

Fake Apple: ಇಂದಿನ ಆಧುನಿಕ ಮಾರುಕಟ್ಟೆಯಲ್ಲಿ ಲಾಭದ ದೃಷ್ಟಿಯಿಂದ ನಕಲಿ ಹಣ್ಣು, ತರಕಾರಿಗಳ ಮಾರಾಟ ಹೆಚ್ಚಾಗಿದೆ. ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎನ್ನುವುದು ಹಿರಿಯರ ಮಾತು. ಆದರೆ ಪ್ರಸ್ತುತ ಪರಿಸ್ಥಿತಿ ಆ ಅರ್ಥವನ್ನು ಸಂಪೂರ್ಣವಾಗಿ ಬದಲಾಯಿಸಿದೆ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೊಳೆಯುವ, ಬಾಯಲ್ಲಿ ನೀರು ತರಿಸುವ ಸೇಬುಗಳಿದ್ದರು, ಅವುಗಳನ್ನು ನಕಲಿ ಎಂದು ಗುರುತಿಸುವುದು ಕಷ್ಟ. ಅನೇಕ ಅಂಗಡಿಗಳಲ್ಲಿ ಸೇಬುಗಳನ್ನು ಹೊಳೆಯುವಂತೆ ಮಾಡಲು ಅವುಗಳ ಮೇಲೆ ಮೇಣವನ್ನು ಹಚ್ಚುತ್ತಾರೆ. ಇದು ಮನುಷ್ಯರ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮೇಣ ಹಚ್ಚಿದ ಸೇಬುಗಳನ್ನು ಗುರುತಿಸಲು ಈ ಸಲಹೆ ಬಳಸಿ ಮತ್ತು ಜಾಗರೂಕರಾಗಿರಿ.
ಮೇಣದ ಸೇಬುಗಳು ಆರೋಗ್ಯಕ್ಕೆ ಅಪಾಯಕಾರಿ
ಮೇಣ ಹಚ್ಚಿದಂತ ಸೇಬುಗಳನ್ನು ತಿನ್ನುವುದರಿಂದ ಹಲವು ಅಪಾಯಗಳಿವೆ. ಹಲವು ಬಾರಿ, ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಮೇಣವನ್ನು ಸೇಬಿನ ಮೇಲೆ ಬಳಸಲಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಇದರ ಸೇವನೆಯು ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಮೇಣ ಹಚ್ಚಿದ ಸೇಬುಗಳನ್ನು ಗುರುತಿಸುವುದು ಹೇಗೆ?
ಬಿಸಿ ನೀರಿನಿಂದ ತೊಳೆಯಿರಿ.
ಮಾರುಕಟ್ಟೆಯಲ್ಲಿ ಸೇಬುಗಳನ್ನು ಖರೀದಿಸಿದ ನಂತರ, ಅವುಗಳನ್ನು ಬಿಸಿ ನೀರಿನಿಂದ ತೊಳೆಯಿರಿ. ಕೆಲಕವು ನಿಮಿಷಗಳ ಕಾಳ ಬಿಸಿ ಮಾಡಿದ ನೀರಿನಲ್ಲಿ ಇರಿಸಿ. ಸೇಬಿನ ಮೇಲ್ಮೈಯಲ್ಲಿ ಯಾವುದೇ ಎಣ್ಣೆಯುಕ್ತ ಅಥವಾ ಮೇಣದ ಪದರವು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಅದಕ್ಕೆ ಮೇಣವನ್ನು ಲೇಪಿಸಲಾಗಿದೆ ಎಂದು ತಿಳಿಯಬಹುದು.
ಚಾಕುವಿನಿಂದ ಹಣ್ಣಿನ ಮೇಲೆ ಗೀಚಿ
ಚಾಕುವಿನಿಂದ ಸೇಬುವಿನ ಮೇಲೆ ಲಘುವಾಗಿ ಗೀಚುವ ಮೂಲಕವೂ ಪರಿಶೀಲಿಸಬಹುದು. ಯಾವುದೇ ರೀತಿಯ ಬಿಳಿ ಪದರು ಅದರಿಂದ ಬಿದ್ದರೆ, ಅದಕ್ಕೆ ಮೇಣವನ್ನು ಲೇಪಿಸಲಾಗಿದೆ ಎಂದು ಅರ್ಥ.
ಹೊಳೆಯುವ ಸೇಬುಗಳನ್ನು ಖರೀದಿಸಬೇಡಿ.
ಸೇಬನ್ನು ಖರೀದಿಸುವಾಗ, ಯಾವಾಗಲೂ ಅದರ ಹೊಳಪನ್ನು ನೋಡಿ. ಸೇಬು ತುಂಬಾ ಹೊಳೆಯುತ್ತಿದ್ದರೆ, ಅದಕ್ಕೆ ಖಂಡಿತವಾಗಿಯೂ ರಾಸಾಯನಿಕ ಬಣ್ಣ ಬಳಿದಿರುತ್ತದೆ. ಕೆಲವೊಮ್ಮೆ, ಬಿಳಿ ಮೇಣದ ಅಂಶದಿಂದ ಸೇಬಿನ ಹೊಳಪು ಹೆಚ್ಚಾಗುತ್ತದೆ. ವಾಸ್ತವವಾಗಿ, ನೈಸರ್ಗಿಕ ಸೇಬಿನ ಹೊಳಪು ಬಣ್ಣದಲ್ಲಿ ನಾರ್ಮಲ್ ಆಗಿರುತ್ತದೆ.
ವಾಸನೆಯಿಂದ ನಕಲಿ ಹಣ್ಣನ್ನು ಗುರುತಿಸಿ
ನೈಸರ್ಗಿಕ ಸೇಬುಗಳು ಸಿಹಿ ವಾಸನೆಯನ್ನು ಹೊಂದಿರುತ್ತವೆ. ಆದರೆ ರಾಸಾಯನಿಕ ಬಳಸಿದ ಹಣ್ಣುಗಳಿಗೆ ಆ ವಾಸನೆ ಇರುವುದಿಲ್ಲ. ಅಹಿತಕರ ವಾಸನೆಯೂ ಇರುವುದಿಲ್ಲ. ಆದ್ದರಿಂದ, ಸೇಬನ್ನು ಖರೀದಿಸುವ ಮೊದಲು, ಲಘುವಾಗಿ ವಾಸನೆ ನೋಡಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ.