ತಾಯಿಗೆ ಕರೊನಾ ಇದ್ದರೂ ಮಗುವಿಗೆ ತಾಯಿಹಾಲು ನೀಡಬಹುದಾ?

Breast feed
Published on

ಕೋವಿಡ್ ಪಾಸಿಟಿವ್ ಇದ್ದರೂ ಯುಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಮಗುವಿಗೆ ಹಾಲು ನೀಡುವುದನ್ನು ಮುಂದುವರಿಸಲು ತಾಯಂದಿರನ್ನು ಉತ್ತೇಜಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವೈದ್ಯಕೀಯ ಸೇವಾಕ್ಷೇತ್ರದ ಎಲ್ಲರಿಗೂ ಸೂಚನೆ ನೀಡಿದೆ.

ಆಗಸ್ಟ್ 1ರಿಂದ 7ರ ತನಕ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಸಚಿವಾಲಯದ ಹೇಳಿಕೆ ಪ್ರಕಟವಾಗಿದೆ. ತಾಯಿಗೆ ಕರೊನಾ ಇದ್ದರೂ ತಾಯಿಹಾಲು ಸೇವನೆಯಿಂದ ಮಗುವಿಗೆ ರಕ್ಷಣೆ ದೊರೆಯಲಿದೆ. ಕರೊನಾ ಶಂಕಿತ-ಸೋಂಕಿತ ತಾಯಂದಿರು ಮಗುವಿಗೆ ಹಾಲು ನೀಡುವಾಗ ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಇಲ್ಲಿಯವರೆಗೆ ತಾಯಿಹಾಲಿನಲ್ಲಿ ಕರೊನ ವೈರಸ್ ಕಂಡುಬಂದಿಲ್ಲ. ಮಗುವನ್ನು ಮುಟ್ಟುವ ಮೊದಲು ಮತ್ತು ಮುಟ್ಟಿದ ನಂತರ ಕೈಗಳನ್ನು ಸೋಪು /ಸ್ಯಾನಿಟೈಸರ್​ನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಬಾಟಲಿ ಹಾಲು ನೀಡುವುದಾದರೂ ಅದನ್ನು ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕೆಂದು ಸಚಿವಾಲಯವು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net