'ಮಾವಿನ ಎಲೆ'ಯಿಂದ 'ಮಧುಮೇಹ' ನಿಯಂತ್ರಣಕ್ಕೆ ಬರುತ್ತಾ? ತಜ್ಞರು ಹೇಳಿದ್ದು ಹೀಗೆ|diabetes

mango leaf juice
Published on

health tips : ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿ ಅಥವಾ ಕೆಲವು ಆಹಾರ ಕ್ರಮದಿಂದ ಮಧುಮೇಹವನ್ನು ನಿಯಂತ್ರಿಸಬಹುದು. ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ರೋಗವು ಯುವಜನರಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹಕ್ಕೆ ಮಾವಿನ ಎಲೆಗಳು ಪರಿಣಾಮಕಾರಿಯಂತೆ. ಮಾವಿನಹಣ್ಣು ದೇಹಕ್ಕೆ 4 ಗ್ರಾಂ ವರೆಗೆ ಪ್ರೋಟೀನ್ ನೀಡುತ್ತದೆ. ಇದರ ಜೊತೆಗೆಮಾವಿನ ಎಲೆಗಳು ಇನ್ಸುಲಿನ್ ಸಂಕೇತಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀವಕೋಶಗಳು ಗ್ಲೂಕೋಸ್ ಅನ್ನು ಉತ್ತಮವಾಗಿ ಹೀರಿಕೊಳ್ಳಬಹುದು. ಹಾಗಾಗಿ ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಮಾವಿನ ಎಲೆಗಳಿಂದ ಕಾಫಿ ತಯಾರಿಸಿ ಕುಡಿಯಬಹುದು ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.

ಇನ್ನೂ ಈ ಮಧುಮೇಹ ಇದ್ದಾಗ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಆಹಾರ ಪದ್ಧತಿ ಮತ್ತು ವಿವಿಧ ವಿಧಾನಗಳಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾವಿನ ಎಲೆಯಿಂದ ಮಧುಮೇಹವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂದಿದ್ದಾರೆ.

ಮಾವಿನ ಎಲೆಯಿಂದ ಕಾಫಿ ಮಾಡುವ ವಿಧಾನ:

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಮಾವಿನ ಎಲೆಗಳು ಅತಿಸಾರಕ್ಕೆ ಒಳ್ಳೆಯದು. ಈ ಎಲೆಗಳನ್ನು ದೃಷ್ಟಿ ಸುಧಾರಿಸಲು ಬಳಸಲಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹ ಕೆಲಸ ಮಾಡುತ್ತದೆ.

ನಂತರ ಅದನ್ನು ಚಹಾದಂತೆ ಕುಡಿಯಿರಿ.

ಮಾವಿನ ಎಲೆಗಳು ಚೆನ್ನಾಗಿ ಬೆಂದ ನಂತರ, ಒಂದು ಲೋಟದಲ್ಲಿ ನೀರನ್ನು ಬಸಿದುಕೊಳ್ಳಿ.

ಮಾವಿನ ಎಲೆಗಳನ್ನು ನೀರಿಗೆ ಸೇರಿಸಿ ಸುಮಾರು 10 ನಿಮಿಷಗಳ ಕಾಲ ಬಿಸಿ ಮಾಡಿ.

ನಂತರ ಒಂದು ಲೋಟ ನೀರು ಅಥವಾ 2 ಕಪ್ ನೀರನ್ನು ಕುದಿಸಿ.

ನಂತರ ಎಲೆಗಳನ್ನು ಚೆನ್ನಾಗಿ ತೊಳೆಯಬೇಕು.

ಮಾವಿನ ಎಲೆಯ ಚಹಾ ತಯಾರಿಸಲು ಮೊದಲು 5-6 ಎಲೆಗಳು ಬೇಕಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net