

ಬೇಕರಿ ಯಲ್ಲಿ ಸಿಗುವ ಕೆಲವೊಂದು ಕಲರ್ ಕಲರ್ ಸ್ವೀಟ್ಸ್‌ಗಳು, ಸ್ವಲ್ಪ ತುಪ್ಪ ಹಾಕಿ ಮಾಡಿದ, ಸಿಹಿ ಜಿಲೇಬಿಗಳು, ಬಾಯಲ್ಲಿ ಇಟ್ಟಾಗಲೇ ಕರಗಿ ಹೋಗು ವಂತಹ ರಸಗುಲ್ಲಾಗಳು! ಹೀಗೆ ಹಲವು ಬಗೆಯ ಸಿಹಿ ತಿಂಡಿಗಳು ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮತ್ತೆ ಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಹೆಚ್ಚಿಸುತ್ತದೆ! ಖಾರವಾಗಿರುವ ಆಹಾರ ಪದಾರ್ಥಗಳಿಗಿಂತ, ಸ್ವಲ್ಪ ಸಿಹಿಯಾಗಿರುವ ತಿಂಡಿ ತಿನಿಸುಗಳನ್ನು ಸೇವಿಸಲು, ಹೆಚ್ಚಿನವರು ಇಷ್ಟಪಡುತ್ತಾರೆ.
ಬಾಯಿ ರುಚಿ ಹೆಚ್ಚಿಸುವ, ಇಂತಹ ಸಿಹಿ ತಿಂಡಿಗಳನ್ನು ಪದೇ ಪದೇ ತಿನ್ನುವುದರಿಂದ, ಮುಂದಿನ ದಿನಗಳಲ್ಲಿ ಒಂದರ ಮೇಲೊಂದು ಆರೋಗ್ಯ ಸಮಸ್ಯೆಗಳು, ನಿಮ್ಮ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತೆ.
ಮಧುಮೇಹ ಇದ್ದವರು ತಿನ್ನಬಾರದು
ಬಾಯಿಯ ರುಚಿಯನ್ನು ಹೆಚ್ಚಿಸುವ ಬೇಕರಿಯ ಸಿಹಿ ಪದಾರ್ಥಗಳಲ್ಲಿ ಕೃತಕ ಸಕ್ಕರೆ ಅಂಶ ಹೆಚ್ಚಾಗಿ ಬಳಸುವು ದರಿಂದ, ಆರೋಗ್ಯದ ಮೇಲೆ ಬೇಗನೆ ಅಡ್ಡಪರಿಣಾಮ ಗಳು ಕಂಡು ಬರುವ ಸಾಧ್ಯತೆ ಇರುತ್ತದೆ.
ಪ್ರಮುಖವಾಗಿ ಬೇಕರಿಯಲ್ಲಿ ಸಿಗುವ ಸಿಹಿ ತಿಂಡಿಗಳಲ್ಲಿ ಹಾಗೂ ಕೇಕ್‌ನಲ್ಲಿ ಕೃತಕ ಸಕ್ಕರೆ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.
ಹೀಗಾಗಿ ಇಂತಹ ಸಿಹಿ ಪದಾರ್ಥಗಳನ್ನು ಸೇವನೆ ಮಾಡು ವುದರಿಂದ, ದೇಹದಲ್ಲಿ ಕ್ಯಾಲೋರಿ ಅಂಶಗಳು ಕೂಡ ಹೆಚ್ಚಾಗಿ ಬಿಡುತ್ತದೆ.ಕೊನೆಗೆ ಇದೇ ಕಾರಣದಿಂದಾಗಿ ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಶುಗರ್ ಬಿಪಿ, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕೂಡ ಬಹಳ ಸಣ್ಣ ವಯಸ್ಸಿಗೆಯೇ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಲಿವರ್‌ಗೆ ಸಂಬಂಧಪಟ್ಟ ಸಮಸ್ಯೆ ಇದೆಯಾ?
ಲಿವರ್‌ಗೆ ಸಂಬಂಧ ಪಟ್ಟ ಸಮಸ್ಯೆಗಳಿಂದ ಬಳಲು ತ್ತಿದ್ದರೆ, ಇಂತಹ ಸಿಹಿ ತಿಂಡಿಗಳಿಂದ ದೂರ ವಿದ್ದರೆ ಒಳ್ಳೆಯದು.
ಯಾಕೆಂದ್ರೆ ಹೆಚ್ಚಿನ ಪ್ರಮಾಣದ ಕೃತಕ ಸಕ್ಕರೆಯಂಶ ವನ್ನು ಕಂಡು ಬರುವ ಸಿಹಿ ತಿಂಡಿಗಳನ್ನು, ಸೇವನೆ ಮಾಡಿದರೆ, ದಿನಾ ಹೋದ ಹಾಗೆ, ದೇಹದ ಲಿವರ್ ಭಾಗದಲ್ಲಿ ಕೊಬ್ಬಿನ ಅಂಶದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಕೊನೆಗೆ ಇದೇ ಕಾರಣದಿಂದ, ಲಿವರ್‌ಗೆ ಸಂಬಂಧ ಪಟ್ಟ ಸಮಸ್ಯೆಗಳು ಕೈಮೀರಿ ಹೋಗುವ ಅಪಾಯ ಹೆಚ್ಚಾಗಿರುತ್ತದೆ.
ಹೃದಯ ಸಂಬಂಧಿ ಕಾಯಿಲೆಯವರೂ ತಿನ್ನಬಾರದು
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಇಲ್ಲಾಂದ್ರೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು ಉಪ್ಪು ಹಾಗೂ ಸಿಹಿ ಪದಾರ್ಥಗಳಿಂದ ದೂರವಿರಬೇಕು. ಅದರಲ್ಲೂ ಕೃತಕ ಅಂಶ ಇರುವ ಸಿಹಿ ಪದಾರ್ಥಗಳು, ಹೃದಯದ ಕಾಯಿಲೆಯ ಅಪಾಯ