8000 ವರ್ಷಗಳ ಹಿಂದಿನ ಈ ಮೂಲಿಕೆಯಿಂದ ಎಷ್ಟೆಲ್ಲಾ ಪ್ರಯೋಜನ; ತಿಳಿದ್ರೆ ತಪ್ಪದೆ ನೀವು ಬಳಸುತ್ತೀರಾ

Untitled-design-2024-09-10T195558.407
Published on

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ, ಆಹಾರಕ್ರಮ, ಒತ್ತಡ ಹೀಗೆ ಹಲವು ಕಾರಣಗಳಿಂದ ಸುಸ್ತು , ನಿಶಕ್ತಿ ಅನುಭವಿಸುತ್ತಿರುತ್ತೇವೆ. ಅದನ್ನು ಸರಿಪಡಿಸಿಕೊಳ್ಳಲು ಆಸ್ಪತ್ರೆ, ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಮ್ಮ ಪೂವರ್ಜರು ಇವೆಲ್ಲವೂ ಇಲ್ಲದೆ ಅಗಾಧ ಶಕ್ತಿಶಾಲಿಯಾಗಿದ್ದರು. ಅವರ ದೇಹವು ತುಂಬಾ ಬಲವಾದ ಮತ್ತು ಸ್ನಾಯುಗಳಿಂದ ಕೂಡಿತ್ತು. ಅದಕ್ಕೆಲ್ಲಾ ಕಾರಣವಾಗಿದ್ದು ಅವರು ತಮ್ಮ ಆಹಾರದ ಜತೆಗೆ ಕೆಲವು ಆಯುರ್ವೇದ ಗಿಡಮೂಲಿಕೆಗಳನ್ನು ಬಳಸುತ್ತಿದ್ದರು.

ಸುಮಾರು 8000 ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಆಯುರ್ವೇದವನ್ನು ಅನುಸರಿಸಲಾಗುತ್ತಿದೆ ಎಂದು ಎನ್‌ಸಿಬಿಐನಲ್ಲಿ ಲಭ್ಯವಿರುವ ಸಂಶೋಧನೆಗಳು ಹೇಳುತ್ತವೆ. ಇವುಗಳಲ್ಲಿ ಅಶ್ವಗಂಧವನ್ನು ಬಹುತೇಕ ಎಲ್ಲಾ ವರ್ಷಗಳಲ್ಲಿ ರಾಸಾಯನಿಕವಾಗಿ ಬಳಸಲಾಗಿದೆ. ಆಯುರ್ವೇದದ ಚರಕ ಸಂಹಿತೆಯನ್ನು ಬರೆದಿರುವ ಮಹರ್ಷಿ ಚರಕ ಅವರು ಅಶ್ವಗಂಧದ ಸರಿಯಾದ ಬಳಕೆಯನ್ನು ವಿವರಿಸಿದ್ದಾರೆ. ಅದರ ಕಚ್ಚಾ ಮೂಲವನ್ನು ಪುಡಿಗೆ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅದರ ಪೂರಕಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಅಶ್ವಗಂಧವನ್ನು ಬಳಸುವುದರಿಂದ ದೇಹದಲ್ಲಿನ ಪ್ರತಿಯೊಂದು ಭಾಗದ ದೌರ್ಬಲ್ಯವನ್ನು ತೆಗೆದುಹಾಕಬಹುದು. ಇದು ದೈಹಿಕ, ಲೈಂಗಿಕ ಮತ್ತು ಪೌಷ್ಟಿಕಾಂಶದ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಎಂದೆ ಅಧ್ಯಯನವೊಂದು ತಿಳಿಸಿದೆ. ಇದು ಇಡೀ ದೇಹದಲ್ಲಿ ಹೊಸ ಹುರುಪು ತುಂಬುತ್ತದೆ ಎಂದು ಹೇಳಲಾಗುತ್ತದೆ.

ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆ ಇರುವವರು ಅಶ್ವಗಂಧವನ್ನು ಸೇವಿಸಿದರೆ ಅವರ ಸ್ಥಿತಿ ಸುಧಾರಿಸುತ್ತದೆ. ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಈ ಮೂಲಿಕೆಯನ್ನು ಬಳಸಬಹುದು. ನೀದ್ರಾಹಿನತೆಯನ್ನು ಹೋಗಲಾಡಿಸುತ್ತದೆ. ಅಶ್ವಗಂಧದ ಬಳಕೆ ಮತ್ತು ಡೋಸೇಜ್ ಎಲ್ಲರಿಗೂ ವಿಭಿನ್ನವಾಗಿರಬಹುದು. ನಿಮಗಾಗಿ ಉತ್ತಮ ವಿಧಾನವನ್ನು ತಿಳಿಯಲು ತಜ್ಞರ ಸಲಹೆ ಪಡೆದು ಬಳಸಿ. ಆದರೆ ಕೆಲವರು ರಾತ್ರಿಯಲ್ಲಿ ಉಗುರು ಬೆಚ್ಚಗಿನ ಹಾಲು ಅಥವಾ ನೀರಿನಲ್ಲಿ ಇದರ ಪುಡಿಯನ್ನು ಸೇವಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net