ಕಿವಿ ಅಂದ್ರೆ ಬರಿ ಕೇಳಿಸಿಕೊಳ್ಳೋದಕ್ಕೆ ಮಾತ್ರ ಅಲ್ಲ! ಇದರ ಹಿಂದೆ ಅಡಗಿದೆ ಜೀವನದ ಅತಿದೊಡ್ಡ ರಹಸ್ಯ! Life depends on your Ears

ಕಿವಿ ಹಿಂದೆ ಅಡಗಿದೆ ಜೀವನದ ಅತಿದೊಡ್ಡ ರಹಸ್ಯ! Life depends on your Ears
ಕಿವಿ ಹಿಂದೆ ಅಡಗಿದೆ ಜೀವನದ ಅತಿದೊಡ್ಡ ರಹಸ್ಯ! Life depends on your Ears
Published on

ಪ್ರಮುಖ ಮುಖ್ಯಾಂಶಗಳು

  • ನಿಮಗೆ ಗೊತ್ತಾ ನಮ್ಮ ಇಡೀ ಜೀವನ ಕಿವಿ ನಮ್ಮ ಮೇಲೆ ಅವಲಂಬಿತವಾಗಿದೆ
  • ಕಿವಿ ಇಲ್ಲದಿದ್ರೆ ನೀವು ಒಂದು ಹೆಜ್ಜೆಯೂ ಸರಿಯಾಗಿ ಇಡಲಾರಿರಿ! ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ
  • ಕಿವಿಗೂ ಜೀವನಕ್ಕೂ ಏನು ಸಂಬಂಧ ಎಂಬ ನಿಮ್ಮ ಪ್ರಶ್ನೆಗೂ ಉತ್ತರ ಇಲ್ಲಿದೆ
Life depends on your Ears : ಈ ಮೇಲಿನ ಶೀರ್ಷಿಕೆ ಓದಿದ ನಂತರ ಒಂದು ಕ್ಷಣ ಅಚ್ಚರಿಗೊಳ್ಳಬಹುದು. ಇಡೀ ಜೀವನ ಕಿವಿಯ ಮೇಲೆ ಹೇಗೆ ಅವಂಬಿತವಾಗಿರುತ್ತದೆ ಎಂದು ಚಿಂತಿಸುತ್ತಿರಬಹುದು. ಕಿವಿಗೂ ಜೀವನಕ್ಕೂ ಏನು ಸಂಬಂಧ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ನೀವು ಸಹವಾಸ ದೋಷ ಎಂಬ ಪದವನ್ನು ಕೇಳಿರಬಹುದು. ನಮ್ಮ ಹಿರಿಯರು ಆಗಾಗ ಈ ಪದವನ್ನು ಹೇಳುತ್ತಿರುತ್ತಾರೆ. ನಿಮ್ಮ ಸ್ನೇಹಿತರು ಹೇಗಿರುತ್ತಾರೋ ಅದೇ ನೀವು ಇರುತ್ತೀರಿ ಎಂದರ್ಥ. ನೀವು ಯಾರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರೋ ಅವರಂತೆಯೇ ಆಗುತ್ತೀರಿ ಎನ್ನುವ ಅರ್ಥ ಸೂಚಿಸುತ್ತದೆ. ಅದಕ್ಕಾಗಿಯೇ ಕೆಟ್ಟ ಸ್ನೇಹವನ್ನು ನಿಲ್ಲಿಸಲು ಹಿರಿಯರು ಹೇಳುತ್ತಾರೆ. ಅಂದರೆ, ಗಾಂಜಾ ತೋಟದಲ್ಲಿ ತುಳಸಿ ಮರ ಬೆಳೆಯುವುದು ಅಸಾಧ್ಯ. ಅದೇ ರೀತಿ ನೀವು ನಿಮ್ಮ ಕಿವಿಯಲ್ಲಿ ಏನು ಕೇಳುತ್ತೀರೋ ಅದನ್ನೇ ನೀವು ಮಾಡುತ್ತೀರಿ.
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಏನೇ ಕೇಳಿದರೂ ಅದು ಮೆದುಳಿನಲ್ಲಿ ಶೇಖರಣೆಯಾಗುತ್ತದೆ. ನೀವು ಕೆಟ್ಟ ಪದಗಳನ್ನು ಕೇಳಿದರೆ ಮತ್ತು ಕೆಟ್ಟದ್ದನ್ನು ಯೋಚಿಸಿದರೆ, ನೀವು ಕೆಟ್ಟದ್ದನ್ನು ಮಾಡಲು ಸಹ ಯೋಚಿಸುತ್ತೀರಿ. ನೀವು ಸಕಾರಾತ್ಮಕ ಪದಗಳು ಮತ್ತು ಉತ್ತಮ ಸ್ನೇಹಿತರ ಜೊತೆ ಮಾತನಾಡಿದರೆ, ನೀವು ಉತ್ತಮ ಆಲೋಚನೆಗಳನ್ನು ಹೊಂದಬಹುದು ಮತ್ತು ಜೀವನವನ್ನು ಆರಾಮವಾಗಿ ಬದುಕಬಹುದು. ಅದಕ್ಕಾಗಿಯೇ ನಿಮ್ಮ ಜೀವನವು ನಿಮ್ಮ ಕಿವಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ, ಯಾವಾಗಲೂ ಅದರ ಬಗ್ಗೆ ಯೋಚಿಸಿ. ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಆಲಿಸಿ. ಆತಗ ಖಂಡಿತ ಯಶಸ್ಸು ಸಿಗುತ್ತದೆ. ಕೆಟ್ಟದ್ದಕ್ಕೆ ಕಿವಿಗೊಡಬೇಡಿ ಎಂದು ಹಿರಿಯರು ಹೇಳುವುದು ಕೂಡ ಇದಕ್ಕೇನೆ. ಆದ್ದರಿಂದ ಬೆಳಿಗ್ಗೆ ಎದ್ದು ನಿಮ್ಮ ಕಿವಿಗೆ ಇಷ್ಟವಾಗುವ ಸಂಗೀತವನ್ನು ಕೇಳಿ. ಮನಸ್ಸಿಗೆ ನೆಮ್ಮದಿ ತರುವ ಮಾತುಗಳನ್ನು ಆಲಿಸಿ. ಆಗ ನಿಮ್ಮ ಜೀವನ ಚೆನ್ನಾಗಿರುತ್ತದೆ.
ಅಂದಹಾಗೆ, ಕಿವಿಯು ಕೇವಲ ಶಬ್ದವನ್ನು ಕೇಳುವ ಅಂಗವಲ್ಲ, ಬದಲಾಗಿ ನಮ್ಮ ಜೀವನದ ದೈನಂದಿನ ಚಟುವಟಿಕೆಗಳಾದ ನಡೆಯುವುದು, ನಿಲ್ಲುವುದು ಮತ್ತು ಸಮತೋಲನ ಕಾಯ್ದುಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಕಿವಿಯ ಒಳಗಿರುವ 'ವೆಸ್ಟಿಬುಲರ್ ಸಿಸ್ಟಮ್' ಎಂಬ ಸಂಕೀರ್ಣ ವ್ಯವಸ್ಥೆಯು ನಮ್ಮ ದೇಹದ 'ಗೈರೊಸ್ಕೋಪ್' ರೀತಿ ಕೆಲಸ ಮಾಡುತ್ತದೆ. ಇದರಲ್ಲಿರುವ ಸಣ್ಣ ದ್ರವ ತುಂಬಿದ ನಾಳಗಳು ಮತ್ತು ಸೂಕ್ಷ್ಮ ಕೂದಲುಗಳು ನಾವು ತಲೆ ತಿರುಗಿಸಿದಾಗ ಅಥವಾ ದೇಹವನ್ನು ಚಲಿಸಿದಾಗ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತವೆ. ಇದರಿಂದಾಗಿ ನಾವು ಕತ್ತಲಲ್ಲಿ ನಡೆದಾಗ ಅಥವಾ ಅಸಮತೋಲಿತ ಜಾಗದಲ್ಲಿ ನಿಂತಾಗಲೂ ಬೀಳದಂತೆ ನಮ್ಮ ದೇಹವು ತನ್ನನ್ನು ತಾನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಒಂದು ವೇಳೆ ಕಿವಿಯ ಒಳಗಿನ ಈ ಸಮತೋಲನ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾದರೆ, ನಮಗೆ ವಿಪರೀತ ತಲೆಸುತ್ತು, ವಾಕರಿಕೆ ಮತ್ತು ನಡೆಯುವಾಗ ಸಮತೋಲನ ತಪ್ಪುವಿಕೆ ಉಂಟಾಗುತ್ತದೆ. ಅಂದರೆ, ನಮ್ಮ ಕಿವಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಾವು ಒಂದು ಸರಳವಾದ ಹೆಜ್ಜೆಯನ್ನು ಇಡಲೂ ಕಷ್ಟಪಡಬೇಕಾಗುತ್ತದೆ. ಕಿವಿಯ ಆರೋಗ್ಯವು ಕೇವಲ ಶ್ರವಣ ಶಕ್ತಿಯ ಮೇಲೆ ಮಾತ್ರವಲ್ಲ, ನಮ್ಮ ಒಟ್ಟಾರೆ ದೈಹಿಕ ಸ್ಥಿರತೆ ಮತ್ತು ಆತ್ಮವಿಶ್ವಾಸದ ಮೇಲೂ ನೇರ ಪ್ರಭಾವ ಬೀರುತ್ತದೆ. ಆದ್ದರಿಂದಲೇ, ನಮ್ಮ ಜೀವನದ ಪ್ರತಿ ಚಲನೆಯೂ ಕಿವಿಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net