ಕ್ರೈಸ್ತರ ನಂಬಿಕೆಗಳ ಪ್ರಕಾರ, ಮಾನವರ ಪಾಪಗಳಿಗೆ ಅಂತಿಮ ತ್ಯಾಗವಾಗಿ ಆಚರಿಸುವ ದಿನ ಇದು. ಗುಡ್ಫ್ರೈಡೇಯಾದ ಇಂದು ಕ್ರೈಸ್ತರು. ತಾವು ಮಾಡಿದ ತಪ್ಪಿಗೆ ಶೋಕ ಮತ್ತು ಪಶ್ಚಾತಾಪ ಪಟ್ಟು. ಈ ದಿನದಿಂದ ಹೊಸದಾಗಿ, ಉತ್ತಮ ಮನುಷ್ಯನಾಗಿ ಬಾಳುತ್ತಾರೆ ಎನ್ನುವ ನಂಬಿಕೆ ಇದೆ. ಈ ದಿನ ಯೇಸು ಕ್ರಿಸ್ತನ ಭಕ್ತರು ಉಪವಾಸ ಮಾಡಿ, ಚರ್ಚ್ಗಳಿಗೆ ತೆರಳಿ ಪ್ರಾರ್ಥನೆಗಳನ್ನು ಮಾಡುತ್ತಾರೆ. ಬೈಬಲ್ ಓದುತ್ತಾರೆ. ಚರ್ಚ್ ಸೇವೆಯಲ್ಲಿ ಭಾಗಿಯಾಗುತ್ತಾರೆ ಎನ್ನುವ ಪ್ರತೀತಿ ಇದೆ.