

ಬೆಂಗಳೂರು: ಲೋಳೆಸರ, ಅಲೋವೇರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಇದು ಒಂದು ಪ್ರಸಿದ್ಧ ಔಷಧೀಯ ಸಸ್ಯವಾಗಿದ್ದು, ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಸಸ್ಯ, ಅಲೊವೆರಾ ಅಥವಾ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್ ಸೇರಿದಂತೆ ವಿಟಮಿನ್‍ಗಳಾದ ಎ, ಎಫ್, ಸಿ ಮತ್ತು ಬಿಗಳಿವೆ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದರ ರಸವನ್ನು ಸೌಂದರ್ಯವರ್ಧಕ ಹಾಗೂ ಔಷಧಕ್ಕಾಗಿ ಬಳಸಬಹುದೆಂದು ಹೇಳಲಾಗಿದೆ.
ಅಲೋವೆರಾ ಆರೋಗ್ಯಕರ ಕೂದಲ ಬೆಳವಣಿಗೆಗೆ ಉತ್ತೇಜಿಸಿ, ಕೂದಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ದತದೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಉರಿಯೂತದ ಗುಣಲಕ್ಷಣಗಳು ಮೊಡವೆ ಮತ್ತು ಗಾಯವನ್ನು ಗುಣಪಡಿಸಲು ಪ್ರಯೋಜನಕಾರಿಯಾಗಿದೆ. ಅಲೋವೆರಾ ಜೆಲ್ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ-ಆ್ಯಂಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಡ್ರೋಣ್ ಬಳಸಿ ಮೃತದೇಹ ಪತ್ತೆ ಹಚ್ಚಿದ ಪೊಲೀಸರು..
ಅಲೋವೆರಾ ವಿವಿಧ ಚರ್ಮರೋಗದ ಚಿಕಿತ್ಸೆಗಾಗಿ ಬಳಸಲಾಗುವ ಔಷಧೀ ಗುಣವುಳ್ಳದ್ದಾಗಿದ್ದು, ಇದನ್ನು ಸಾಮಾನ್ಯವಾಗಿ ಮೊದಲ ಮತ್ತು ದ್ವಿತೀಯ ಹಂತದ ಸುಟ್ಟ ಗಾಯಗಳಿಗೆ ಮತ್ತು ಸನ್ ಬರ್ನ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಅಲೋವೆರಾ ಚರ್ಮದ ಮೃದುತ್ವವನ್ನು ಹೆಚ್ಚಿಸುವುದರೆ ಜತೆಗೆ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ. ಲೋಳೆಸರವು ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುವ ಕೋಲಾಜೆನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹಾಗಾಗಿಯೇ ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಇದನ್ನೂ ಓದಿ: ಜ್ವರದಿಂದ ಬಳಲುತ್ತಿರುವ ಮಗುವಿಗೆ ರೇಬೀಸ್ ಲಸಿಕೆ ನೀಡಿದ ನರ್ಸ್: ಮುಂದೆ ನಡೆದಿದ್ದಿಷ್ಟು..
ಅಲೋವೆರಾ ರಸವು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜತೆಗೆ ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯ ವೃದ್ಧಿಯಾಗಲು, ಎದೆ ಉರಿಯನ್ನು ಕಡಿಮೆ ಮಾಡುವುದರಲ್ಲಿ ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
ಅಲೋವೆರಾ ತಲೆಹೊಟ್ಟು ಕಡಿಮೆ ಮಾಡುತ್ತದೆ. ಹಾಗಾಗಿ ಇದರ ಸಾರ/ರಸವನ್ನು ಲೋಷನ್‌ಗಳು, ಕ್ರೀಂಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆ ನೋವು ಶಮನಿಸಲು, ಋತುಚಕ್ರ ನಿಯಂತ್ರಿಸಲು ಸಹ ಇದನ್ನು ಉಪಯೋಗಿಸುತ್ತಾರೆ. ಇದರ ಎಲೆಗಳಿಂದ ಅನೇಕ ಶಾಂಪೂಗಳನ್ನೂ ತಯಾರಿಸುತ್ತಾರೆ. (ಏಜೆನ್ಸೀಸ್)