

ಇಂದು ಜಗತ್ತಿನಾದ್ಯಂತ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಸಮಸ್ಯೆ ಎಂದರೆ ಛಿಚ್ಟ್ಝ ್ಚಜ್ಝಿಛಜಟಟಛ ್ಚ್ಟಛಿಠ. ಇದು ಮಗುವಿನ ಬಾಯಿಯ ಆರೋಗ್ಯದ ಮೇಲಲ್ಲದೆ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದೊಂದು ದಂತಕ್ಷಯದ ಅನನ್ಯ ಮಾದರಿಯಾಗಿದ್ದು, ಆರು ವರ್ಷದ ಒಳಗಿನ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುತ್ತದೆ. ಇದು ಬಹು ಅಂಶಗಳಿಂದ ಕೂಡಿದ ತೊಂದರೆಯಾಗಿದ್ದು ಆರೋಗ್ಯಕರವಲ್ಲದ ಮತ್ತು ಅವೈಜ್ಞಾನಿಕ ಆಹಾರಕ್ರಮಗಳಿಂದಾಗಿ ಉಂಟಾಗುವಂತಹುದು. ಇದನ್ನು nursing bottle caries / baby bottle cariesಎಂದೂ ಕರೆಯುತ್ತಾರೆ. ಯಾವ ಮಕ್ಕಳು ಹಾಲಿನ ಬಾಟಲಿಯನ್ನು ದೀರ್ಘಕಾಲದವರೆಗೆ (ಬೆಳಗಿನ ಸಮಯ ಅಥವಾ ರಾತ್ರಿ ಮಲಗುವ ವೇಳೆ) ಬಾಯಿಯಲ್ಲಿ ಇಟ್ಟುಕೊಳ್ಳುತ್ತಾರೋ ಅಂಥವರಲ್ಲಿ ಹೆಚ್ಚು ಕಾಣಬಹುದು.
ನಿದ್ರೆ ಮಾಡುವಾಗ ಬಾಯಿಯಲ್ಲಿ ಲಾಲಾರಸದ ಹರಿವು ಕಡಿಮೆಯಾಗಿರುತ್ತದೆ. ಅಲ್ಲದೆ ನುಂಗುವ ಪ್ರಕ್ರಿಯೆಯೂ ಇರುವುದಿಲ್ಲ. ಇಂಥ ಸಮಯದಲ್ಲಿ ಹಾಲು ಅಥವಾ ಸಿಹಿ ಪಾನೀಯ ಬಾಯಿಯಲ್ಲೇ ಉಳಿದು ಹಲ್ಲಿನೊಂದಿಗೆ ಸದಾ ಸಂಪರ್ಕದಲ್ಲಿ ಇರುವಂತಾದಾಗ ಹಲ್ಲು ಹುಳುಕು ಉಂಟುಮಾಡುವ ಸೂಕ್ಷ್ಮಜೀವಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿ ಹುಳುಕು ಉಂಟಾಗುತ್ತದೆ. ಇದು ಬಹಳ ಬೇಗ ಹರಡುವಂಥದ್ದಾಗಿದ್ದು ಹಲವು ಬಾರಿ ಹಲ್ಲು ಹುಟ್ಟುವ ಮೊದಲೇ ಕ್ಷಯಕ್ಕೆ ಗುರಿಯಾಗಿರುತ್ತದೆ.
ಕಾರಣಗಳು: * 12-15 ತಿಂಗಳ ನಂತರವೂ ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುವುದು.
* ರಾತ್ರಿ ವೇಳೆ ಹಾಲುಣಿಸಿದ ನಂತರ ಅಥವಾ ಆಹಾರ ಸೇವನೆಯ ನಂತರ ಬಾಯಿಯನ್ನು ಶುಚಿಗೊಳಿಸದಿರುವುದು.
* ಅನಿಯಂತ್ರಿತವಾಗಿ ರಾತ್ರಿ ವೇಳೆಯೂ ತಾಯಿಹಾಲನ್ನು ಉಣಿಸುವುದು.
* ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಸಕ್ಕರೆಯುಕ್ತ ಪಾನೀಯ / ಹಾಲನ್ನು ಬಾಟಲಿಯಲ್ಲಿ ಹಾಕಿ ಅನಿಯಂತ್ರಿತವಾಗಿ ಕೊಡುವುದು
* ಹಾಲು ಮಾತ್ರವಲ್ಲದೆ ಜೇನುತುಪ್ಪ, ಸಕ್ಕರೆಯುಕ್ತ ಹಣ್ಣಿನ ರಸ, ಸಿಹಿಯಾದ ಪಾನಿಯಗಳು, ಸಕ್ಕರೆ ಹಾಕಿದ ಹಾಲು ಅಥವಾ ನೀರು, ಸಿಹಿತಿನಿಸುಗಳಿಂದಲೂ ಈ early childhood caries ಉಂಟಾಗುತ್ತದೆ.
ಇದನ್ನೂ ಓದಿ: ದೂರದಿಂದಲೇ ಮಕ್ಕಳತ್ತ ಕೈ ಬೀಸಿ ಕಣ್ಣೀರಾದ ಪಾಲಕರು…
ಇದನ್ನು ತಡೆಗಟ್ಟುವುದು ಹೇಗೆ?: * ರಾತ್ರಿ ವೇಳೆ ಮಕ್ಕಳನ್ನು ಮಲಗಿಸುವ ಸಲುವಾಗಿ ಬಾಟಲಿಯಲ್ಲಿ ಹಾಲುಣಿಸುವುದು ಅಥವಾ ತಾಯಿಹಾಲನ್ನು ಉಣಿಸಬಾರದು.
* ಮಗುವಿಗೆ ಗ್ಲಾಸ್ ಅಥವಾ ಚಮಚದ ಸಹಾಯದಿಂದ ಹಾಲನ್ನು ಕುಡಿಸಬೇಕು.
* ಹಣ್ಣಿನ ರಸವನ್ನು (juice) ಗ್ಲಾಸ್ನಲ್ಲೇ ಕುಡಿಯುವ ಅಭ್ಯಾಸ ಮಾಡಿಸಬೇಕು.
* ಪ್ರತಿದಿನ ಎರಡು ಬಾರಿ ಹಲ್ಲುಜ್ಜುವ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಲು ಉತ್ತೆೇಜಿಸಬೇಕು. ಮಗುವಿನ ಮೊದಲ ಹಲ್ಲು ಹುಟ್ಟಿದ ನಂತರ ಮೃದುವಾದ ಬ್ರಶ್ನಿಂದ ಹಲ್ಲುಜ್ಜಬಹುದು ಮತ್ತು ಐದು ವರ್ಷ ವಯಸ್ಸಿನ ನಂತರ ವೈದ್ಯರ ಸಲಹೆ ಪಡೆದು ಫ್ಲೋರೈಡ್ಯುುಕ್ತ ಟೂತ್ಪೇಸ್ಟ್ ಬಳಸುವುದು ಉತ್ತಮ.
* ಮಗು ಗರ್ಭಾವಸ್ಥೆಯಲ್ಲಿದಾಗ ತಾಯಿಯ ಆಹಾರಕ್ರಮ ಉತ್ತಮವಾಗಿದ್ದು, ಅನವಶ್ಯಕ ಔಷಧಗಳನ್ನು ತೆಗೆದುಕೊಳ್ಳದಿದ್ದಲ್ಲಿ ಮಗುವಿನ ಹಲ್ಲುಗಳು ಆರೋಗ್ಯಕರವಾಗಿರುತ್ತವೆ.
* ಈ ದಂತಕ್ಷಯಕ್ಕೆ ಕಾರಣವಾದ ಸ್ಟ್ರೆಪ್ಟೊ ಕಾಕಸ್ ಮ್ಯೂಟನ್ ಎಂಬ ಸೂಕ್ಷ್ಮಜೀವಿಯು ಮಗುವಿಗೆ ಮುತ್ತು ಕೊಡುವ ಮೂಲಕ ಮತ್ತು ಒಂದೇ ತಟ್ಟೆ / ಚಮಚದಲ್ಲಿ ಊಟ ಮಾಡುವುದರಿಂದಲೂ ಹರಡಬಹುದು.
* ಮಗುವಿಗೆ ಒಂದು ವರ್ಷ ತುಂಬುವ ಹೊತ್ತಿಗೆ ದಂತವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಸೂಕ್ತ.
* ಮಾತನಾಡಲು, ಆಹಾರವನ್ನು ಅಗಿಯಲು ಹಲ್ಲುಗಳು ಬಹಳ ಮುಖ್ಯವಾಗಿದ್ದು, ಅವಧಿಗೂ ಮುನ್ನ ಹಾಲುಹಲ್ಲುಗಳನ್ನು ಕಳೆದುಕೊಂಡಲ್ಲಿ ಶಾಶ್ವತ ಹಲ್ಲುಗಳು ವಕ್ರವಾಗಿ ಹುಟ್ಟಿ ವಕ್ರದಂತ ಸಮಸ್ಯೆಯೂ ಉಂಟಾಗಬಹುದು. ವೈದ್ಯರ ಸಲಹೆಯನ್ನು ಪಾಲಿಸಿದಲ್ಲಿ early childhood caries ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಯಬಹುದು. ಆರೋಗ್ಯಕರ ಆಹಾರಕ್ರಮ ಮತ್ತು ಜೀವನಶೈಲಿ ಬಹು ಮುಖ್ಯವಾಗಿರುತ್ತದೆ.