ತುಳಸಿದಾಸರು ಹನುಮಾನ್ ಚಾಲೀಸಾ ಬರೆದಿದ್ದು ಸೆರೆಮನೆಯಲ್ಲಾ?; ಸ್ತೋತ್ರ ಪಠಣೆಯಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು?..Hanuman Chalisa History
Hanuman Chalisa History(Ai Image)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹನುಮಾನ್ ಚಾಲೀಸ 16ನೇ ಶತಮಾನದಲ್ಲಿ ರಚನೆಯಾದ ಸ್ತೋತ್ರ
ಅಕ್ಬರನ ಆಳ್ವಿಕೆ ಕಾಲದಲ್ಲಿ ಸೆರೆಯಲ್ಲಿದ್ದ ತುಳಸೀದಾಸರಿಂದ ರಚನೆಯಾದ 40 ಪದ್ಯ
ಹನುಮಾನ್ ಚಾಲೀಸಾ ಪಠಣೆಯಿಂದ ಶನಿದೋಷ ಇರೋದಿಲ್ಲ, ಮನಸ್ಸಿಗೆ ಶಾಂತಿ ಸಿಗಲಿದೆ
Hanuman Chalisa History: ಜಯ ಹನುಮಾನ ಜ್ಞಾನ ಗುಣ ಸಾಗರ ಜಯ ಕಪೀಶ ತಿಹು ಲೋಕ ಉಜಾಗರ ಈ ಹನುಮಾನ್ ಚಾಲೀಸ ಸ್ತೋತ್ರವೂ ಹನುಮಾನ್ ಜಯಂತಿಯಂದು ಮಾತ್ರವಲ್ಲ. ಭಯದಲ್ಲಿದ್ದಾಗ, ಜೀವನದಲ್ಲಿ ಸಾಕಷ್ಟು ನೋವುಂಟಾದಾಗ, ಬಸ್ಗಳಲ್ಲಿ, ರಾತ್ರಿ ರಸ್ತೆಯಲ್ಲು ಒಬ್ಬಂಟಿಯಾಗಿ ಪ್ರಯಾಣಿಸುವ ವೇಳೆ ಈ ಸ್ತೋತ್ರ ಕೇಳೋದು ಅಥವಾ ಹಾಡುವುದು ಹನುಮ ಧೈರ್ಯದಿಂದ ಲಂಕೆಗೆ ಹೊರಟಷ್ಟೇ ಸ್ಥೈರ್ಯವನ್ನು ಮನುಷ್ಯನಿಗೆ ನೀಡುತ್ತಾನೆ.
ರಾಮನ ಭಂಟ ಹನುಮ, ಸೂರ್ಯನನ್ನೇ ಬೆದರಿಸಿದ ಧೈರ್ಯಶಾಲಿ ಹನುಮನ ಜಯಂತಿಯನ್ನು ಏಪ್ರಿಲ್2ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಪಠಿಸುವ 40 ಪದ್ಯಗಳ ಹನುಮಾನ್ ಚಾಲೀಸಾ ಸ್ತೋತ್ರ ಬರೆದಿದ್ದು ಯಾರು, ಇದರಲ್ಲಿರುವ ಪವಾಡವೇನು,ಅನ್ನೋದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಸೆರೆಮನೆಯಲ್ಲಿ ಸ್ತೋತ್ರ ರಚನೆ
ಹನುಮಾನ್ ಚಾಲೀಸಾ ಸ್ತೋತ್ರ ಉಗಮವಾದ ಹಿಂದೆ ರೋಚಕ ಕತೆಯೇ ಇದೆ. 16ನೇ ಶತಮಾನದಲ್ಲಿ ಶೇಷ್ಠ ಸಂತ ಕವಿ ಗೋಸ್ವಾಮಿ ತುಳಸಿದಾಸರು ಮೊಘಲ್ ದೊರೆ ಅಕ್ಬರನ ಸೆರೆಮನೆಯಲ್ಲಿ ಹಾಡನ್ನು ರಚನೆ ಮಾಡುತ್ತಾರೆ.
ಪುರಾಣ ಕತೆ ಹೇಳೋದೇನು?
ಐತಿಹಾಸಿಕ ಕತೆಗಳ ಪ್ರಕಾರ, ಮೊಘಲ್ ದೊರೆಯ ಆಳ್ವಿಕೆ ಕಾಲದಲ್ಲಿ ತುಳಸಿ ದಾಸರ ಪದ್ಯ, ಸ್ತೋತ್ರಗಳು ಪ್ರಚಲಿತದಲ್ಲಿರುತ್ತದೆ. ದೇವರನ್ನು ಹೆಚ್ಚು ನಂಬುತ್ತಿದ್ದ ಅವರನ್ನು ಆಸ್ಥಾನಕ್ಕೆ ಕರೆಸಿ, ಇಲ್ಲಿ ಒಂದು ಪವಾಡ ಜರುಗಬೇಕು. ಅದುವೇ, ನೀವು ನಂಬುವ ದೇವರು ಪ್ರತ್ಯಕ್ಷವಾಗುವಂತೆ ಮಾಡಬೇಕು ಎಂದು ಕೇಳಿದ್ದರಂತೆ.
ಆಗ ತುಳಸಿದಾಸರು, ಮನದಲ್ಲಿ ನೈಜ ಭಕ್ತಿ ಭಾವನೇ ಇಲ್ಲದೆ ದೇವರನ್ನು ಕಾಣೋದು ಸಾಧ್ಯವೇ ಇಲ್ಲ ಎಂದಿದ್ದರಂತೆ. ಇದರಿಂದ ಸಿಟ್ಟಾದ ಮಹಾರಾಜ ಅವರನ್ನು ಜೈಲುವಾಸಕ್ಕೆ ತಳ್ಳಿದ್ದರು ಎನ್ನಲಾಗಿದೆ.
ಮುಂದುವರೆದು, ಜೈಲಿನಲ್ಲಿ ದಿನ ಕಳೆಯುತ್ತಿದ್ದ ತುಳಸಿದಾಸರು, ಹನುಮಂತನ ಧ್ಯಾನದಲ್ಲಿ ಸ್ತೋತ್ರ ಬರೆಯಲು ಶುರುವಿಟ್ಟುಕೊಂಡರು. ರಾಮನ ಭಂಟನ, ಧೈರ್ಯ, ಶೌರ್ಯಗಳನ್ನು ಒಟ್ಟುಗೂಡಿಗೆ 40 ಪದ್ಯವನ್ನು ರಚಿಸುತ್ತಾ, ಪಠಣೆ ಮಾಡುತ್ತಿದ್ದರಂತೆ.
ವಾನರ ಸೈನ್ಯ ಮುತ್ತಿಗೆ
ಪುರಾಣಗಳ ಪ್ರಕಾರ, ತುಳಸಿದಾಸರು ಈ ಸ್ತೋತ್ರವನ್ನು ಪಠಣೆ ಮಾಡುತ್ತಲೇ ವಾನರ ಸೈನ್ಯಯು ಅಕ್ಬರ್ ಮಹಾರಾಜನ ಆಸ್ಥಾನವನ್ನು ಮುತ್ತಿಗೆ ಹಾಕಿದ್ದವಂತೆ. ಇನ್ನೇನು ಮಾಡೋಕೆ ಸಾಧ್ಯನೇ ಇಲ್ಲವೆಂದು ತುಳಸೀದಾಸರ ಸೆರೆಮನೆ ವಾಸವನ್ನು ಅಕ್ಬರ್ ಅಂತ್ಯಗೊಳಿಸಿದ್ದರು ಎನ್ನುವ ಪ್ರತೀತಿ ಇದೆ.
ಹನುಮಾನ್ ಚಾಲೀಸಾ ಪಠಣದಿಂದ ಸಿಗುವ ಪ್ರಯೋಜನವೇನು?
40 ಪದ್ಯದ ಸ್ತೋತ್ರವನ್ನು ಪಠಿಸೋದರಿಂದ ಶನಿ ದೋಷ ಕಾಡೋದಿಲ್ಲ ಎನ್ನುವ ನಂಬಿಕೆ ಇದೆ. ಶನಿ ದೇವನು ರಾವಣನ ಸೆರೆಯಲ್ಲಿದ್ದನಂತೆ ಆಗ ಬಿಡುಗಡೆಗೆ ಹನುಮಾನ್ ಮೊರೆ ಹೋದಾಗ ಕಾಪಾಡಿದ್ದ ಕಾರಣ, ಹನುಮನ ಭಕ್ತರನ್ನು ಎಂದಿಗೂ ತೊಂದರೆಗೆ ಒಳಗಾಗುವಂತೆ ಮಾಡೋದಿಲ್ಲ ಎಂದು ಶಪಥ ಹೂಡಿದ್ದನ್ನು ಎನ್ನುವ ಪುರಣಾವಿದೆ.
ರಾಮನ ಭಕ್ತನಾದ ಹನುಮನ ಸ್ತುತಿ ಪಠನೆ ಮಾಡುವುದರಿಂದ ರಾಮನ ಆಶಿರ್ವಾದ ದೊರೆಯುತ್ತದೆ ಎನ್ನಲಾಗಿದೆ. ಇನ್ನು ಹನುಮನ ಮೇಲೆ ಭಕ್ತಿಯಿಂದ ಸ್ತೋತ್ರ ಪಠಣೆ ಮಾಡಿದರೆ ಕಷ್ಟವನ್ನು ನೀಗಿಸುತ್ತಾನೆ ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಇದೆ, (ಏಜೆನ್ಸೀಸ್).