ಭಾರತದಲ್ಲಿ ಪ್ರೀತಿ ಮತ್ತು ಸಹಬಾಳ್ವೆ ಹೆಚ್ಚು ಎಂದ ವಿದೇಶಿ ಮಹಿಳೆ! ವಿಡಿಯೋ ವೈರಲ್​| Woman

untitled-design-2025-09-16t161834344-68c9408d04d3c
Published on

Woman : ಬೆಂಗಳೂರಿನಲ್ಲಿ ವಾಸಿಸುವ ಅಮೆರಿಕನ್​ ಮೂಲದ ಮಹಿಳೆಯೊಬ್ಬಳು ಭಾರತ ಮತ್ತು ಅಮೆರಿಕದಲ್ಲಿ ವೃದ್ಧರ ಆರೈಕೆಯ ಮೇಲೆ ಇರುವಂತಹ ವ್ಯತ್ಯಾಸಗಳನ್ನು ಗುರುತಿಸಿ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋದಲ್ಲೇನಿದೆ?

@danamarieplus3, ಎಂಬ ಹೆಸರಿನ ಇನ್​​ಸ್ಟಾಗ್ರಾಮ್​ ಖಾತೆದಾರವುಳ್ಳ ವಿದೇಶಿ ಮಹಿಳೆಯು ನಾನು ಅಮೆರಿಕದಲ್ಲಿ ವಾಸಿಸುವ ಸಂದರ್ಭದಲ್ಲಿ ನರ್ಸಿಂಗ್​ ಹೋಂನಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆ ಹೆಚ್ಚಿನ ವೃದ್ಧರು ಸಂಪೂರ್ಣವಾಗಿ ಒಂಟಿಯಾಗಿರುವುದನ್ನು ಗಮನಿಸಿದ್ದೇನೆ. ಅವರ ಕುಟುಂಬಸ್ಥರು ತಿಂಗಳುಗಟ್ಟಲೇ, ಕರೆ ಮಾಡುವುದಾಗಲಿ ಅಥವಾ ಭೇಟಿಯಾಗುವುದನ್ನು ಮಾಡುತ್ತಿರಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಆದರೆ, ಭಾರತದಲ್ಲಿ ವೃದ್ಧರೊಂದಿಗೆ ಯಾರಾದರು ಕುಟಂಬಸ್ಥರು ಇದ್ದೇ ಇರುತ್ತಾರೆ. ಅವರಿಗೆ ಒಂದು ಮಗು ಅಥವಾ ಮೊಮ್ಮಕ್ಕಳು ಇರುತ್ತಾರೆ. ವೃದ್ಧರ ಜೊತೆಯಲ್ಲಿ ಕುಳಿತಿರುತ್ತಾರೆ. ಮಾತನಾಡುತ್ತಿರುತ್ತಾರೆ. ಇಲ್ಲವೇ, ಕೈಹಿಡಿದುಕೊಂಡು ವೈದ್ಯರನ್ನು ಕಾಯುತ್ತ ಆಸ್ಪತ್ರೆಯ ಆವರಣದಲ್ಲಿ ಕುಳಿತಿರುತ್ತಾರೆ ಎಂದು ಹೇಳಿದರು.

ಭಾರತದಲ್ಲಿ ವೈದ್ಯರ ಭೇಟಿಗೆ 5 ರಿಂದ 6 ಜನ ಹೋಗುವುದನ್ನು ನಾನು ನೋಡಿದ್ದೇನೆ. ಭಾರತೀಯ ಸಂಸ್ಕೃತಿಯು ಕುಟುಂಬದ ಸಹಬಾಳ್ವೆ ಹಾಗೂ ಯುವಕರ ಪ್ರೀತಿ ಪಾತ್ರದಿಂದ ತುಂಬಿರುತ್ತದೆ. ಇದು ಇಲ್ಲಿನ ನೈತಿಕ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ತೋರಿಸುತ್ತದೆ ಎಂದರು.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಡಿಯೋಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ವೃದ್ಧರು ಯಾವಾಗಲೂ ಒಬ್ಬಂಟಿಯಾಗಿರುವುದಿಲ್ಲ. ಅವರೊಂದಿಗೆ ನೆರೆಹೊರೆಯವರು ಸದಾ ಇರುತ್ತಾರೆ ಎಂದು ತಿಳಿಸಿದರು.

ಇನ್ನೋರ್ವ ಇನ್​ಸ್ಟಾಗ್ರಾಮ್​ ಬಳಕೆದಾರ ನಾವು ನಮ್ಮ ಕುಟುಂಬದೊಂದಿಗೆ ಭಾಂದವ್ಯವನ್ನು ಹೊಂದಿರುತ್ತೇವೆ. ನಮ್ಮನ್ನು ಹೆತ್ತವರಿಗಿಂತ ಹೆಚ್ಚು ನಮ್ಮ ಅಜ್ಜಿ ಅಜ್ಜನನ್ನು ಪ್ರೀತಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net