ವಿಪರೀತ ಬೆನ್ನು ನೋವು ಕಾಡುತ್ತಿದ್ಯಾ? ಈ ಸಮಸ್ಯೆಗೆ ಕಾರಣಗಳೇನು? ಇಲ್ಲಿವೆ ಸರಳ ಪರಿಹಾರ | Back Pain

ವಿಜಯವಾಣಿ (37)
Published on

Back Pain: ಪ್ರಸ್ತುತ, ಕಾಲಘಟ್ಟದಲ್ಲಿ ಯಾರಿಗೆ ಬೆನ್ನು ನೋವು ಕಾಡುವುದಿಲ್ಲ ಹೇಳಿ? ಬಹುತೇಕರಿಗೆ ಈ ಸಮಸ್ಯೆ ತೀರ ಸಾಮಾನ್ಯವಾಗಿಬಿಟ್ಟಿದೆ. ಬೆನ್ನಿನಲ್ಲಿ ಕಾಡುವ ನೋವು ಇಂದು ಅನೇಕರನ್ನು ಬೆಂಬಿಡದೆ ಕಾಡುತ್ತಿದೆ ಎಂಬುದರಲ್ಲಿ ಅನುಮಾನವೇ ಬೇಡ. ಇದಕ್ಕೆ ಬದಲಾಗುತ್ತಿರುವ ಜೀವನಶೈಲಿ, ಕೆಲಸದ ಒತ್ತಡ, ಕುಳಿತುಕೊಳ್ಳುವ ತಪ್ಪು ಭಂಗಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯೇ ಪ್ರಮುಖ ಕಾರಣಗಳು.

ಇವೆಲ್ಲವೂ ಬೆನ್ನು ನೋವಿಗೆ ಮೂಲ ಕಾರಣ. ಕೆಲವರಿಗೆ ಈ ಸಮಸ್ಯೆ ತಾತ್ಕಾಲಿಕವಾಗಿದ್ದರೆ, ಇನ್ನೂ ಕೆಲವರಿಗೆ ಬಹಳ ವರ್ಷಗಳಿಂದ ನೋವು ಕಾಡುತ್ತಿರುತ್ತದೆ. ಇದು ದೇಹದ ಮೇಲೆ ಕೆಲವು ಗಂಭೀರ ಪರಿಣಾಮ ಕೂಡ ಬೀರಬಹುದು. ದಿನದಲ್ಲಿ 9ರಿಂದ 10 ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವ ಜನರಲ್ಲಿ ಈ ಸಮಸ್ಯೆ ಹೆಚ್ಚು. ಅಷ್ಟಕ್ಕೂ ಇದಕ್ಕೆ ಮುಖ್ಯ ಕಾರಣಗಳೇನು? ನಿವಾರಿಸಿಕೊಳ್ಳುವುದು ಹೇಗೆ? ಎಂಬುದರ ವಿವರ ಇಲ್ಲಿದೆ ಗಮನಿಸಿ.

ಬೆನ್ನು ನೋವಿಗೆ ಮುಖ್ಯ ಕಾರಣ

1. ಕುಳಿತುಕೊಳ್ಳುವ ಭಂಗಿ: ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವಾಗ, ಬಾಗಿಸಿ ಕೂರುವುದು ಮತ್ತು ದೀರ್ಘಕಾಲ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು ಬೆನ್ನು ನೋವಿಗೆ ಕಾರಣವಾಗಬಹುದು. ಹೀಗಾಗಿ, ನೀವು ಕುರ್ಚಿಯಲ್ಲಿ ಕೂರುವಾಗ ಭಂಗಿ ಬಗ್ಗೆ ಗಮನವಿರಲಿ. ಹೇಗೆ ಕುಳಿತು ಕೆಲಸ ಮಾಡುತ್ತೀರಿ? ಎಷ್ಟು ಗಂಟೆಗಳ ಕಾಲ ಕೂರುತ್ತೀರಿ? ಎಂಬುದನ್ನು ಸರಿಯಾಗಿ ಗಮನಿಸಿ. ಇದಲ್ಲದೆ, ನೀವು ಮಲಗುವ ರೀತಿ ಕೂಡ ಬೆನ್ನು ನೋವನ್ನು ಉಲ್ಬಣಿಸಬಹುದು.

2. ವ್ಯಾಯಾಮ ಕೊರತೆ: ಇತ್ತೀಚಿನ ದಿನಗಳಲ್ಲಿ, ಅನೇಕರು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಿರಾಸಕ್ತಿ ಹೊಂದಿದ್ದಾರೆ. ಇಂದು ತಮ್ಮ ದೇಹವನ್ನು ವ್ಯಾಯಾಮ, ವಾಕಿಂಗ್ ಮೂಲಕ​ ದಂಡಿಸಲು ಹಿಂದೇಟು ಹಾಕುತ್ತಿರುವ ಜನರು, ಇಂತಹ ಸಮಸ್ಯೆಗಳನ್ನು ಕೈಬೀಸಿ ಕರೆಯುತ್ತಿದ್ದಾರೆ. ವ್ಯಾಯಾಮದ ಕೊರತೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವುದು ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಇದು ನೋವಿಗೆ ಕಾರಣವಾಗುತ್ತದೆ.

3. ಭಾರವಾದ ತೂಕ ಎತ್ತುವುದು: ಏಕಾಏಕಿ ಹೆಚ್ಚಿನ ತೂಕವನ್ನು ಎತ್ತುವುದರಿಂದ ಸೊಂಟ ಉಳುಕು ಅಥವಾ ಬೆನ್ನುಮೂಳೆಯ ಮೇಲೆ ತೀವ್ರ ಒತ್ತಡ ಹೇರಬಹುದು. ಇದು ಸಹ ಬೆನ್ನುನೋವಿಗೆ ಕಾರಣವಾಗಬಹುದು.

4. ಅಧಿಕ ತೂಕ: ವ್ಯಾಯಾಮದ ಕೊರತೆಯಿಂದ ದೇಹದ ತೂಕ ಹೆಚ್ಚಾಗುವುದು ಸಹಜ. ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀರಿದಾಗ ಈ ಸಮಸ್ಯೆ ವಿಪರೀತವಾಗಿ ಕಾಡುತ್ತದೆ.

ತಡೆಗಟ್ಟಲು ಪರಿಹಾರವೇನು?

1. ಸರಿಯಾದ ಭಂಗಿ: ನೀವು ಕುಳಿತುಕೊಳ್ಳುವ ಕುರ್ಚಿಯಲ್ಲಿ ಯಾವ ರೀತಿ ಕೂರಬೇಕು? ಎಂಬುದನ್ನು ಮೊದಲು ತಿಳಿಯಿರಿ. ಕಂಬದಂತೆ ನೇರವಾಗಿ ಕುಳಿತುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಲ್ಯಾಪ್‌ಟಾಪ್ ಬಳಸುವಾಗ, ಕಣ್ಣಿನ ಮಟ್ಟದಲ್ಲಿರುವಂತೆ ನೋಡಿಕೊಳ್ಳಿ. ಅಲ್ಲದೆ, ನಿದ್ರೆಗೆ ಜಾರುವಾಗ ಸರಿಯಾದ ದಿಂಬು ಬಳಸಿಕೊಳ್ಳುವುದು ಬೆನ್ನುಮೂಳೆಗೆ ರಿಲೀಫ್​ ನೀಡುತ್ತದೆ.

2. ನಿಯಮಿತ ವ್ಯಾಯಾಮ: ಪ್ರತಿದಿನ ವಾಕಿಂಗ್​, ಜಾಗಿಂಗ್, ಯೋಗ, ಸ್ವಿಮಿಂಗ್​ ಮತ್ತು ಬೆನ್ನು ಹಿಗ್ಗಿಸುವ ವ್ಯಾಯಾಮಗಳನ್ನು ಮಾಡುವುದರಿಂದ ಬೆನ್ನು ನೋವಿಗೆ ಗುಡ್​ಬೈ ಹೇಳಬಹುದು. ಇವುಗಳನ್ನು ಮಾಡುವುದರಿಂದ ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳು ಬಲಗೊಳ್ಳುತ್ತವೆ.

ಇದನ್ನೂ ಓದಿ: ಆಪರೇಷನ್​ ಸಿಂಧೂರ ಹೆಸರು ಬರೆದಿದ್ದಕ್ಕೆ FIR ದಾಖಲು: ಕೇರಳ ನೆಲದಲ್ಲಿ ಪಾಕ್​ ಪರ ನಿಲುವು, ನಿಜಕ್ಕೂ ಇದು ಆಘಾತಕಾರಿ​! Operation Sindoor3. ತೂಕದ ಮೇಲಿರಲಿ ಗಮನ: ಹೆಚ್ಚುವರಿ ತೂಕವು ಬೆನ್ನುಮೂಳೆಯ ಮೇಲೆ ಹೊರೆಯಾಗುತ್ತದೆ. ಆದ್ದರಿಂದ, ಪೌಷ್ಠಿಕ ಆಹಾರ ಮತ್ತು ವ್ಯಾಯಾಮದಿಂದ ತೂಕವನ್ನು ನಿಯಂತ್ರಣಕ್ಕೆ ತನ್ನಿ. ಈ ಅಭ್ಯಾಸ ನಿಮ್ಮನ್ನು ಬೆನ್ನು ನೋವಿನಿಂದ ದೂರವಿಡುತ್ತದೆ.

4. ತೂಕ ಎತ್ತುವಾಗ ಎಚ್ಚರ: ಭಾರೀ ತೂಕವನ್ನು ಎತ್ತುವಾಗಲೆಲ್ಲಾ, ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮಾತ್ರ ಎತ್ತಬೇಕು. ಇದು ನಿಮ್ಮ ಬೆನ್ನುಮೂಳೆಯ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಮತ್ತು ಎತ್ತುವ ವಸ್ತುಗಳ ಭಾರವನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.

5. ಮಾನಸಿಕ ಒತ್ತಡ: ನಮ್ಮ ದೇಹಕ್ಕೆ ಪ್ರತಿದಿನ ಹೆಚ್ಚುವರಿ ವಿಶ್ರಾಂತಿ ಅತ್ಯಗತ್ಯ. ಮಾನಸಿಕ ಒತ್ತಡವು ಬೆನ್ನು ನೋವಿಗೆ ಕಾರಣವಾಗಬಹುದು. ಹೀಗಾಗಿಯೇ, ಧ್ಯಾನ ಮತ್ತು ಪ್ರಾಣಾಯಾಮವು ದೈನಂದಿನ ದಿನಚರಿಯ ಭಾಗವಾಗಿದರೆ ಒಳಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net