ಒಗೆಯುವುದು ಸರಿಯಲ್ಲ.

ರಾತ್ರಿ ಬಟ್ಟೆ ಒಗೆದರೆ ಒದ್ದೆ ಬಟ್ಟೆಯನ್ನು ಹೊರಗೆ ಒಣಗಿಸಬೇಡಿ. ಇದು ಸಂತೋಷ ಮತ್ತು ಯೋಗಕ್ಷೇಮವನ್ನು ತಡೆಯುತ್ತದೆ.

monsoon clothing care tips

ಯಾವಾಗಲೂ ಸೂರ್ಯೋದಯದ ನಂತರವೇ ಬಟ್ಟೆ ಒಗೆಯುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ತೊಳೆದ ಬಟ್ಟೆಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಉತ್ತಮ.

ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದಲ್ಲದೆ, ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಯಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳು ಸಹ ನಾಶವಾಗುತ್ತವೆ.

ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿಯಲ್ಲಿ ನೆಗೆಟಿವ್ ಎನರ್ಜಿ ಜಾಸ್ತಿ ಇರುತ್ತದೆ. ರಾತ್ರಿ ಬಟ್ಟೆ ಒಗೆದು ಹೊರಗೆ ಒಣಗಿಸುವುದರಿಂದ ಬಟ್ಟೆಗೆ ನೆಗೆಟಿವ್ ಎನರ್ಜಿ ಸೇರುತ್ತದೆ.

ನೀವು ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಗಳನ್ನು ಧರಿಸಿದಾಗ, ಆರೋಗ್ಯಕ್ಕಾಗಿ ಧನಾತ್ಮಕ ಶಕ್ತಿಯು ದೇಹದಲ್ಲಿ ಹರಡುತ್ತದೆ.

ಶೀತಕ್ಕೆ ಬಟ್ಟೆಯಲ್ಲಿರುವ ಸೂಕ್ಷ್ಮಜೀವಿಗಳು ಅದರಲ್ಲಿ ಉಳಿಯುತ್ತವೆ. ಚಳಿಯಲ್ಲಿ ಒಣಗಿದ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಹಾನಿಕರ. ನಕಾರಾತ್ಮಕ ಶಕ್ತಿಯು ದೇಹಕ್ಕೆ ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಇನ್ನು ಮುಂದೆ ರಾತ್ರಿ ಬಟ್ಟೆ ಒಗೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net