ನೆನೆಸಿಟ್ಟ ಒಣದ್ರಾಕ್ಷಿ ಪ್ರತಿದಿನ ತಿಂದ್ರೆ ಏನೆಲ್ಲಾ ಲಾಭಗಳು ಗೊತ್ತೆ!; ಇಲ್ಲಿದೆ ಉಪಯುಕ್ತ ಮಾಹಿತಿ | Soaked Raisins

dk - 2025-04-09T210955.548
Published on

Soaked Raisins: ಮನುಷ್ಯನ ಆರೋಗ್ಯಕ್ಕೆ ಒಣದ್ರಾಕ್ಷಿ ತುಂಬಾ ಪೌಷ್ಠಿಕ ಹಾಗೂ ಪ್ರಯೋಜನಕಾರಿಯಾಗಿದೆ. ಅಲ್ಲದೆ, ರಾತ್ರಿವಿಡೀ ನೀರಿನಲ್ಲಿ ನೆನೆಸಿಟ್ಟ ಪ್ರತಿದಿನ ಬೆಳಗ್ಗೆ ತಿಂದರೆ ಅದ ಪೌಷ್ಠಿಕಾಂಶದ ಗುಣಗಳು ದ್ವಿಗುಣಗೊಳ್ಳುತ್ತದೆ. ಸಾಮಾನ್ಯ ದ್ರಾಕ್ಷಿಗಿಂತ ಅಧಿಕ ಪ್ರಯೋಜಕಾರಿ ಎಂದು ವೈದ್ಯರು ಹೇಳುತ್ತಾರೆ.

ನೆನೆಸಿದ ಒಣದ್ರಾಕ್ಷಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಹೃದಯ, ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ನೆನಸಿಟ್ಟ ಒಣದ್ರಾಕ್ಷಿ ತಿಂದ್ರೆ ಏನೆಲ್ಲಾ ಲಾಭ..?

1.ಜೀರ್ಣಾಂಗ ವ್ಯವಸ್ಥೆ ಬಲಪಡಿಸಲು

ನೆನೆಸಿದ ಒಣದ್ರಾಕ್ಷಿಯಲ್ಲಿ ಸಾಕಷ್ಟು ಫೈಬರ್​ ಅಂಶವಿದ್ದು, ಇದು ಜೀರ್ಣಂಗಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಮಲಬದ್ಧತೆ, ಅನಿಲ ಮತ್ತು ಅಜೀರ್ಣ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದು ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ದೇಹವು ಹಗುರ ಮತ್ತು ಸಕ್ರಿಯವಾಗಿರುವಂತೆ ಮಾಡುತ್ತದೆ.

2.ರಕ್ತಹೀನತೆ ಗುಣ

ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಶ ಅಧಿಕ ವಿದ್ದು, ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ರಕ್ತಹೀನತೆ ದೂರವಾಗುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಹರಿವು ಸುಧಾರಿಸುತ್ತದೆ.

3.ಮೂಳೆಗಳ ಬಲ

ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಮತ್ತು ಬೋರಾನ್​ನಂತಹ ಖನಿಜಗಳು ಅಧಿಕವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಅಲ್ಲದೆ,ಇದು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಮೂಳೆ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಮೂಳೆಯ ಬಲವನ್ನು ಕಾಪಾಡಿಕೊಳ್ಳಲು ಒಣದ್ರಾಕ್ಷಿ ತಿನ್ನುವುದು ಪ್ರಯೋಜನಕಾರಿ.

4.ಹೃದಯ ಆರೋಗ್ಯ

ಒಣದ್ರಾಕ್ಷಿಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಶೀತ, ಕೆಮ್ಮು ಮತ್ತು ಇತರ ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ದೇಹವು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಡೆಯುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net