ಅಣ್ಣನಿಗಾಗಿ ಪ್ರಾರ್ಥಿಸಿ ಎಂದು ಕೋರಿಕೊಂಡ ನಟಿ ಖುಷ್​ಬೂ; ಏನಾಯ್ತು?

Khushbu
Published on

ಬೆಂಗಳೂರು: ಸಿನಿಮಾ ನಟ-ನಟಿಯರು ತಮ್ಮ ಸಂತೋಷ-ಸಂಕಟ ಎರಡನ್ನೂ ಬಹಳಷ್ಟು ಸಲ ತಮ್ಮ ಅಭಿಮಾನಿಗಳ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ. ತಮಗಾಗಿ ಹರಸಿ, ತಮಗಾಗಿ ಪ್ರಾರ್ಥಿಸಿ ಎಂದೂ ಕೇಳಿಕೊಳ್ಳುವುದುಂಟು. ಅಂಥದ್ದೇ ಒಂದು ಕೋರಿಕೆಯನ್ನು ಬಹುಭಾಷಾ ನಟಿ ಖುಷ್​ಬೂ ಈಗ ಮಾಡಿಕೊಂಡಿದ್ದಾರೆ.

ಅಂದಹಾಗೆ ಅವರು ಇದೀಗ ಜನರಲ್ಲಿ ಮಾಡಿಕೊಂಡಿರುವ ವಿನಂತಿ ಅವರಿಗಾಗಿ ಅಲ್ಲ, ಬದಲಿಗಾಗಿ ಅವರ ಹಿರಿಯಣ್ಣನಿಗಾಗಿ. ತನ್ನ ದೊಡ್ಡ ಅಣ್ಣ ತೀವ್ರ ಅನಾರೋಗ್ಯದಲ್ಲಿ ಇರುವುದಾಗಿ ಹೇಳಿಕೊಂಡಿರುವ ಖುಷ್​​ಬೂ ಅವರ ಆರೋಗ್ಯದ ಸಲುವಾಗಿ ತಾವೂ ಪ್ರಾರ್ಥಿಸಿಕೊಳ್ಳಿ ಎಂಬುದಾಗಿ ಅಭಿಮಾನಿಗಳಲ್ಲಿ, ಸಿನಿಪ್ರಿಯರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ವೈಯಕ್ತಿಕವಾಗಿ ಸಂಕಷ್ಟದಲ್ಲಿದ್ದೇನೆ. ನನ್ನ ಹಿರಿಯ ಅಣ್ಣ ಜೀವನ್ಮರಣ ಹೋರಾಟದಲ್ಲಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವತ್ತು ಸ್ವಲ್ಪ ಚೇತರಿಕೆ ಕಂಡುಬಂದಿದೆ. ಆತನಿಗಾಗಿ ದಯವಿಟ್ಟು ನೀವೆಲ್ಲರೂ ಪ್ರಾರ್ಥಿಸಿ, ಆತನಿಗೆ ಅದು ಅಗತ್ಯವಿದೆ ಎಂದು ಖುಷ್​ಬೂ ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net