ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಅರ್ಪಿಸಿದ 'ಇಳಯರಾಜಾ'| mookambika temple

ilayaraja
Published on

ಕೊಲ್ಲೂರು : ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ 3 ಕೋಟಿ ರೂ. ಮೌಲ್ಯದ ವಜ್ರದ ಕಿರೀಟಗಳು ಮತ್ತು ಚಿನ್ನದ ಕತ್ತಿಯನ್ನು ದಾನ ಮಾಡಿದ್ದಾರೆ.

ಈ ವಿಷಯವನ್ನು ಮೂಕಾಂಬಿಕಾ ದೇವಸ್ಥಾನದ ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ ಅವರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಳಯರಾಜ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಕಿರೀಟಗಳು ಮತ್ತು ಚಿನ್ನದ ಕತ್ತಿಯನ್ನು ದಾನ ಮಾಡುತ್ತಿರುವ ಚಿತ್ರಗಳನ್ನು ಸಹ ಹಂಚಿಕೊಳ್ಳಲಾಗಿದೆ.

ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರ ಮೆರವಣಿಗೆಯಲ್ಲಿ ಶ್ರೀದೇವಿ ಸನ್ನಿಧಿಗೆ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹಾಗೂ ಗ್ರಾಮಸ್ಥರು ಆಗಮಿಸಿದ್ದರು. ಮೂಕಾಂಬಿಕಾ ದಕ್ಷಿಣ ಭಾರತದ ಪ್ರಮುಖ ದೇವಾಲಯವಾಗಿದ್ದು ಇಲ್ಲಿ ಎಲ್ಲಾ ಜಾತಿ ಮತ್ತು ಧರ್ಮದ ಭಕ್ತರು ಆಗಮಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net