ಮಳೆಗಾಲದಲ್ಲಾಗುವ ವಿದ್ಯುತ್​​ ಅಪಾಯದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿ! | Mansoon

untitled-design-2025-09-13t162955612-68c54ec9f3199
Published on

Mansoon: ಮಳೆಗಾಲ ಆರಂಭವಾದಾಗ ಬೆಳಕು ಮತ್ತು ಗಾಳಿ ತಂಪುಗೊಂಡಿದ್ದರೂ, ವಿದ್ಯುತ್​ ಸಂಬಂಧಿತ ಅಪಾಯಗಳು ಹೆಚ್ಚುತ್ತಿರುತ್ತವೆ. ಇನ್ನು ನಿಮ್ಮ ಮನೆಗಳಲ್ಲಿ ನೀರು ತುಂಬಿಕೊಳ್ಳುವುದರಿಂದ, ಕರೆಂಟ್​ ವೈರ್​ಗಳ ದುಸ್ಥಿತಿ, ವಿದ್ಯುತ್​ ಮತ್ತು ನೀರು ಒಂದೇ ಕಡೆ ಇರುವುದರಿಂದ ವಿದ್ಯುತ್​ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ.

ನಿಮ್ಮ ಕುಟುಂಬ ಅಪಾಯದಿಂದ ದೂರಾಗಲು ಈ ರೀತಿ ಮಾಡಿ

1. ಒದ್ದೆ ಸ್ಥಳಗಳಲ್ಲಿ ವಿದ್ಯುತ್ ಸಾಧನಗಳನ್ನು ಬಳಸಬೇಡಿ

ಮಳೆಗಾಲದ ಸಮಯದಲ್ಲಿ ಮನೆಯು ತಂಪಾಗಿದ್ದು, ಅಡುಗೆ ಮನೆ, ಸ್ನಾನಗೃಹದಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ವೇಳೆ ಹೀಟರ್​​, ಚಾರ್ಜರ್​ ಬಳಸಿದರೆ ಕೆಲವೊಮ್ಮೆ ವಿದ್ಯುತ್​ ಸ್ಪರ್ಶಿಸಬಹುದು. ಇದರಿಂದ ಅಪಾಯವಾಗುವ ಸಂಭವ ಹೆಚ್ಚಿರುತ್ತದೆ. ಆದರಿಂದ ಒದ್ದೆ ಇರುವಂತಹ ಪ್ರದೇಶಗಳಲ್ಲಿ ವಿದ್ಯುತ್​​ ಸಂಬಮಧಿತ ವಸ್ತುಗಳನ್ನು ಬಳಸಬೇಡಿ, ಸಾಧನಗಳನ್ನು ಬಳಸಿದ ನಂತರ, ಪ್ಲಗ್​ಗಳನ್ನು ತೆಗೆಯಿರಿ..

2. ELCB ಅಳವಡಿಸಿಕೊಳ್ಳಿ

ಬಹುತೇಕ ಮನೆಗಳಲ್ಲಿ ಈ ಸಾಧನ ಇರುವುದಿಲ್ಲ. ಇದರಿಂದ ವಿದ್ಯುತ್​ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯ ಬೋರ್ಡ್​ನಲ್ಲಿ ELCB (Electrical Leakage Circuit Breaker) ಅಳವಡಿಸಿ. ಇದು 0.1 ಸೆಕೆಂಡ್​ಗಳಲ್ಲಿ ವಿದ್ಯುತ್​ ಕಡಿತ ಮಾಡುತ್ತದೆ.

3. ವಿದ್ಯುತ್ ಸಾಧನಗಳ ಪರಿಶೀಲಿನೆ

ಬಾಗಿಲಿನಲ್ಲಿರುವ ಬೆಲ್​, ವಟರ್​ ಪಂಪ್​, ಲೈಟ್​ಗಳು ಮಳೆಯಲ್ಲಿ ನೆನೆದಿರುತ್ತವೆ. ಇವುಗಳನ್ನು ಸ್ಪರ್ಶಿಸಿದಾಗ ವಿದ್ಯುತ್​ ಅಪಾಯ ಹೆಚ್ಚಾಗುವ ಸಂಭವ ಜಾಸ್ತಿಯಾಗಿರುತ್ತದೆ. ಹಾಗಾಗಿ ಅವುಗಳನ್ನು ವಟರ್​ ಫ್ರೂಫ್​ ಕವರ್​ಗಳಿಂದ ಸುರಕ್ಷಿಸಿ, ವೈರ್​ಗಳನ್ನು ಪರಿಶೀಲನೆ ನಡೆಸುತ್ತಾ ಇರಿ.

4. ಮಕ್ಕಳ ಬಗ್ಗೆ ಕಾಳಜಿ ವಹಿಸಿ

ಮಳೆಗಾಲದ ಸಮಯದಲ್ಲಿ ಮಕ್ಕಳು ಆದಷ್ಟು ನೀರಿನಲ್ಲಿ ಆಡಲು ಬಯಸುತ್ತಿರುತ್ತಾರೆ. ಈ ವೇಳೆ ವಿದ್ಯುತ್​ ಸ್ಪರ್ಶಿಸಬಹುದು. ಹಾಗಾಗಿ ಅವರನ್ನು ಆದಷ್ಟು ಇವುಗಳಿಂದ ದೂರ ಇರಿಸಿ. ಮಕ್ಕಳಿಗೆ ನೀರು ಮತ್ತು ವಿದ್ಯುತ್​ ಅಪಾಯ ಎಂಬುದನ್ನು ತಿಳಿಸಿರಿ.

5. ದುರ್ಬಲ ವೈರಿಂಗ್​ ಕಡಿತಗೊಳಿಸಿ

ಹಳೆಯ ಕಟ್ಟಡಗಳನ್ನು ವೈರ್​ಗಳು ದರ್ಬಲ ಸ್ಥಿತಿಯನ್ನು ಹೊಂದಿರುತ್ತವೆ. ಮಳೆಗಾಲದ ಸಮಯದಲ್ಲಿಯೇ ಆದಷ್ಟು ಶಾರ್ಟ್​ ಸರ್ಕ್ಯೂಟ್ ಆಗುವ ಸಂಭವ ಹೆಚ್ಚಾಗಿರುತ್ತದೆ. ಆದರಿಂದ ವಾರ್ಷಿಕವಾಗಿ ವೈರಿಂಗ್​​ಗಳನ್ನು ಪರೀಕ್ಷಿಸುತ್ತಿರಿ. ಆದಷ್ಟು LED ಬಲ್ಬ್‌ಗಳು ಮತ್ತು ಸರ್ಜ್ ಪ್ರೊಟೆಕ್ಟರ್ ಬಳಸಿ ಇವು ಶೇ. 50 ರಷ್ಟು ವಿದ್ಯುತ್​ ಅಪಾಯವನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net