

Health tips: ಕಾಳು ಮೆಣಸು ಅಡುಗೆಯಲ್ಲಿ ಬಳಸುವ ಮಸಾಲೆಯುಕ್ತ ಪದಾರ್ಥವಾಗಿದ್ದು, ಇದು ಔಷಧೀಯ ಗುಣಗಳನ್ನು ಸಹ ಹೊಂದಿದೆ. ಇದರಲ್ಲಿರುವ ಪಿಪೆರಿನ್ ಎಂಬ ಸಕ್ರಿಯ ಸಂಯುಕ್ತವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಕಾಳುಮೆಣಸನ್ನು ಸರಿಯಾಗಿ ಸೇವಿಸಿದರೆ ಜೀರ್ಣಕ್ರಿಯೆ, ಶೀತ, ತೂಕ ನಷ್ಟ, ಮತ್ತು ಉರಿಯೂತದಂತಹ ಸಮಸ್ಯೆಗಳನ್ನು ದೂರ ಉಳಿಯಬಹದಾಗಿದೆ. ಕಾಳು ಮೆಣಸಿನೊಂದಿಗೆ ಈ ಪದಾರ್ಥಗಳನ್ನು ಸೇವನೆ ಮಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಹೇಗೆಂದರೆ..
ಕಾಳುಮೆಣಸನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಶೀತ, ಕೆಮ್ಮು, ಮತ್ತು ಗಂಟಲು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರೋಗ ನೊಇರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಕಾಳುಮೆಣಸಿನಲ್ಲಿರುವ ಗುಣಗಳು ಗಂಟಲಿನ ಸೋಂಕನ್ನು ಶಮನಗೊಳಿಸುತ್ತವೆ. ಆದರೆ ಜೇನುತುಪ್ಪ ಆಂಟಿಬ್ಯಾಕ್ಟೀರಿಯಲ್ ಗುಣಗಳಿಂದ ರಕ್ಷಣೆ ನೀಡುತ್ತದೆ.
ಕಾಳುಮೆಣಸಿನ ಟೀ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ತೂಕ ನಷ್ಟಕ್ಕೆ ಸಹಾಯಕವಾಗಿದೆ. ಒಂದು ಗ್ಲಾಸ್ ಬಿಸಿನೀರಿಗೆ ಅರ್ಧ ಚಮಚ ಕಾಳುಮೆಣಸಿನ ಪುಡಿ, ಒಂದು ಚಮಚ ನಿಂಬೆ ರಸ, ಮತ್ತು ಸ್ವಲ್ಪ ಶುಂಠಿಯನ್ನು ಬೆರೆಸಿ ಕುಡಿಯಿರಿ. ಈ ಕಷಾಯವನ್ನು ಸೇವಿಸುವುದರಿಂದ ಚಯಾಪಚಯವನ್ನು ಉತ್ತೇಜಿಸಿ, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ತೊಂದರೆಗಳಾದ ಉಬ್ಬರ ಮತ್ತು ಅಜೀರ್ಣವನ್ನು ಕಡಿಮೆ ಮಾಡುತ್ತದೆ.
ಕಾಳುಮೆಣಸನ್ನು ದೈನಂದಿನ ಆಹಾರದ ಜೊತೆಗೆ ಬೆರೆಸುವುದರಿಂದ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಸೂಪ್, ಸಲಾಡ್, ತರಕಾರಿ ಖಾದ್ಯ, ಅಥವಾ ಅನ್ನದ ಖಾದ್ಯಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಸೇರಿಸಿ. ಇದು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗೂ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಕಾಳು ಮೆಣಸನ್ನು ಜೇನುತುಪ್ಪ, ಕಷಾಯ ಅಥವಾ ಇನ್ನಿತರ ಆಹಾರಗಳೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆ, ತೂಕ ಕಳೆದುಕೊಳ್ಳುವುದು ಹಾಗೂ ಉರಿಯೂತದಂತಹ ಸಮಸ್ಯೆಗಳಿಂದ ದೂರ ಇರಬಹುದು. ಅತಿಯಾಗಿ ಮೆಣಸಿನಕಾಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಹಾಗಾಗಿ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ