ನಿಂಬೆ ಹಣ್ಣಿನ ಬೀಜ ಸೇವಿಸುತ್ತಿದ್ದೀರಾ! ಹಾಗಿದ್ದರೆ, ಇದರಿಂದ ಆಗುವ ಪ್ರಯೋಜನಗಳೇನು? |lemon seeds

lemon
Published on

lemon seeds : ನಿಂಬೆಹಣ್ಣಿನಲ್ಲಿ ವಿಟಮಿನ್​ ಸಿ ಸಮೃದ್ಧವಾಗಿದ್ದು, ಇವುಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಹಲವಾರು ಪ್ರಯೋಜಗಳನ್ನು ಪಡೆಯಬಹುದು. ಈ ನಿಂಬೆಹಣ್ಣುಗಳು ವಿಟಮಿನ್ ಸಿ ಜೊತೆಗೆ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೈಬರ್ ಮತ್ತು ವಿಟಮಿನ್ ಬಿ 12 ನಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ನಿಂಬೆಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ಹೃದಯ ಸಂಬಂಧೀ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ಬೀಜಗಳು ಪೋಷಕಾಂಶಗಳಿಂದ ಕೂಡಿದ್ದರಿಂದ ಅನೇಕರು ಇದನ್ನು ತಮ್ಮ ಹಾರದಲ್ಲಿ ಇದನ್ನು ಸೇವಿಸಲು ಬಯಸುತ್ತಾರೆ. ಆದರೆ, ಸೇವಿಸುವಾಗ ಅದರಲ್ಲಿರುವ ಬೀಜಗಳನ್ನು ಎಸೆಯುತ್ತಾರೆ. ಈ ನಿಂಬೆಹಣ್ಣಿನ ಬೀಜಗಳು ಯಾವ ರೀತಿಯ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ನಿಂಬೆ ಹಣ್ಣಿನಿಂದಲ್ಲದೇ ನಿಂಬೆ ಬೀಜಗಳಲ್ಲೂ ಸಹ ಉತ್ತಮ ಪೋಷಕಾಂಶಗಳಿರುತ್ತದೆ. ನಿಂಬೆ ಬೀಜಗಳು ದೇಹಕ್ಕೆ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ವಿಟಮಿನ್ ಸಿ ನಂತಹ ಪ್ರಮುಖ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ.

ನಿಂಬೆ ಬೀಜಗಳಲ್ಲಿರುವ ನಾರಿನಂಶದಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇವುಗಳ ಸೇವನೆಯಿಂದಾಗಿ ಮಲಬದ್ಧತೆ ಹಾಗೂ ಕೊಲೆಸ್ಟ್ರಾಲ್​​ನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನಿಂಬೆ ಬೀಜಗಳು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಹಾಗೆಯೇ ಕ್ಯಾನ್ಸರ್​ನಂತಹ ಕಾಯಿಲೆಗಳು ಬರದಂತೆ ತಡೆಯುತ್ತವೆ.

ನಿಂಬೆ ಬೀಜಗಳನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದುಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವುದರ ಜೊತೆಗೆ, ನಿಂಬೆ ಬೀಜಗಳು ಕೆಲವು ರೀತಿಯ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವಲ್ಲಿ ಮತ್ತು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುವಲ್ಲಿ ಉಪಯುಕ್ತವಾಗಿವೆ.

ನಿಂಬೆ ಬೀಜಗಳನ್ನು ಅತಿಯಾಗಿ ಸೇವಿಸಬಾರದು, ಮಿತವಾಗಿ ಸೇವಿಸಿದರೆ, ನಿಂಬೆ ಬೀಜಗಳು ಸಹ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net