ಒಣ ಚರ್ಮದವರಿಗೆ ಹರಳೆಣ್ಣೆ ಬೆಸ್ಟ್ ಮೆಡಿಸಿನ್

beautiful-woman-with-clear-skin
Published on

ಬೆಂಗಳೂರು: ಸನ್‌ಬರ್ನ್, ಮೊಡವೆ, ಸ್ಟ್ರೆಚ್ ಮಾರ್ಕ್​​​ಗೆ ಹರಳೆಣ್ಣೆ ಬೆಸ್ಟ್ ಮೆಡಿಸಿನ್. ಇದು ‘ವಂಡರ್‌ಫುಲ್ ಮೊಯಿಶ್ಚರೈಸರ್’. ಆದ್ದರಿಂದ ಒಣ ಚರ್ಮದವರಿಗೆ ಅತ್ಯುತ್ತಮ ಔಷಧ.

ಹರಳೆಣ್ಣೆ ಹಚ್ಚುವ ವಿಧಾನ
ಹರಳೆಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಮುಖಕ್ಕೆ ಹಚ್ಚಿ. ಒಂದು ಗಂಟೆಯ ನಂತರ ತೊಳೆಯಿರಿ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಈ ರೀತಿ ಮಾಡುವುದರಿಂದ ಬೇಗ ಫಲಿತಾಂಶ ಪಡೆಯಬಹುದು. ವಾರದಲ್ಲಿ ಒಂದು ಬಾರಿ ಹರಳೆಣ್ಣೆ ಮಸಾಜ್ ಮಾಡಿ ಸ್ನಾನ ಮಾಡುವುದು ಶುಷ್ಕ ಚರ್ಮದವರಿಗೆ ಒಳಿತು.

ಫೇಸ್‌ಪ್ಯಾಕ್
ಎರಡು ಬಾಳೆಹಣ್ಣುಗಳನ್ನು ಚೆನ್ನಾಗಿ ಪೇಸ್ಟ್ ಮಾಡಿ ಮುಖದ ಮೇಲೆ ಹಚ್ಚಿಕೊಳ್ಳಿ. ೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ೨ ಟೇಬಲ್ ಸ್ಪೂನ್ ಮೊಸರಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ. ಈ ಫೇಸ್‌ಪ್ಯಾಕ್ ಎಲ್ಲಾ ಕಾಲದಲ್ಲಿಯೂ ಹೆಚ್ಚು ಉಪಯುಕ್ತವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net