

Walking : ನಡಿಗೆಯು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಕ್ಕೆ ಕನಿಷ್ಠ ಸಾವಿರ ಹೆಜ್ಜೆಗಳನ್ನಾದರೂ ಇಡಬೇಕೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅನೇಕ ಜನರು ಬೆಳಗ್ಗೆ ಅಥವಾ ಸಂಜೆ ವೇಳೆ ಸ್ವಲ್ಪ ಸಮಯ ನಡೆಯುತ್ತಾರೆ.
ನಡೆಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ತೂಕವನ್ನು ಕಡಿಮೆ ಮಾಡುವ ಜೊತೆಗೆ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ನೀವು ನಡೆಯುವಾಗ ಕೆಲವು ಸಣ್ಣ ತಪ್ಪುಗಳನ್ನು ಮಾಡಿದರೆ, ನಿಮ್ಮ ಎಲ್ಲಾ ಶ್ರಮ ವ್ಯರ್ಥವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ. ಹೌದು ಕೇವಲ ಹೆಜ್ಜೆಗಳನ್ನು ಎಣಿಸಿದರೆ ಸಾಲದು, ಸರಿಯಾದ ತಂತ್ರದೊಂದಿಗೆ ನಡೆಯುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಜನರು ತಾವುಗಳು ನಡೆಯುವಾಗ ಅದರ ಬಗ್ಗೆ ಗಮನ ಹರಿಸುವುದಿಲ್ಲ.
ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಮಾತ್ರ ನೀರು ಕುಡಿಯುವುದು ಅಗತ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ ದೀರ್ಘ ನಡಿಗೆಯ ಸಮಯದಲ್ಲಿಯೂ ಸಹ, ದೇಹದಿಂದ ನೀರು ಮತ್ತು ಎಲೆಕ್ಟ್ರೋಲೈಟ್‌ಗಳು ಬೆವರಿನ ಮೂಲಕ ಬಿಡುಗಡೆಯಾಗುತ್ತವೆ. ನೀವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ, ನೀವು ನಿರ್ಜಲೀಕರಣಗೊಳ್ಳಬಹುದು. ಇದು ಆಯಾಸ, ತಲೆತಿರುಗುವಿಕೆ, ಸ್ನಾಯು ಸೆಳೆತ ಮತ್ತು ಕಡಿಮೆ ಶಕ್ತಿಯ ಮಟ್ಟಗಳಿಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ನಡಿಗೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಡಿಗೆಗೆ ಹೋಗುವ 30 ನಿಮಿಷಗಳ ಮೊದಲು ಒಂದು ಅಥವಾ ಎರಡು ಲೋಟ ನೀರು ಕುಡಿಯಬೇಕಾಗುತ್ತದೆ.
ನಡೆಯುವಾಗ ಚಪ್ಪಲಿ, ಅಥವಾ ಇತರೆ ಸ್ಟೈಲಿಷ್ ಬೂಟುಗಳನ್ನು ಧರಿಸಿ ವಾಕಿಂಗ್ ಮಾಡಿದರೆ ಇದು ಕಾಲು ನೋವು, ಗುಳ್ಳೆಗಳು, ಹಿಮ್ಮಡಿಯ ಗಾಯಗಳು, ಮೊಣಕಾಲು ಮತ್ತು ಬೆನ್ನು ನೋವನ್ನು ಸಹ ಉಂಟುಮಾಡಬಹುದು. ತಪ್ಪಾದ ಬೂಟುಗಳು ನಡೆಯುವ ಭಂಗಿಯನ್ನು ಸಹ ಹಾಳುಮಾಡುತ್ತವೆ. ಹಾಗಾಗಿ ಯಾವಾಗಲೂ ಉತ್ತಮ ಗುಣಮಟ್ಟದ ಕ್ರೀಡಾ ಬೂಟು ಅಥವಾ ವಾಕಿಂಗ್ ಬೂಟುಗಳನ್ನು ಧರಿಸಿ.
ದೊಡ್ಡ ಹೆಜ್ಜೆಗಳನ್ನು ಇಡುವುದರಿಂದ ವೇಗವಾಗಿ ನಡೆಯಲು ಮತ್ತು ತ್ವರಿತ ಫಲಿತಾಂಶಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಬಹಳ ಉದ್ದವಾದ ಹೆಜ್ಜೆಗಳನ್ನು ಇಡುವುದರಿಂದ ನಿಮ್ಮ ದೇಹದ ಸಮತೋಲನವು ತೊಂದರೆಗೊಳಗಾಗುತ್ತದೆ. ಇದು ಕಾಲಿನ ಸ್ನಾಯುಗಳ ಮೇಲೆ, ವಿಶೇಷವಾಗಿ ಕರುಗಳು ಮತ್ತು ಕೀಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಇದು ನೋವು ಮತ್ತು ಗಾಯಕ್ಕೆ ಕಾರಣವಾಗಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ವೇಗವಾಗಿ ನಡೆಯಲು ಪ್ರಾರಂಭಿಸಿ ನಂತರ ಹಠಾತ್ತನೆ ನಿಲ್ಲಿಸುವುದು ಆರೋಗ್ಯಕ್ಕೆ ಹಾನಿಕಾರಕ. ಇದು ಸ್ನಾಯುಗಳ ಒತ್ತಡ ಮತ್ತು ಗಾಯದ ಅಪಾಯ ಹೆಚ್ಚಾಗುತ್ತದೆ. ಹಠಾತ್ತನೆ ನಡೆಯುವುದನ್ನು ನಿಲ್ಲಿಸುವುದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಉಂಟಾಗಬಹುದು. ಇದು ತಲೆತಿರುಗುವಿಕೆಗೆ ಕಾರಣವಾಗಬಹುದು. ಹಾಗಾಗಿ, ನಡಿಗೆಯನ್ನು ಪ್ರಾರಂಭಿಸುವ ಮೊದಲು 5 ನಿಮಿಷಗಳ ಕಾಲ ನಿಧಾನವಾಗಿ ನಡೆಯಲು ಪ್ರಾರಂಭಿಸಿ. ನಡಿಗೆಯನ್ನು ಮುಗಿಸಿದ ನಂತರವೂ, 5 ನಿಮಿಷಗಳ ಕಾಲ ನಿಧಾನವಾಗಿ ನಡೆಯಿರಿ.