

Sleep : ಮಧ್ಯಾಹ್ನ ಊಟದ ನಂತರ ಹಲವರು ಸಾಮಾನ್ಯವಾಗಿ ಮಲಗಿಕೊಳ್ಳುವ ರೂಢಿಯಲ್ಲಿರುತ್ತದೆ. ಈ ಸಣ್ಣ ನಿದ್ರೆ ದೇಹದ ಶಕ್ತಿಯನ್ನು ಮರುಪೂರ್ಣಗೊಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇನ್ನು ಕೆಲವರು ಮಧ್ಯಾಹ್ನನ ಮಲಗೋದು ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಅಲ್ಲದೆ, ಇದು ನಿದ್ರೆಯಲ್ಲ ಸೋಮಾರಿತನ ಎಂದು ವಾದಿಸುತ್ತಾರೆ. ಹೀಗಾಗಿ, ಮಧ್ಯಾಹ್ನನ ಮಲಗೋದು ಒಳ್ಳೆಯದೋ? ಕೆಟ್ಟದ್ದೋ? ತಜ್ಞರು ಹೇಳೊದೇನು ತಿಳಿಯೋಣ.
ಮಧ್ಯಾಹ್ನ ಸಲ್ಪಹೊತ್ತು ರಿಲ್ಯಾಕ್ಸ್ಗೆ ನಿದ್ದೆ ಒಳ್ಳೆಯದ್ದೆ. ಆದರೆ, 1 ಗಂಟೆಗಿಂತ ಅಧಿಕ ನಿದ್ರೆ ಮಾಡಿದರೆ, ಅದು ನಿಮ್ಮ ರಾತ್ರಿಯ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ರಾತ್ರಿಯಲ್ಲಿ ಮಲಗುವುದು ತೊಂದರೆಯುಟು ಮಾಡುತ್ತದೆ. ಅಲ್ಲದೆ, ದೇಹದ ನಿದ್ದೆಯ ಚಕ್ರದ ಮೇಲೆ ಪರಿಣಾಮವಾಗಬಹುದು.
1. ಸಂಜೆ 4 ಗಂಟೆಯ ನಂತರ ಮಧ್ಯಾಹ್ನದ ನಿದ್ರೆ ಮಾಡಬಾರದು. ದೀರ್ಘ ನಿದ್ರೆಯಿಂದ ತಲೆನೋವು ಮತ್ತು ಅರೆನಿದ್ರಾವಸ್ಥೆ ಉಂಟಾಗಬಹುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರು ಜಾಗರೂಕರಾಗಿರಬೇಕು.
2. ಮಧ್ಯಾಹ್ನ ನಿದ್ರೆ ಮಕ್ಕಳಿಗೆ ಪ್ರಯೋಜನಕಾರಿ ಮತ್ತು ವೃದ್ಧರಿಗೆ ಅವಶ್ಯಕ. ಕೆಲಸ ಮಾಡುವ ವೃತ್ತಿಪರರು ಹಗಲು ನಿದ್ರೆ ಮಾಡಬಹುದು.
3. ರಾತ್ರಿ ಪೂರ್ಣ ನಿದ್ರೆ ಪಡೆಯುವವರಿಗೆ ಮಧ್ಯಾಹ್ನದ ನಿದ್ರೆ ಅನಿವಾರ್ಯವಲ್ಲ.
4. ನಿಮಗೆ ಸಾಕಷ್ಟು ನಿದ್ರೆ ಬರುತ್ತಿಲ್ಲ ಅಥವಾ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಮಧ್ಯಾಹ್ನದ ನಿದ್ರೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಬಹುದು.
5. ಮಧ್ಯಾಹ್ನ 20-30 ನಿಮಿಷಗಳಿಗಿಂತ ಹೆಚ್ಚು ಕಾಲ ಮಲಗಬೇಡಿ, ಶಾಂತ ಮತ್ತು ಕತ್ತಲೆಯ ಸ್ಥಳವನ್ನು ಆರಿಸಿ, ಊಟದ ನಂತರ ತಕ್ಷಣ ಮಲಗಬೇಡಿ, ನಿಯಮಿತ ನಿದ್ರೆಯ ಸಮಯವನ್ನು ಇಟ್ಟುಕೊಳ್ಳಿ ಮತ್ತು ಎದ್ದ ನಂತರ 1 ಗ್ಲಾಸ್ ನೀರು ಕುಡಿಯಿರಿ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.