Rooster : ಸೂರ್ಯೋದಯಕ್ಕೆ ಮುಂಚೆ ಕೋಳಿ ಕ್ಕೋ ಕ್ಕೋ ಕ್ಕೋ.. ಕೂಗೋದು ಯಾಕೆ ಗೊತ್ತಾ?

Rooster
Published on

Rooster :  ನಗರಗಳಲ್ಲಿ ಮುಂಜಾನೆ ಬೇಗ ಏಳುವುದು ಕಷ್ಟವಾದರೂ ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಬೇಗ ಎದ್ದು ತಮ್ಮ ಕೆಲಸ ಆರಂಭಿಸುತ್ತಾರೆ. ಕೋಳಿ  ಕೂಗಿದರೆ ಬೆಳಗಾಗಿದೆ ಎಂದು ಅರ್ಥ ಎನ್ನುತ್ತಿದ್ದರು. ಮುಂಜಾನೆ ಏಳಬೇಕು ಎಂಬ ಭಾವನೆಯನ್ನು  ನಮ್ಮ ಹಿರಿಯರು ಪರಿಗಣಿಸುತ್ತಿದ್ದರು. ಆದರೆ ಇಂದು  ಅಲಾರಾಂ ಇಟ್ಟುಕೊಂಡು ಎಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಿಜವಾದ ಕೋಳಿ ಮುಂಜಾನೆ ಹೇಗೆ ಕೂಗುತ್ತದೆ? ಅನೇಕ ಜನರು ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಸೂರ್ಯೋದಯಕ್ಕೆ ಮುನ್ನ ಹುಂಜ ಕೂಗುತ್ತದೆ. ಆದರೆ ಇದರ ಹಿಂದಿನ ವೈಜ್ಞಾನಿಕ ಕಾರಣ ಹೊರಬಿದ್ದಿದೆ.  ಕೋಳಿ ಮಾನವನಿಗಿಂತ 45 ನಿಮಿಷ ಮುಂಚಿತವಾಗಿ ಬೆಳಕನ್ನು ನೋಡುತ್ತದೆ. ಕೋಳಿಗೆ ಸೂರ್ಯೋದಯ ಬರಲಿದೆ ಎಂದು ತಿಳಿದು ಕೂಗುತ್ತದೆ.

ಬೆಳಕಿನ ಸಂಕೇತವಾಗಿ ಕೋಳಿ ಕೂಗುತ್ತದೆ. ಕೋಳಿಗಳು ಸಾಮಾನ್ಯ ಸಮಯಕ್ಕಿಂತ ಮುಂಜಾನೆ ಹೆಚ್ಚು ಇಷ್ಟಪಡುತ್ತವೆ.  ಕೋಳಿ ಕೂಗಿದ್ದರಿಂದ  ಬೆಳಗಾಯಿತ್ತು ಎಂದು ಭಾವಿಸಿ ಹಳ್ಳಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.

ಕೋಳಿಯ ದೇಹವು ‘ಸಿರ್ಕಾಡಿಯನ್ ರಿದಮ್’ ಎಂದು ಕರೆಯಲ್ಪಡುವ ಆಂತರಿಕ ಗಡಿಯಾರವನ್ನ ಹೊಂದಿದೆ. ದಿನವಿಡೀ ಏನು ಮಾಡಬೇಕು (24 ಗಂಟೆಗಳ ಚಕ್ರ), ಯಾವಾಗ ಮಲಗಬೇಕು ಮತ್ತು ಯಾವಾಗ ಎಚ್ಚರಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತದೆ. ಸೂರ್ಯ ಉದಯಿಸಿದಾಗ ಮತ್ತು ಮುಳುಗಿದಾಗ ಏನು ಮಾಡಬೇಕೆಂದು ಕೋಳಿಗೆ ಇದು ಹೇಳುತ್ತದೆ. ಸೂರ್ಯ ಉದಯಿಸಲು ಪ್ರಾರಂಭಿಸಿದಾಗ, ಸಿರ್ಕಾಡಿಯನ್ ರಿದಮ್ ಕೋಳಿಗೆ ಸಂಕೇತಿಸುತ್ತದೆ. ಅಲ್ಲಿಯವರೆಗೆ ಮಲಗಿದ್ದ ಕೋಳಿ, ಹೊಸ ದಿನ ಪ್ರಾರಂಭವಾಗಲಿದೆ ಎಂದು ತಿಳಿದು, ಎದ್ದು ಜೋರಾಗಿ ಕೂಗುತ್ತಾದೆ. ಕೋಳಿಗಳು ಸಹ ಈ ಜೈವಿಕ ಗಡಿಯಾರವನ್ನು ಹೊಂದಿವೆ. ಆದರೆ ಇದು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಇದು ಯಾವಾಗ ಮೊಟ್ಟೆಗಳನ್ನ ಇಡಬೇಕು ಎಂದು ಮಾತ್ರ ಹೇಳುತ್ತದೆ.

ಕೋಳಿಯ ಕಣ್ಣುಗಳು ತುಂಬಾ ಬುದ್ಧಿವಂತ ಮತ್ತು ಸೂಕ್ಷ್ಮವಾಗಿವೆ. ಸೂರ್ಯ ಉದಯಿಸಿದಾಗ, ಅಲ್ಲಿ ಸ್ವಲ್ಪ ಬೆಳಕು ಬರುತ್ತೆ ಮತ್ತು ಕೋಳಿಯ ಕಣ್ಣುಗಳು ತಕ್ಷಣ ಆ ಬೆಳಕನ್ನ ಗ್ರಹಿಸಿ ಮೆದುಳಿಗೆ ಸಂಕೇತವನ್ನ ಕಳುಹಿಸುತ್ತವೆ. ನಂತ್ರ ಅದು ಕೂಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net