ಇನ್ಮುಂದೆ ಚಹಾಗೆ ಚಿಟಿಕೆ ಉಪ್ಪು ಹಾಕಿ ಸೇವಿಸಿ..ರುಚಿ ಜತೆ ಆರೋಗ್ಯಕ್ಕೂ ಒಳ್ಳೆಯದು..

Tea Seller
Published on

ಬೆಂಗಳೂರು: ಬೆಳಿಗ್ಗೆ ಎದ್ದರೆ ಒಂದು ಕಪ್ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುವ ಅನೇಕ ಜನರಿದ್ದಾರೆ. ಪ್ರಪಂಚದಾದ್ಯಂತ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಚಹಾ. ಆದರೆ, ಚಹಾಕ್ಕೆ ಸಕ್ಕರೆ ಹಾಕುವುದನ್ನು ನಾವು ಕೇಳಿದ್ದೇವೆ. ಆದರೆ ಚಿಟಿಕೆ ಉಪ್ಪು ಹಾಕುವುದರಿಂದ ಆಗುವ ಲಾಭಗಳೇನು ಗೊತ್ತಾ?.. ನೋಡೋಣ.

ಉಪ್ಪು ಮೆಗ್ನೀಸಿಯಮ್, ಸೋಡಿಯಂ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳನ್ನು ಹೊಂದಿರುತ್ತದೆ. ಅವು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ.

Tea

ಚಹಾಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ವಿವಿಧ ಬಗೆಯ ಸೋಂಕುಗಳಿಂದ ರಕ್ಷಿಸುತ್ತದೆ.

ನೀವು ಚಹಾವನ್ನು ಹೆಚ್ಚು ಕುದಿಸಿದರೆ ಅದು ಕಹಿಯಾಗುತ್ತದೆ. ಆ ಕಹಿ ರುಚಿಯನ್ನು ತಪ್ಪಿಸಲು ನೀವು ಕೇವಲ ಚಿಟಿಕೆಯಷ್ಟು ಉಪ್ಪನ್ನು ಸೇರಿಸಿದರೆ ರುಚಿಯೆ ಬದಲಾಗುತ್ತದೆ.

ಒಂದು ಲೋಟ ಚಹಾಗೆ ಸಕ್ಕರೆ ಜೊತೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದರಿಂದ ನಷ್ಟವಾದ ಎಲೆಕ್ಟ್ರೋಲೈಟ್ ಮತ್ತೆ ಮರುಕಳಿಸಿ ನಮಗೆ ಸಿಗುತ್ತವೆ. ಜೊತೆಗೆ ದೇಹದ ನೀರಿನ ಅಂಶ ವನ್ನು ಕೂಡ ಸಮತೋಲನ ಮಾಡಲು ಇದು ನೆರವಾಗುತ್ತದೆ.

ಚಹಾಕ್ಕೆ ಉಪ್ಪನ್ನು ಸೇರಿಸುವುದರಿಂದ ನಿಮ್ಮ ಮೈಗ್ರೇನ್ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಬಹುದು. ಇದು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡಲು ಸಹ ಸಹಾಯ ಮಾಡುತ್ತದೆ.

ಉಪ್ಪು ಹಾಕಿದ ಚಹಾವನ್ನು ಕುಡಿಯುವುದರಿಂದ, ಸತುವು ದೇಹವನ್ನು ತಲುಪುತ್ತದೆ. ಇದು ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ ಮತ್ತು ಮೊಡವೆಗಳನ್ನು ತಡೆಯುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net