More

    ರೋಸ್ ವಾಟರ್ ಹಚ್ಚುವ ಮುನ್ನ ಇರಲಿ ಎಚ್ಚರ..!

    ಬೆಂಗಳೂರು: ರೋಸ್ ವಾಟರ್ ತ್ವಚೆಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಕೆಲವರಿಗೆ ರೋಸ್ ವಾಟರ್​​​ನಿಂದ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. ಹೌದು, ರೋಸ್ ವಾಟರ್ ಬಳಸುವುದರಿಂದ ಅಡ್ಡಪರಿಣಾಮಗಳೂ ಉಂಟಾಗಬಹುದು. ಆದ್ದರಿಂದ ರೋಸ್ ವಾಟರ್ ಹಚ್ಚುವ ಮುನ್ನ ಈ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಱರು.


    ಪ್ಯಾಚ್ ಟೆಸ್ಟ್
    ಕೆಲವು ಜನರಿಗೆ ರೋಸ್ ವಾಟರ್‌ ಹಚ್ಚುವುದರಿಂದ ಅಲರ್ಜಿಯಾಗುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ಒಂದು ವೇಳೆ ಕೆಂಪು, ತುರಿಕೆ ಅಥವಾ ಕಿರಿಕಿರಿಯನ್ನು ಅನುಭವಿಸಿದರೆ ರೋಸ್ ವಾಟರ್‌ ಬಳಕೆ ನಿಲ್ಲಿಸಿ.

    ಗುಣಮಟ್ಟ ಮತ್ತು ಶುದ್ಧತೆ
    ನೀವು ಬಳಸುತ್ತಿರುವ ರೋಸ್ ವಾಟರ್ ಉತ್ತಮ ಗುಣಮಟ್ಟ, ಸಿಂಥೆಟಿಕ್ ಸುಗಂಧಗಳಿಂದ ಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಶುದ್ಧ ಮತ್ತು ಸಾವಯವ ರೋಸ್ ವಾಟರ್ ಅನ್ನು ಸಾಮಾನ್ಯವಾಗಿ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

    ಚರ್ಮದ ಪ್ರಕಾರ
    ರೋಸ್ ವಾಟರ್ ಸಾಮಾನ್ಯವಾಗಿ ಸೂಕ್ಷ್ಮ ಚರ್ಮ ಸೇರಿದಂತೆ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ.

    ಬಳಕೆ
    ನೀವು ಸೂಕ್ಷ್ಮ ಚರ್ಮ ಹೊಂದಿದ್ದರೆ ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚುವ ಮೊದಲು ರೋಸ್ ವಾಟರ್ ಮತ್ತು ಡಿಸ್ಟಿಲ್ಡ್ ವಾಟರ್‌ ಸಮಾನ ಭಾಗವಾಗಿ ಮಿಶ್ರಣ ಮಾಡಬಹುದು. ಇದು ಮುಂದಾಗುವ ತ್ವಚೆಯ ಕಿರಿಕಿರಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.


    ವೈದ್ಯರನ್ನು ಸಂಪರ್ಕಿಸಿ
    ಪ್ರತಿಯೊಬ್ಬರ ಚರ್ಮವು ವಿಶಿಷ್ಟವಾಗಿದೆ. ನಿಮ್ಮ ಚರ್ಮವು ರೋಸ್ ವಾಟರ್‌ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮ ಚರ್ಮದಲ್ಲಿ ಯಾವುದೇ ಬದಲಾವಣೆಗಳನ್ನು ಗಮನಿಸಿದರೆ, ಬಳಕೆ ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts