ಗಂಡಸರು ಹೆಚ್ಚಾಗಿ ಬೆಲ್ಟ್​ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ! ವೈದ್ಯರ ಮಾತನ್ನೊಮ್ಮೆ ಕೇಳಿ... Belts

Belts
Published on

Belts: ಹೆಚ್ಚಿನ ಪುರುಷರು ಯಾವುದೇ ಪ್ಯಾಂಟ್ ಧರಿಸಲಿ, ಜೊತೆಗೆ ಬೆಲ್ಟ್ ಖಂಡಿತ ಧರಿಸಿರುತ್ತಾರೆ. ಪ್ಯಾಂಟ್​ ಫಿಟ್​ ಆಗಿ ಕುಳಿತುಕೊಳ್ಳಲು ಹಾಗೂ ಯಾವುದೇ ಸಮಯದಲ್ಲಿ ಸಡಿಲವಾಗದಂತೆ ತಡೆಯಲು ಬೆಲ್ಟ್ ಧರಿಸುತ್ತಾರೆ. ಆದರೆ, ಈ ಬೆಲ್ಟ್ ಅನ್ನು ಹೆಚ್ಚು ಹೊತ್ತು ಧರಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಮರೆಯುವಂತಿಲ್ಲ.

ಬಿಗಿಯಾದ ಬೆಲ್ಟ್ ಅನ್ನು ಹೆಚ್ಚು ಹೊತ್ತು ಧರಿಸುವುದರಿಂದ ಸೊಂಟದ ಕೆಳಗೆ ಉಷ್ಣತೆ ಹೆಚ್ಚಾಗಬಹುದು. ಸಿಕೆ ಬಿರ್ಲಾ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರದ ಸಲಹೆಗಾರ ಡಾ. ತ್ರಿಪ್ತಿ ರಹೇಜಾ ಅವರ ಪ್ರಕಾರ, ಬೆಲ್ಟ್ ಧರಿಸುವುದರಿಂದ ಸೊಂಟದ ಕೆಳಗೆ ಉಷ್ಣತೆ ಹೆಚ್ಚಾಗಬಹುದು ಮತ್ತು ಪುರುಷರಲ್ಲಿ ವೀರ್ಯ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಏಕೆಂದರೆ, ದೇಹದ ಉಳಿದ ಭಾಗಗಳಿಗಿಂತ ತಂಪಾಗಿರಬೇಕಾದ ಪುರುಷ ಜನನಾಂಗವು ಬಿಸಿಯಾಗಿದ್ದರೆ ಅದು ಹಾನಿಕಾರಕವಾಗಿದೆ. ಇದರ ಹೊರತಾಗಿ, ಇತರ ಕಾಯಿಲೆಗಳು ಬರಬಹುದು ಎಂದಿದ್ದಾರೆ.

ಬಿಗಿಯಾದ ಬೆಲ್ಟ್ ಧರಿಸಿದಾಗ ಶ್ರೋಣಿಯ ಪ್ರದೇಶಕ್ಕೆ ರಕ್ತದ ಹರಿವು ಅಡ್ಡಿಯಾಗುತ್ತದೆ. ಇದು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಹೆಚ್ಚಾಗಿ ವೆರಿಕೋಸ್ ವೇನ್‌ಗಳಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಯಾವಾಗಲೂ ಬೆಲ್ಟ್ ಧರಿಸುವುದರಿಂದ ಶ್ರೋಣಿಯ ಪ್ರದೇಶದ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೆಚ್ಚಾಗಿ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಅಂತಹ ಸಮಸ್ಯೆಗಳನ್ನು ತಪ್ಪಿಸಲು ಸಡಿಲವಾದ ಬಟ್ಟೆಗಳನ್ನು ಧರಿಸುವುದು ಮತ್ತು ನಿಯಮಿತವಾಗಿ ನಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಸರಿಯಾದ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಮೂಲಕ ದೇಹದ ಸಮಸ್ಯೆಗಳನ್ನು ದೂರವಿಡಲು ಪ್ರಯತ್ನಿಸುವುದರಿಂದ ಬೆಲ್ಟ್ ಧರಿಸುವುದರಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net