More

    ರೊಟ್ಟಿ ಕೇಕ್ ತರಹ ಮೃದುವಾಗಿರಬೇಕೇ, ಈ ವಿಧಾನ ಅನುಸರಿಸಿ…

    ಬೆಂಗಳೂರು: ಹೊರಗಿನ ಆಹಾರ ಎಷ್ಟೇ ತಿಂದರೂ, ಕೊನೆಗೆ ಮನೆಯಲ್ಲಿ ಮಾಡಿದ ಅಡುಗೆ ತಿಂದರೇನೇ ನಮಗೆ ಸಮಾಧಾನ ಸಿಗುವುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ರೊಟ್ಟಿ ಪ್ರಮುಖ ಆಹಾರವಾಗಿದೆ. ರೊಟ್ಟಿ ಮಾಡುವುದು ತುಂಬಾ ಸುಲಭ. ಆದರೆ ಅದನ್ನು ತಯಾರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ರೊಟ್ಟಿ ಪಾಪಡ್ ತರಹ ಗರಿಗರಿಯಾಗಿ ಬದಲಾಗಬಹುದು. ಆದ್ದರಿಂದ ರೊಟ್ಟಿ ಮಾಡುವಾಗ ಹಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು.

    ಮೃದುವಾಗಿ ರೊಟ್ಟಿ ಮಾಡುವ ಬಗ್ಗೆ ಜನರು ಆಗಾಗ್ಗೆ ಯೋಚಿಸುತ್ತಾರೆ. ಅದು ನಿಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿಯೂ ಹೌದು. ಆದ್ದರಿಂದ ರೊಟ್ಟಿಯನ್ನು ಮೃದುವಾಗಿ ಮಾಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ ನೋಡಿ…

    ಹೀಗಿರಲಿ ಹಿಟ್ಟು
    ರೊಟ್ಟಿ ಮಾಡಲು ಹಿಟ್ಟನ್ನು ಬೆರೆಸುವಾಗ ಮೃದುವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಹಿಟ್ಟು ಬಿರುಸಾಗಿ ಅಥವಾ ಹಾರ್ಡ್ ಆಗಿದ್ದರೆ ನಿಮ್ಮ ರೊಟ್ಟಿ ಎಂದಿಗೂ ಚೆನ್ನಾಗಿ ಆಗುವುದಿಲ್ಲ. ಆದ್ದರಿಂದ ಮಿಶ್ರಣ ಮಾಡುವಾಗಲೇ ಹದವಾಗಿ ಬೆರೆಸಿ.

    ತಕ್ಷಣ ಮಾಡಬೇಡಿ
    ಹಿಟ್ಟನ್ನು ಬೆರೆಸಿದ ತಕ್ಷಣ ರೊಟ್ಟಿ ಮಾಡಲು ಪ್ರಾರಂಭಿಸಬೇಡಿ. ಹಿಟ್ಟನ್ನು ನಾದಿಕೊಂಡ ನಂತರ ಸ್ವಲ್ಪ ಸಮಯದವರೆಗೆ ಮುಚ್ಚಿಡಿ. ಹೀಗೆ ಮಾಡುವುದರಿಂದ ನಿಮ್ಮ ರೊಟ್ಟಿ ಮೃದುವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts