

Health tips: ನಮ್ಮ ದೇಹದಲ್ಲಿನ ಅನೇಕ ಚಯಾಪಚಯ ಕ್ರಿಯೆಗಳು ನಡೆಯಬೇಕೆಂದರೆ ವಿಟಮಿನ್ 12ರ ಅತೀ ಮುಖ್ಯ. ಇದು ದೇಹಕ್ಕೆ ಅಗತ್ಯ ಪೋಷಕಾಂಶವಾಗಿದ್ದು, ರಕ್ತದ ಕಣಗಳ ಉತ್ಪಾದನೆ, ನರವ್ಯವಸ್ಥೆಯ ಆರೋಗ್ಯ ಮತ್ತು ಡಿಎನ್ಎ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಈ ರೋಗವು ವಿಶೇಷವಾಗಿ ಸಸ್ಯಹಾರಿಗಳಲ್ಲಿ ಮತ್ತು ವಯಸ್ಸಾದವರಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
B12 ಕೊರತೆಯಿಂದ ದೇಹದಲ್ಲಿ ರಕ್ತಹೀನತೆ ಉಂಟಾಗುತ್ತದೆ ಇದರಿಂದ ಚಯಾಪಚಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗೆಯೇ, ಇದರಿಂದ ವ್ಯಕ್ತಿಯು ಉಸಿರಾಡಲು ಬೇಕಾದ ಆಕ್ಸಿಜನ್ ಸಾಗಣೆಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇದು ದೇಹದಲ್ಲಿ ದಣಿವು, ಆಯಾಸ ಇನ್ನಿತರ ಸಮಸ್ಯೆಗಳನ್ನು ಸೃಷ್ಟಿಮಾಡುತ್ತದೆ.
ಯಾವುದೇ ಮನುಷ್ಯನಿಗೆ ನರವ್ಯವಸ್ಥೆಗೆ ಸಂಪೂರ್ಣವಾಗಿ B12 ಅಗತ್ಯವಾಗಿರುತ್ತದೆ. ಇದು ದೇಹದಲ್ಲಿ ಕೊರತೆ ಉಂಟಾದರೆ, ಸ್ಮರಣ ಶಕ್ತಿ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಗೊಂದಲ ಉಂಟು ಮಾಡಲು ಪ್ರಾರಂಭಿಸುತ್ತದೆ.
ದೇಹದಲ್ಲಿ B12ಗಳು ಕೊರತೆ ಉಂಟಾದಾಗ ಕೈಕಾಲುಗಳು ಜುಮ್ಮೆನಿಸುವುದು, ಮರಗಟ್ಟುವುದು, ನಡೆಯಲು ಸಾಧ್ಯವಾಗದ ರೀತಿಯಲ್ಲಿ ಭಾಸವಾಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಮಹಾಮಂಡಲೇಶ್ವರ ಕನ್ಯಾಡಿ ಸ್ವಾಮೀಜಿಗೆ ಗೌರವಾರ್ಪಣೆ
ದೇಹದಲ್ಲಿ B12ಗಳು ಕೊರತೆ ಉಂಟಾಗಿ, ಕೂದಲು ಉದುರುವುದು, ಬಿಳಿಯಾಗುವುದು ಸಂಭವಿಸುತ್ತದೆ. ಹಾಗೆಯೇ, ಈ ರೀತಿ ಸಮಸ್ಯೆಯಿಂದಾಗಿ ಮಾನಸಿಕ ಒತ್ತಡ, ಆತಂಕ, ಮಾನಸಿಕ ಏರಿಳಿತಗಳು ಉಂಟಾಗುತ್ತವೆ.
ಈ ಮೇಲೆ ತಿಳಿಸಿರುವ ಅಂಶಗಳು ನಿಮ್ಮಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ನೀವು ಮೊದಲು ನಿಮ್ಮ ಆಹಾರದ ಗಹುಣಮಟ್ಟವನ್ನು ಕಾಪಾಡಿಕೊಳ್ಳಿ. B12 ಸಂಯೋಜಿತ ಆಹಾರಗಳಾದ ಮಾಂಸ, ಮೀನು, ಮೊಟ್ಟೆ, ಹಾಲಿನ ಉತ್ಪನ್ನಗಳು, ಗೋಧಿ, ಸೋಯಾ ಉತ್ಪನ್ನಗಳು, ಅಥವಾ ಪೌಷ್ಟಿಕ ಯೀಸ್ಟ್ಗಳನ್ನು ಸೇವಿಸಿರಿ ಇದು ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ.
ಗರ್ಭಿಣಿಯರು ಆದಷ್ಟು B12 ಇರುವಂತಹ ಆಹಾರಗಳನ್ನು ಸೇವಿಸಿರಿ. ಇದರ ಕೊರತೆಯಿಂದಾಗಿ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಅಧಿಕವಾದ ಸಂಯೋಜಿತ ಆಹಾರಗಳನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗೆಯೇ ಜನರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಮತೋಲನ ಆಹಾರವನ್ನು ಸೇವಿಸಿರಿ.
B12 ಕೊರತೆಯನ್ನು ಗಂಭೀರವಾಗಿ ಗಮನಿಸದಿದ್ದರೆ, ಇದು ದೀರ್ಘಕಾಲಿನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ನಿಮ್ಮ ದೇಹದ ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಹದಲ್ಲಿ ತೀವ್ರ ರಕ್ತ ಹೀನತೆ, ಶಾಶ್ವತ ನರಕ್ಕೆ ಸಂಬಂಧಿಸಿದ ತೊಂದರೆಗಳು, ಚಲನೆಯಲ್ಲಿ ಸಮಸ್ಯೆ, ಮಾನಸಿಕ ಆರೋಗ್ಯದ ಖಿನ್ನತೆಗಳು, ಹೃದಯೀ ಸಂಬಂಧೀ ಸಮಸ್ಯೆಗಳು ಉಂಟಾಗುತ್ತವೆ. ಇದು ನೀವು ಬದುಕಿರುವ ಕೊನೆಯ ಹಂತದವರೆಗೂ ಈ ಕಾಯಿಲೆಗಳಿಗೆ ಒಳಗಾಗುತ್ತೀರಿ.
ಒಟ್ಟಾರೆಯಾಗಿ ವಿಟಮಿನ್ B12 ಕೊರತೆಯು ಆರಂಭದಲ್ಲಿ ಸೌಮ್ಯವಾಗಿ ಕಾಣಿಸಿಕೊಂಡರೂ, ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರಿಂದ ಸಮತೋಲನ ಆಹಾರ, ನಿಯಮಿತ ತಪಾಸಣೆ, ಮತ್ತು ವೈದ್ಯರ ಸಲಹೆಯೊಂದಿಗೆ ಈ ಕೊರತೆಯನ್ನು ತಡೆಗಟ್ಟಬಹುದು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, B12 ಕೊರತೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ