ನೀವು ಕೋಳಿ ರಕ್ತ ಕುಡಿಯುತ್ತಿದ್ದೀರಾ? ಹುಷಾರ್​! ಈ ತಪ್ಪನ್ನು ನೀವು ಮಾಡಲೇಬೇಡಿ | Drinking Chicken Blood

Drinking Chicken Blood
Published on

ನವದೆಹಲಿ: ಇತ್ತೀಚಿಗೆ ಸಂಗೀತಗಾರ ಕೋನ್​ ವಾಯ್​ ಸನ್​ ಲೈವ್​ ಕಾರ್ಯಕ್ರಮಲ್ಲಿಯೇ ಕೋಳಿಯನ್ನು ಕೊಂದು ಅದರ ರಕ್ತವನ್ನು ಕುಡಿದಿರುವ (Drinking Chicken Blood)ದೃಶ್ಯವೂ ಆನೇಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಭಾರತದಲ್ಲಿ ಕೋಳಿ ರಕ್ತ ಕುಡಿಯುವುದು ಕಾನೂನು ಬಾಹಿರವಾಗಿದ್ದು, ಈ ರೀತಿಯ ಘಟನೆಗಳು ನಡೆದಾಗ ಮುನ್ನೆಲೆಗೆ ಬರುವುದು ತೀರಾ ಕಡಿಮೆ.

ಸಂಗೀತಗಾರನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಕೋಳಿಯ ರಕ್ತ ಕುಡಿಯುವುದು ಮತ್ತು ಹಸಿ ಮಾಂಸ ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳು ಆಗಲಿವೆ ಎಂದು ಚರ್ಚೆ ನಡೆಯುತ್ತಿದೆ. ವರದಿರಗಳ ಪ್ರಕಾರ, ಕೋಳಿ ರಕ್ತವನ್ನು ಕುಡಿಯುವುದರಿಂದ ಹಲವು ಬ್ಯಾಕ್ಟೀರಿಯಾಗಳು ಗೊತ್ತಾಗದಂತೆ ನಮ್ಮ ದೇಹ ಸೇರಿ ರೋಗಗಳ ಉಲ್ಬಣಕ್ಕೆ ಕಾರಣವಾಗಲಿದೆ.

ವರದಿಗಳ ಪ್ರಕಾರ, ಕೋಳಿ ರಕ್ತವನ್ನು ಕುಡಿಯುವುದರಿಂದ ಹಲವು ಬ್ಯಾಕ್ಟೀರಿಯಾಗಳು ಗೊತ್ತಾಗದಂತೆ ನಮ್ಮ ದೇಹ ಸೇರಿ ರೋಗಗಳ ಉಲ್ಬಣಕ್ಕೆ ಕಾರಣವಾಗಲಿದೆ.

ಸಾಲ್ಮೊನೆಲ್ಲಾ (Salmonella) ಹೆಸರಿನ ಬ್ಯಾಕ್ಟೀರಿಯಾ ಕೋಳಿ ರಕ್ತ ಮತ್ತು ಹಸಿ ಮಾಂಸ ತಿನ್ನುವುದರಿಂದ ನಮ್ಮ ದೇಹ ಸೇರುತ್ತದೆ. ಇದರಿಂದ, ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದ ಸೋಂಕಿಗೆ ಕಾರಣವಾಗಬಹುದು. ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಶೀತ, ತಲೆನೋವು ಮತ್ತು ಮಲದಲ್ಲಿ ರಕ್ತ ಬರುವಂತಹ ಲಕ್ಷಣಗಳು ಕಂಡುಬರುತ್ತವೆ.

ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಗನ್ಸ್ (Clostridium perfringens) ಎಂಬ ಬ್ಯಾಕ್ಟೀರಿಯಾ ಕೋಳಿ ರಕ್ತದ ಮೂಲಕ ಹರಡುತ್ತದೆ. ಅತಿಸಾರವನ್ನು ಉಂಟುಮಾಡಿ ದೇಹದಲ್ಲಿ ವಿಷವನ್ನು ಬಿತ್ತರಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಸಣ್ಣ ಕರುಳಿನ ಮೇಲೆ ಪರಿಣಾಮ ಬೀರಿ ಮಾರಣಾಂತಿಕ ಸ್ಥಿತಿಗೆ ತಲುಪುತ್ತದೆ.

ಹಕ್ಕಿ ಜ್ವರ: ಪಕ್ಷಿ ಜ್ವರ ಎಂದೂ ಕರೆಯಲ್ಪಡುವ ಈ ರೋಗವು ಕೋಳಿಯ ರಕ್ತದ ಸಂಪರ್ಕದ ಮೂಲಕ ಹರಡುತ್ತದೆ. ಈ ವೈರಸ್ನ ಕೆಲವು ತಳಿಗಳು ಮನುಷ್ಯರಿಗೆ ಮಾರಣಾಂತಿಕವಾಗಬಹುದು ಅಥವಾ ಹೃದಯ ಅಥವಾ ಶ್ವಾಸಕೋಶದ ತೊಂದರೆಗಳಿಗೆ ಕಾರಣವಾಗುತ್ತವೆ. ಹೀಗಾಗಿ, ಕೋಳಿಯ ರಕ್ತ ಎಂದಿಗೂ ಕುಡಿಯಬಾರದು ಎಂದು ಎಂದು ಎಂದು ವೈದ್ಯರು ಹೇಳುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net