ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

dk-2025-04-23t200456787-6808fa9ab12ef
Published on

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ) ಆಹಾರವನ್ನು ತಿನ್ನಲು ಬಯಸುತ್ತಾರೆ. ಕಾರಣ ಬೇಸಿಗೆ ಕಾಲದಲ್ಲಿ ಜೀರ್ಣಕ್ರಿಯೇ ಸಲ್ಪ ನಿಧಾನವಾಗಿರುತ್ತದೆ. ಹೀಗಾಗಿ, ಜನರು ದೇಹವನ್ನು ಹೈಡ್ರಿಕರಿಸಲು ಈ ಸಮಯದಲ್ಲಿ ಮೇದುವಾದ ಹಾಗೂ ನೀರಿನಂವಿರುವ ಆಹಾರನ್ನು ಸೇವಿಸಲು ಇಷ್ಟ ಪಡುತ್ತಾರೆ.

ಆದರೆ, ಮಾಂಸಾಹಾರವನ್ನು ಇಷ್ಟಪಡುವ ಜನರು ಬಹಳಷ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಜನರು ಬೇಸಿಗೆಯಲ್ಲಿಯೂ ಮಾಂಸಾಹಾರ ತಿನ್ನುವುದನ್ನು ಹೇಗೆ ಬಿಡುತ್ತಾರೆ? ಈಗ ಬೇಸಿಗೆಯಲ್ಲಿ ಕೋಳಿ ಮಾಂಸ ಅಥವಾ ಮೀನು ತಿನ್ನುವುದು ಉತ್ತಮವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ, ಬೇಸಿಗೆಯಲ್ಲಿ ಕೋಳಿ ಮಾಂಸ ಅಥವಾ ಮೀನು ತಿನ್ನುವುದು ನಿಮಗೆ ಪ್ರಯೋಜನಕಾರಿಯೇ ಎಂಬುದು ನೋಡೋಣ.

ಮೀನು ತಿನ್ನುವುದರಿಂದಾಗುವ ಪ್ರಯೋಜನಗಳೇನು...?

ಮೀನಿನಲ್ಲಿ ಕಂಡುಬರುವ ಪ್ರೋಟೀನ್ ಸುಲಭವಾಗಿ ಜೀರ್ಣವಾಗುತ್ತದೆ.

ಮೀನಿನಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲವು ಮೆದುಳು ಮತ್ತು ಹೃದಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ.

ಮೀನು ದೇಹದಲ್ಲಿ ಶಾಖವನ್ನು ಉತ್ಪಾದಿಸುವುದಿಲ್ಲ, ಆದ್ದರಿಂದ ಇದನ್ನು ಬೇಸಿಗೆಯಲ್ಲಿ ಸುಲಭವಾಗಿ ತಿನ್ನಬಹುದು.

ಮೀನು ತಿನ್ನುವುದರಿಂದ ಥೈರಾಯ್ಡ್ ಕಾರ್ಯ ಸುಧಾರಿಸುತ್ತದೆ.

ಕೋಳಿ ತಿನ್ನುವುದರಿಂದಾಗುವ ಪ್ರಯೋಜನಗಳೇನು..?

ಕೋಳಿ ಮಾಂಸ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದಲ್ಲದೆ, ಸ್ನಾಯುಗಳು ಸಹ ದುರಸ್ತಿಯಾಗುತ್ತವೆ.

ಕೋಳಿ ಮಾಂಸವು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಇದರ ಸೇವನೆಯು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ.

ಕೋಳಿ ಮಾಂಸದಲ್ಲಿ ಪ್ರೋಟೀನ್ ಕೂಡ ಸಮೃದ್ಧವಾಗಿದೆ.

ಕೋಳಿ ಮಾಂಸ ತಿನ್ನುವುದರಿಂದ ದೇಹವು ಚೈತನ್ಯಶೀಲವಾಗಿರುತ್ತದೆ.

ಕೋಳಿ ಅಥವಾ ಮೀನು ಯಾವುದು ಉತ್ತಮ..?

ಈಗ ಬೇಸಿಗೆಯಲ್ಲಿ ಕೋಳಿ ಮಾಂಸ ಅಥವಾ ಮೀನು ತಿನ್ನುವುದು ಉತ್ತಮವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕೋಳಿ ಮಾಂಸಕ್ಕಿಂತ ಮೀನು ಮಾಂಸನೇ ಉತ್ತಮ ಎಂದು ಹೇಳಬಹುದು. ಇದನ್ನು ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ.

ವಾಸ್ತವವಾಗಿ, ಮೀನಿನಲ್ಲಿ ಕಂಡುಬರುವ ಪ್ರೋಟೀನ್ ಸುಲಭವಾಗಿ ಜೀರ್ಣವಾಗುತ್ತದೆ. ಬೇಸಿಗೆಯಲ್ಲಿ ಜೀರ್ಣಕ್ರಿಯೆ ತುಂಬಾ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೀನಿನ ಸೇವನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net