More

    ‘ಆಗಸ್ಟ್​ 5’ ‘ಆಗಸ್ಟ್​ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ

    ಕೋಲ್ಕತ್ತ: ಶ್ರೀರಾಮಮಂದಿರ ಭೂಮಿಪೂಜೆಯ ಬಗ್ಗೆ ಹಲವು ಪ್ರತಿಪಕ್ಷಗಳ ನಾಯಕರು ಒಂದೊಂದು ಹೇಳಿಕೆ ನೀಡಿದ್ದರೂ ಕೂಡ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದೂ ಮಾತಾಡಿರಲಿಲ್ಲ.

    ಅಷ್ಟಕ್ಕೂ ಕಳೆದ ಲೋಕಸಭಾ ಚುನಾವಣೆ ವೇಳೆ ಜೈ ಶ್ರೀರಾಮ್​ ಎಂಬ ಘೋಷವಾಕ್ಯದ ಸಲುವಾಗಿಯೇ ಪಶ್ಚಿಮಬಂಗಾಳದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು ಎಂಬುದನ್ನೂ ಮರೆಯುವಂತಿಲ್ಲ. ಮಮತಾ ಬ್ಯಾನರ್ಜಿ ಎದುರು ಜೈ ಶ್ರೀರಾಮ್​ ಎಂದವನನ್ನು ಬಂಧಿಸಿದ ಘಟನೆ ನಡೆದಿತ್ತು.

    ಹಾಗೇ ಆಗಸ್ಟ್​ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಜೈ ಸಿಯಾ ರಾಮ್​ ಎಂದು ಭಾಷಣ ಪ್ರಾರಂಭಿಸಿ, ನಂತರ ಸ್ವಾತಂತ್ರ್ಯ ಹೋರಾಟವನ್ನೂ ನೆನಪಿಸಿಕೊಂಡಿದ್ದರು.

    ಅದೆಷ್ಟೋ ತಲೆಮಾರಿನ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಅವರೆಲ್ಲರ ಹೋರಾಟ, ಬಲಿದಾನದ ಪ್ರತಿಫಲವಾಗಿ ಆಗಸ್ಟ್​ 15ರಂದು ಸ್ವಾತಂತ್ರ್ಯ ಸಿಕ್ಕಿತು. ಅದು ಹೋರಾಟದ ಅಂತ್ಯದ ದಿನವಾಯಿತು. ಹಾಗೇ ರಾಮಮಂದಿರಕ್ಕಾಗಿಯೂ ಹೋರಾಟ ನಡೆದಿದೆ. ಮಂದಿರಕ್ಕಾಗಿ ಅನೇಕರು ನಿಸ್ವಾರ್ಥದಿಂದ ತ್ಯಾಗ ಮಾಡಿದ್ದಾರೆ. ಶತಮಾನಗಳ ಹೋರಾಟದ ಮುಕ್ತಾಯದ ಸಂಕೇತದ ದಿನ ಇಂದು ಆಗಸ್ಟ್​ 5 ಎಂದು ಮೋದಿಯವರು ಹೇಳಿದ್ದರು.
    ಇದೀಗ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್​ 15ನ್ನು ಇನ್ಯಾವ ಸಮಾರಂಭಗಳಿಗೂ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.

    ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ. ನಮ್ಮೆಲ್ಲರ ಪಾಲಿಗೆ ಅತ್ಯಂತ ಮಹತ್ವ, ಐತಿಹಾಸಿಕ, ಸ್ಮರಣೀಯ ಮತ್ತು ಪ್ರಜಾಪ್ರಭುತ್ವೀಯ ದಿನ. ಅಂಥ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 15ಕ್ಕೆ ಹೋಲಿಕೆ ಮಾಡುವುದು ಸರಿಯಲ್ಲವೇ ಅಲ್ಲ ಎಂದಿದ್ದಾರೆ.
    ಸ್ವಾತಂತ್ರ್ಯವಿಲ್ಲದೆ ಜೀವಿಸಲು ಯಾರಿಗೆ ಸಾಧ್ಯ? ನಮಗೆ ಸ್ವಾತಂತ್ರ್ಯ ಬಂದ ದಿನ ತುಂಬ ಪೂಜನೀಯ ಹಾಗೂ ಮರೆಯಲು ಅಸಾಧ್ಯವಾದ ದಿನ ಎಂದಿದ್ದಾರೆ. ಇದನ್ನೂ ಓದಿ: ಹೆಚ್ಚು ಅನ್ನ ತಿಂತೀರಾ… ನೂತನ ಸಂಶೋಧನೆಯ ಬೆಚ್ಚಿಬೀಳಿಸೋ ವರದಿ: ವರ್ಷಕ್ಕೆ 50 ಸಾವಿರ ಸಾವು!

    ಹಾಗೇ, ಈ ಬಾರಿ ಕೊವಿಡ್​-19 ಇರುವುದರಿಂದ ಸ್ವಾತಂತ್ರ್ಯ ದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಬೇಡ. ನಿಮಗೆ ನಮ್ಮ ದೇಶದ ಧ್ವಜದ ಮೇಲೆ ಗೌರವ ಇದ್ದರೆ ಈ ಬಾರಿ ಎಲ್ಲರೂ ಮನೆಯಿಂದಲೇ ಅದನ್ನು ವ್ಯಕ್ತಪಡಿಸಿ ಎಂದು ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಜನರಿಗೆ ಸುದ್ದಿಗೋಷ್ಠಿಯ ಮೂಲಕ ಮನವಿ ಮಾಡಿದ್ದಾರೆ.

    ಈ ಬಾರಿ ದೀದಿ ಪ್ರತ್ಯಕ್ಷವಾಗಿ ನರೇಂದ್ರ ಮೋದಿಯವರನ್ನು ಖಂಡಿಸದೆ ಇದ್ದರೂ, ಪರೋಕ್ಷವಾಗಿ ವಿರೋಧಿಸಿದ್ದಾರೆ.(ಏಜೆನ್ಸೀಸ್​)

    ಮಥುರಾ ಶ್ರೀಕೃಷ್ಣಜನ್ಮಭೂಮಿ ವಿಮೋಚನಾ ಹೋರಾಟ ಶುರು: 80 ಸಾಧುಗಳನ್ನೊಳಗೊಂಡ ಟ್ರಸ್ಟ್​ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts