ಅಕ್ಷಯ ತೃತಿಯಾ 2026 ಎಂದು?; ಬಂಗಾರ ಖರೀದಿ ಮಾಡಲು ಯಾವ ಸಮಯ ಸೂಕ್ತ?..Akshaya Tritiya

Akshaya Tritiya
Akshaya Tritiya
Published on
Akshaya Tritiya: ಅಕ್ಷಯ ತೃತೀಯ ಹಿಂದೂ ಮತ್ತು ಜೈನ ಸಮುದಾಯದ ಸಾಂಪ್ರಾದಾಯಿಕ ಮತ್ತು ಮಂಗಳಕರವಾದ ಹಬ್ಬ. ಅಕ್ಷಯ ಎಂದರೆ ಎಂದಿಗೂ ಮುಗಿಯಲಾರದ್ದು, ಶಾಶ್ವತ ಎಂದು ಅರ್ಥ. ಈ ದಿನ ಹೆಂಗಳೆಯರು ಚಿನ್ನಂದಗಡಿಯಲ್ಲಿ ಒಂದು ಗ್ರಾಂ ಬಂಗಾರವನ್ನು ಸಾಲ ಮಾಡಿಯಾದರೂ ಖರೀದಿ ಮಾಡುವುದು ವಾಡಿಕೆ.
2026ನೇ ಸಾಲಿನಲ್ಲಿ ಅಕ್ಷಯ ತೃತೀಯ ಯಾವ ದಿನ ಆಚರಿಸಲಾಗುತ್ತದೆ, ಈ ದಿನವೇ ಚಿನ್ನ ಖರೀದಿ ಮಾಡಬೇಕು ಅನ್ನೋದು ಯಾಕೆ. ಇದಕ್ಕಿರು ಐತಿಹಾಸಿ ಕತೆಯನ್ನು ಈ ಲೇಖನದಲ್ಲಿ ವಿವರಣೆ ನೀಡಲಾಗಿದೆ.

ಎಂದು ಅಕ್ಷಯ ತೃತೀಯ?

 ಏಪ್ರಿಲ್​ನಲ್ಲಿ ಚೈತ್ರ ಮಾಸ ಮುಕ್ತಾಯಗೊಂಡು ವೈಶಾಖ ಪ್ರಾರಂಭವಾಗುತ್ತದೆ. ಅಕ್ಷಯ ತೃತೀಯವನ್ನು  ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ಸಮಯದಲ್ಲಿ ಆಚರಣೆ ಮಾಡಲಾಗುತ್ತದೆ. ರೋಹಿಣಿ ನಕ್ಷತ್ರದ ದಿನದಂದು ಬರುವ ಅಕ್ಷಯ ತೃತೀಯವನ್ನು ಸ್ವಯಂ ಸಿದ್ಧ ಮುಹೂರ್ತ ಎಂದು ಕರೆಯಲಾಗುತ್ತದೆ. ಅಂದರೆ, ಈ ದಿನ ಶುಭ ಮುಹೂರ್ತ ನೋಡುವ ಅಗತ್ಯತೆ  ಇಲ್ಲ ಎನ್ನುವ ಅರ್ಥವನ್ನು ನೀಡುತ್ತದೆ.
ಹೀಗಾಗಿ ಈ ದಿನ ಪಿತೃ ತರ್ಪಣ, ದಾನ-ಧರ್ಮ ಮಾಡುವಂತಹ ಬೃಹತ್​ ಕಾರ್ಯಗಳನ್ನು ಮಾಡಲಾಗುತ್ತದೆ.ಇಡೀ ದಿನದಲ್ಲಿ ಯಾವ ಕೆಲಸ ಮಾಡಬೇಕು ಎಂದು ಭಾವಿಸುತ್ತಿರೋ ಅದನ್ನೆಲ್ಲ ಮಾಡಬಹುದು ಎಂದು ಹೇಳಲಾಗುತ್ತದೆ. ಜೊತೆಗೆ ಈ ದಿನ ಚಿನ್ನ ಅಥವಾ ಬೆಲೆ ಬಾಳುವ ವಸ್ತು ಖರೀದಿ ಮಾಡಲು ಶುಭ ದಿನ ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯ ಯಾವ ದಿನ ಆಚರಿಸಲಾಗುತ್ತದೆ?

ಈ ಬಾರಿ ಅಕ್ಷಯ ತೃತೀಯಾ 2026 ಏಪ್ರಿಲ್​ 19ರಂದು ಭಾನುವಾರ ಬಿದ್ದಿದೆ. 
ಅಕ್ಷಯ ತೃತೀಯ ಪೂಜೆ ಮುಹೂರ್ತ - 10:49 AM ನಿಂದ 12:34 PM ಪೂಜೆ ಮಾಡಲು ಇದೇ ಉತ್ತಮ ಸಮಯವಾಗಿದೆ.
ಅವಧಿ - 01 ಗಂಟೆ 45 ನಿಮಿಷಗಳು
ತೃತೀಯಾ ತಿಥಿ ಪ್ರಾರಂಭವಾಗುತ್ತದೆ - 10:49 AM ರಂದು 19 ಏಪ್ರಿಲ್ 2026 ರಂದು
ತೃತೀಯಾ ತಿಥಿ ಕೊನೆಗೊಳ್ಳುತ್ತದೆ -  2026 ಏಪ್ರಿಲ್ 20 ರಂದು 07:27 AM

ಚಿನ್ನ ಖರೀದಿಗೆ ಯಾವುದು ಸೂಕ್ತ ಸಮಯ?

ಏಪ್ರಿಲ್​ 19ರ ಬೆಳಿಗ್ಗೆ 10:49ರಿಂದ ಏಪ್ರಿಲ್​ 20 ಸಂಜೆ 5:51ರವರೆಗೂ ಚಿನ್ನ ಖರೀದಿ ಮಾಡಲು ಇರುವ ಸೂಕ್ತ ಸಮಯವಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಿದರೆ, ಮುಂದೆ ಎಂದಿಗೂ ಚಿನ್ನ ಖರೀದಿ ಮಾಡುವ ವಿಚಾರದಲ್ಲಿ ಮೀನಮೇಷ ಎಣಿಸೋದಿಲ್ಲ.  ಖರೀದಿ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಜನರು ಹಣ ಹೂಡಿಕೆ ಮಾಡುವ ಬದಲು ಚಿನ್ನದ ಮೇಲೆ ಹಣವನ್ನು ವ್ಯಯಿಸುತ್ತಾರೆ. ಇದು ಕಷ್ಟಕಾಲದಲ್ಲಿ ಸಹಕಾರಿ ಎನ್ನಲಾಗುತ್ತದೆ. 

ಅಕ್ಷಯ ತೃತೀಯಕ್ಕಿರುವ ಹಿನ್ನಲೆಯೇನು?

ಧಾರ್ಮಿಕ ನಂಬಿಕೆ ಪ್ರಕಾರ ವಿಷ್ಣು ಪರಶುರಾಮನಾಗಿ ಅವತಾರವೆತ್ತಿದನು. ಇದು ತೇತ್ರಾಯುಗದ ಆರಂಭ ಎನ್ನಲಾಗಿದೆ.  ಈ ದಿನ ಕುಬೇರ ಶಿವನಿಗಾಗಿ ತೀವ್ರ ತಪಸ್ಸು ಮಾಡಿ ದೇವರುಗಳ ಕೋಶಾಧಿಕಾರಿಯಾಗುವ ಆಶೀರ್ವಾದ ಪಡೆದ ಎಂತಲೂ ಹೇಳಲಾಗುತ್ತದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net