ಪ್ರತಿದಿನ ಮೊಟ್ಟೆ ತಿಂದರೆ ಕೆಟ್ಟ ಕೊಲೆಸ್ಟ್ರಾಲ್​ ಹೆಚ್ಚಾಗುತ್ತದೆಯೇ? ಇಲ್ಲಿದೆ ನೋಡಿ ಉತ್ತರ... Eggs

Eggs
Published on

Eggs : ಮೊಟ್ಟೆಯು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಇದನ್ನು ಬೆಳಗಿನ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಯಾವಾಗ ಬೇಕಾದರೂ ಸೇವಿಸಬಹುದು. ಮೊಟ್ಟೆ ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಮೊಟ್ಟೆ ಪೋಷಕಾಂಶಗಳು ಆಗರವಾಗಿದೆ. ಅಲ್ಲದೆ, ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಾಗುತ್ತದೆ ನಂಬಿಕೆಯು ಕೆಲ ಜನರಲ್ಲಿದೆ. ಹಾಗಾದ್ರೆ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆಯೇ ಎಂಬುದನ್ನು ನಾವೀಗ ನೋಡೋಣ.

ಅಂದಹಾಗೆ ಮೊಟ್ಟೆಗಳು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ತೂಕ ನಷ್ಟ ಅಥವಾ ಸ್ನಾಯುಗಳ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಹಳದಿ ಲೋಳೆಯು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹಲವರು ಹೇಳುತ್ತಾರೆ.

ಚಿಕಾಗೋದ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅದರಲ್ಲಿ, ಪ್ರತಿದಿನ ಸೇವಿಸುವ ಪ್ರತಿ ಅರ್ಧ ಮೊಟ್ಟೆಯು ಹೃದಯರಕ್ತನಾಳದ ಕಾಯಿಲೆಯ ಶೇ. 6 ರಷ್ಟು ಅಪಾಯವನ್ನು ಪತ್ತೆಹಚ್ಚಿದೆ. ಆದರೆ, ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್‌ನ ಮತ್ತೊಂದು ಅಧ್ಯಯನದ ಪ್ರಕಾರ, ನಮ್ಮ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ ಎಂದು ತಿಳಿಸಿದೆ.

ಮೊಟ್ಟೆ ಕೊಲೆಸ್ಟ್ರಾಲ್ ಅನ್ನು ನಿಜವಾಗಿಯೂ ಹೆಚ್ಚಿಸುತ್ತದೆಯೇ?

ನಾವು ಸೇವಿಸುವ ಕೊಬ್ಬಿನಿಂದ ಅಲ್ಲ. ಪಿತ್ತಜನಕಾಂಗದಿಂದ ಕೊಲೆಸ್ಟ್ರಾಲ್ ಉತ್ಪಾದನೆಯು ಪ್ರಾಥಮಿಕವಾಗಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನಿಂದ ಪ್ರಚೋದಿಸಲ್ಪಡುತ್ತದೆ. ಆದ್ದರಿಂದ, ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸುವುದು ಹೆಚ್ಚಿನ ಜನರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಮೊಟ್ಟೆಯನ್ನು 1 ಅಥವಾ 2ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಜಿಮ್ ಮಾಡುವವರು ಹಳದಿ ಲೋಳೆಯ ಬದಲು ಎಗ್​ ವೈಟ್​ ಅನ್ನು ತಿನ್ನಬೇಕು.

ಮೊಟ್ಟೆಗಳು ಪ್ರೋಟೀನ್, ಜೀವಸತ್ವಗಳು ಮತ್ತು ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ಹೆಚ್ಚಿನ ಜನರಿಗೆ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಪರಿಣಾಮ ಬೀರದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆಯಾ ಶರೀರ ತತ್ವಕ್ಕೆ ಅನುಗುಣವಾಗಿ ಮೊಟ್ಟೆ ಪ್ರತಿಕ್ರಿಯಿಸುತ್ತದೆ. ಏನೇ ತಿಂದರು ಸಮತೋಲನ ಮತ್ತು ಮಿತವಾಗಿ ತಿನ್ನುವುದು ಮುಖ್ಯವಾಗಿದೆ.

ಮೊಟ್ಟೆಗಳನ್ನು ಆಯ್ಕೆ ಮಾಡುವ ಟಿಪ್ಸ್​

* ಅಂಗಡಿಗಳಲ್ಲಿ ರೆಫ್ರಿಜರೇಟರ್‌ನಲ್ಲಿರುವ ಮೊಟ್ಟೆಗಳನ್ನು ಮಾತ್ರ ಖರೀದಿಸಿ

* ಸ್ವಚ್ಛ ಮತ್ತು ಬಿರುಕು ಬಿಡದ ಚಿಪ್ಪುಗಳನ್ನು ಹೊಂದಿರುವ ಮೊಟ್ಟೆಗಳನ್ನು ಆರಿಸಿ

* ಅವಧಿ ಮೀರಿದ ಮೊಟ್ಟೆಗಳನ್ನು ಖರೀದಿಸಬೇಡಿ

* ಖರೀದಿಸಿದ ನಂತರ ಸಾಧ್ಯವಾದಷ್ಟು ಬೇಗ ರೆಫ್ರಿಜರೇಟರ್‌ನಲ್ಲಿ ಇರಿಸಿ

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net