Diabetes Control Tips: ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ಅತ್ಯುತ್ತಮ ಆಹಾರಗಳಿವು…

Blood Sugar
Published on

ನವದೆಹಲಿ: ಭಾರತದ 100 ಮಿಲಿಯನ್​​ ಅಂದರೆ 10 ಕೋಟಿಗೂ ಅಧಿಕ ಮಂದಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಇತ್ತೀಚೆಗಷ್ಟೇ ಬಹಿರಂಗವಾಯಿತು. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿರುವವರು ತಮ್ಮ ದಿನ ನಿತ್ಯದ ಆಹಾರ ಮೇಲೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಕ್ಕರೆ ಅಂಶ ಹೆಚ್ಚಾದಲ್ಲಿ ಅನೇಕ ಗಂಭೀರ ಸಮಸ್ಯೆಗಳು ಉಂಟಾಗಿ, ಸಾಯುವ ಸಾಧ್ಯತೆ ಇದೆ. ಹೀಗಾಗಿ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳು ಸರಿಯಾದ ಊಟದ ಕ್ರಮವನ್ನು ಆಯ್ದುಕೊಳ್ಳಿ.

ಗ್ಲೈಸೆಮಿಕ್ ಸೂಚ್ಯಂಕ

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳು ಕಡಿಮೆ ಜಿಐ ಆಹಾರಗಳನ್ನು ಸೇವಿಸಬೇಕು. ಜಿಐ ಅಂದರೆ, ಗ್ಲೈಸೆಮಿಕ್ ಸೂಚ್ಯಂಕ. ಇದು ಸಂಖ್ಯೆಯ ಮಾಪಕವಾಗಿದ್ದು, ಕೆಲವು ಕಾರ್ಬೋಹೈಡ್ರೇಟ್‌ಗಳು ದೇಹದಿಂದ ಗ್ಲೂಕೋಸ್ ಆಗಿ ಎಷ್ಟು ವೇಗವಾಗಿ ಪರಿವರ್ತನೆಗೊಳ್ಳುತ್ತವೆ ಎಂಬುದನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ಇದರ ಪ್ರಕಾರ ನಿಮ್ಮ ಆಹಾರ ಕ್ರಮವನ್ನು ಬದಲಿಸಿಕೊಂಡರೆ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಕೆಲವು ಆಹಾರಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಲ್ಲದೆ, ಕೆಲವು ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿವೆ. ಮಧುಮೇಹಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಆಹಾರಗಳು ಇಲ್ಲಿವೆ.

1. ನೆಲ್ಲಿಕಾಯಿ: ನೆಲ್ಲಿಕಾಯಿಗಳು ಕ್ರೋಮಿಯಂ ಅಂಶವನ್ನು ಹೊಂದಿರುತ್ತವೆ. ಈ ಕ್ರೋಮಿಯಂ ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸಿ, ದೇಹವು ಇನ್ಸುಲಿನ್‌ಗೆ ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ನಿಯಂತ್ರಣದಲ್ಲಿ ಇಡುತ್ತದೆ.

2. ಬೇವು: ಬೇವು ತುಂಬಾ ಕಹಿಯಾಗಿರಬಹುದು ಆದರೆ, ಅದರ ಆರೋಗ್ಯಕರ ಲಾಭ ಹಲವು. ಬೇವಿನಲ್ಲಿರುವ ಸಂಯುಕ್ತಗಳು ಗ್ಲುಕೋಸ್ ವಾಹಕ-4 (GLUT4) ನಿಯಂತ್ರಕ ಗ್ಲುಕೋಸಿಡೇಸ್​​ನಂತಹ ಪ್ರಮುಖ ಕರುಳಿನ ಕಿಣ್ವಗಳನ್ನು ಪ್ರತಿಬಂಧಿಸುವ ಮೂಲಕ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

3. ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿಹಣ್ಣಿನಲ್ಲಿ ಜಂಬೋಲಿನ್ ಎಂಬ ಸಂಯುಕ್ತವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ದಾಲ್ಚಿನ್ನಿ: ಮಸಾಲೆ ಪದಾರ್ಥವಾದ ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮಸಾಲೆಯು ರಕ್ತದಿಂದ ಸಕ್ಕರೆಯನ್ನು ತೆಗೆದುಹಾಕಲು ಸಹಾಯ ಮಾಡುವ ಇನ್ಸುಲಿನ್​ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

5. ಅರಿಶಿಣ: ನಿಯಮಿತವಾಗಿ ಅರಿಶಿಣ ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಏಕೆಂದರೆ ಅರಿಶಿಣವು ಇನ್ಸುಲಿನ್ ತರಹದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಉಚಿತ ಟ್ಯೂಷನ್; ಎಲ್ಲಾ ಸಬ್ಜೆಕ್ಟ್​ನಲ್ಲೂ ಅನುತ್ತೀರ್ಣನಾದ ವಿದ್ಯಾರ್ಥಿ ಪಾಸ್!6. ಅಗಸೆ ಬೀಜ: ಈ ಅಗಸೆ ಬೀಜಗಳು ಫೈಬರ್​, ಒಮೆಗಾ 3 ಫ್ಯಾಟಿ ಆ್ಯಸಿಡ್​ ಮತ್ತು ಲಿಗ್ನಾನ್ಸ್​ ಅಂಶಗಳನ್ನು ಹೊಂದಿದ್ದು, ಇವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net