

ಆರೋಗ್ಯಕ್ಕೆ ಒಳ್ಳೆಯದೆಂದು. ದೇವರ ಹೆಸರು ಹೇಳಿ ಉಪವಾಸ ಮಾಡುವವರನ್ನು, ಅಲ್ಲದೆ ಫಿಟ್ ಆಗಿರಲು ಹಲವು ವ್ಯಾಯಾಮಗಳು, ಆಹಾರ ಪದ್ಧತಿ ಜತೆಗೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಇರುವುದನ್ನು ನೋಡುತ್ತಿರುತ್ತೇವೆ. ಮಧ್ಯಂತರ ಉಪವಾಸ ಎಂಬುದು ಈ ದಿನಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿದೆ. ಜನರು ಈ ಹೊಸ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದರ ಫಲಿತಾಂಶವನ್ನು ಪಡೆಯುತ್ತಿದ್ದಾರೆ ಎಂದರೆ ತಪ್ಪಲ್ಲ. ಸಾಮಾನ್ಯ ಜನರು, ಸೆಲಿಬ್ರಿಟಿಗಳು ಇದನ್ನು ಫಾಲೋ ಮಾಡುತ್ತಿದ್ದಾರೆ.
ಆದರೆ ಇಲ್ಲಿಯವರೆಗೆ ಅದರ ಪ್ರಯೋಜನಗಳ ಬಗ್ಗೆ ಮಾತ್ರ ತಿಳಿದಿದ್ದೇವೆ, ಮಧ್ಯಂತರ ಉಪವಾಸದಿಂದ ನಮಗಾಗು ಅನಾನುಕೂಲಗಳು ಅಷ್ಟೆ ಇದೆ ಎನ್ನುವುದು ಸತ್ಯವಾಗಿದೆ. ಮಧ್ಯಂತರ ಉಪವಾಸವು ಅನೇಕ ಭಾಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಮಾಡುವ ಉಪವಾಸದಲ್ಲಿ ನಿಗದಿತ ಸಮಯದಲ್ಲಿ ಮಾತ್ರ ಆಹಾರವನ್ನು ಸೇವಿಸಬಹುದು. ನೀವು ದಿನವಿಡೀ ಕೆಲವು ಗಂಟೆಗಳ ಕಾಲ ಮಾತ್ರ ತಿನ್ನಬಹುದು. ಇದರಿಂದ ದೇಹದಲ್ಲಿ ಹೆಚ್ಚಿನ ಕ್ಯಾಲೊರಿಗಳು ವ್ಯರ್ಥವಾಗುವುದಿಲ್ಲ ಮತ್ತು ಆಹಾರವು ಸಹ ನಿಯಂತ್ರಣದಲ್ಲಿರುತ್ತದೆ. ಆದರೆ ಮಧ್ಯಂತರ ಉಪವಾಸದಲ್ಲಿ ನೀವು ಕೆಲವು ದಿನಗಳವರೆಗೆ ನಿಗದಿತ ಸಮಯದಲ್ಲಿ ಮಾತ್ರ ಆಹಾರವನ್ನು ಸೇವಿಸಬೇಕು.
ಮಧ್ಯಂತರ ಉಪವಾಸದಲ್ಲಿರುವ ವಿಧಗಳು ಹೀಗಿವೆ:
ಮಧ್ಯಂತರ ಉಪವಾಸದಲ್ಲಿ 14 ರಿಂದ 16 ಗಂಟೆಗಳ ಕಾಲ ಏನನ್ನೂ ತಿನ್ನದೆ ಅಥವಾ ಕುಡಿಯದೆ ಇರುವುದು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ದೀರ್ಘಕಾಲದವರೆಗೆ ಉಪವಾಸ ಮಾಡಿದರೆ ಎಲೆಕ್ಟ್ರೋಲೈಟ್ ಅಸಮತೋಲನ ಸಂಭವಿಸುತ್ತದೆ ಮತ್ತು ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ. ಇದು ಅನಿಯಮಿತ ಹೃದಯ ಬಡಿತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಅಧ್ಯಯನವೊಂದು 8 ಗಂಟೆಯೊಳಗೆ ಆಹಾರವನ್ನು ಸೇವಿಸುವುದರಿಂದ ಹೃದ್ರೋಗ ಉಂಟಾಗುತ್ತದೆ ಎಂದು ಹೇಳಿದೆ. ಆದರೆ ಅದನ್ನು ಅಧಿಕೃತ ಪಡೆಸಲು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದೆ.
ಜೀರ್ಣಕ್ರಿಯೆ, ಚಯಾಪಚಯ, ನಿರ್ವಿಶೀಕರಣ ಮತ್ತು ಹಾರ್ಮೋನ್ ನಿಯಂತ್ರಣದಲ್ಲಿ ಲಿವರ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಪರಿಸ್ಥಿತಿಯಲ್ಲಿ ಎಲ್ಲಾ ಕಾರ್ಯಗಳು ಮಧ್ಯಂತರ ಉಪವಾಸದಿಂದ ಪ್ರಭಾವಿತವಾಗಿರುತ್ತದೆ. ವಿಶೇಷವಾಗಿ ಈಗಾಗಲೇ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವವರಿಗೆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಆದರೆ ಕೆಲವು ಸಂಶೋಧನೆಗಳ ಪ್ರಕಾರ, ಸಾಮಾನ್ಯವಾಗಿ ಮಾಡುವ ಉಪವಾಸವು ಯಕೃತ್ತಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಆದರೆ ಸಂಶೋಧನೆಯೀದ ಈ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ.