

ಮೂತ್ರಪಿಂಡಗಳು( Kidneys ) ನಮ್ಮ ದೇಹಕ್ಕೆ ಪ್ರಮುಖವಾದ ಅಂಗಗಳಾಗಿವೆ. ರಕ್ತ ಮತ್ತು ದೇಹದ ಕಲ್ಮಷವನ್ನು ಹೊರ ಹಾಕಲು ಈ ಕಿಡ್ನಿಗಳು ಸಹಾಯ ಮಾಡುತ್ತೆ. ಹೀಗಾಗಿ, ಮೂತ್ರಪಿಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಕ್ಷೇಮ. ನಮಗೆ ತಿಳಿದೋ ತಿಳಿಯದೇ ದಿನ ನಿತ್ಯದ ಈ ಅಭ್ಯಾಸಗಳಿಂದ ನಮ್ಮ ಮೂತ್ರಪಿಂಡಗಳು(ಕಿಡ್ನಿ) ಹಾನಿಯಾಗಬಹುದಂತೆ!
1. ಅಧಿಕ ಉಪ್ಪು ತಿನ್ನವುದು
ಸಾಮಾನ್ಯವಾಗಿ ಅಧಿಕ ಉಪ್ಪು ತಿನ್ನುವುದು ಕಿಡ್ನಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅದಕ್ಕೆ ಕಾರಣನೂ ಇದೆ. ದಿನನಿತ್ಯ ಹೆಚ್ಚಿನ ಅಂಶ ಉಪ್ಪುಸೇವನೆ, ಉಪ್ಪಿನಲ್ಲಿರುವ ಸೋಡಿಯಂ ರಕ್ತದೊಡವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಹೀಗಾಗಿ, ಹೆಚ್ಚು ಸಂಸ್ಕರಿಸಿದ ಆಹಾರ ಮತ್ತ ತ್ವರಿತ ಆಹಾರವನ್ನು ಸೇವನೆ ಕಡಿಮೆ ಮಾಡಬೇಕು.
2.ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ
ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡ ಇರುವುದು ಮೂತ್ರಪಿಂಡದ ರಕ್ತನಾಳಗಳಿಗೆ ಹಾನಿ ಮಾಡುತ್ತದೆ, ಇದು ಮೂತ್ರಪಿಂಡದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಅಧಿಕ ಪ್ರೋಟಿನ್ ತಿನ್ನವುದರಿಂದ ಮೂತ್ರಪಿಂಡಗಳಿಗೆ ಒತ್ತಡ ಅಧಿಕವಾಗುತ್ತದೆ. ವಿಶೇಷವಾಗಿ, ನಿಮಗೆ ಮೂತ್ರಪಿಂಡದ ಸಮಸ್ಯೆ ಇದ್ದರೇ ಈ ಕೂಡಲೇ ನಿಲ್ಲಿಸಿ.
4.ಸಾಕಷ್ಟು ನೀರು ಕುಡಿಯದಿರುವುದು
ಕಡಿಮೆ ನೀರು ಕುಡಿಯುವುದರಿಂದ ಮೂತ್ರಪಿಂಡಗಳು ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕಲು ಹೆಚ್ಚು ಕೆಲಸ ಮಾಡುತ್ತವೆ, ಇದು ಅವುಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ದೀರ್ಘಕಾಲದವರೆಗೆ ಕಡಿಮೆ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕುಗಳು ಉಂಟಾಗಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಗಿರುವುದರಿಂದ ಮೂತ್ರಪಿಂಡದ ನಾಳಗಳಿಗೆ ಹಾನಿಯಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯದ ಅಪಾಯಕ್ಕೆ ಕಾರಣವಾಗುತ್ತದೆ.
ನೋವು ನಿವಾರಕಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಕಿಡ್ನಿಗೆ ಅತ್ಯಂತ ಅಪಾಯಕಾರಿ. ಹೆಚ್ಚು ನೋವು ನಿವಾರಕಗಳನ್ನು ಸೇವಿಸುವುದರಿಂದ, ಮೂತ್ರಪಿಂಡದ ಕಾರ್ಯನಿರ್ವಹಣೆಯು ಕ್ರಮೇಣ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.