ಈ ರಸ ಕುಡಿದರೆ ಹೊಳೆಯುವ ಚರ್ಮ ಸಿಗುತ್ತದೆ! ಏನಿದು ABC ಜ್ಯೂಸ್?

ABC Juice
Published on

ಬೆಂಗಳೂರು: ಒತ್ತಡದ ಜೀವನ, ವ್ಯವಸ್ಥಿತವಲ್ಲದ ಆಹಾರ ಪದ್ಧತಿಯಿಂದಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆರೋಗ್ಯವೇ ಭಾಗ್ಯ ಎನ್ನುವ ಮಾತು ಅಂದಿಗೂ ಇಂದಿಗೂ ನೂರಕ್ಕೆ ನೂರು ಸತ್ಯ. ನಿಮ್ಮ ಆರೋಗ್ಯವನ್ನು ಕಾಪಾಪಾಡಿಕೊಳ್ಳಲು ನಾವು ಇಂದು ಕೆಲವು ಸಲಹೆ ನೀಡುತ್ತೇವೆ.

ಜ್ಯೂಸ್​ನಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ದೇಹವನ್ನು ಪೋಷಣೆ ಮಾಡುವ ಜೀವಸತ್ವಗಳು, ಖನಿಜಗಳು ಮತ್ತು ನಿರೋಧಕಗಳನ್ನು ಒದಗಿಸಲು ಉತ್ತಮ ಮಾರ್ಗವಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಸಲಹೆಗಳನ್ನು ಹುಡುಕುವ ಜನರಿಗೆ ಅನೇಕ ಹಣ್ಣಿನ ರಸಗಳು ಮತ್ತು ವಿಭಿನ್ನ ಆಹಾರಗಳು ಇತ್ತೀಚಿನ ಟ್ರೆಂಡ್ ಆಗಿವೆ. 'ಎಬಿಸಿ ಜ್ಯೂಸ್'ನ್ನು ಇತ್ತೀಚೆಗೆ ಹೆಚ್ಚಿನವರು ಸೇವನೆ ಮಾಡುತ್ತಿದ್ದಾರೆ. ಏನಿದು ಎಬಿಸಿ ಜ್ಯೂಸ್' ಇದನ್ನು ಮಾಡುವುದು ಹೇಗೆ ಇದ ಪ್ರಯೋಜನ ಏನು? ಎಂದು ಪ್ರಶ್ನೆ ನಿಮ್ಮಗೆ ಇರಬಹದು. ಇದಕ್ಕೆ ಉತ್ತರ ಇಲ್ಲಿದೆ....

ಎಬಿಸಿ ಜ್ಯೂಸ್ ಎಂದರೇನು?

'ಎಬಿಸಿ ಜ್ಯೂಸ್​​' ಅಕ್ಷರಗಳು ಎ- ಸೇಬು, ಬಿ- ಬೀಟ್ರೂಟ್ ಮತ್ತು ಸಿ- ಕ್ಯಾರೆಟ್ ಅನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಉಪಯೋಗಿಸಿ ಒಂದು ಪಾನೀಯವನ್ನು ತಯಾರಿಸಲಾಗುತ್ತದೆ. ಈ ಜ್ಯೂಸ್ ಎರಡು ಹಣ್ಣುಗಳು ಮತ್ತು ಒಂದು ತರಕಾರಿಗಳ ಸಂಯೋಜನೆಯಾಗಿದ್ದು, ಹೆಚ್ಚು ಪ್ರೋಟಿನ್​ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಜ್ಯೂಸ್‌ನಲ್ಲಿರುವ ಖನಿಜಗಳು:

ಜ್ಯೂಸ್‌ನಲ್ಲಿ ಫೈಬರ್, ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು A, B1, B2, B6, C, E, ಮತ್ತು K, ಫೋಲೇಟ್, ನಿಯಾಸಿನ್, ಸತು, ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿವೆ.

ಜ್ಯೂಸ್‌ ಮಾಡುವುದು ಹೇಗೆ?

ಈ ರಸವನ್ನು ಒಂದೇ ಬಾರಿಗೆ ಮಾಡಲು 1 ½ ಸೇಬು, 1 ಕ್ಯಾರೆಟ್ ಮತ್ತು ½ ಬೀಟ್ರೂಟ್ ತೆಗೆದುಕೊಳ್ಳಿ. ಅವುಗಳನ್ನು ತೊಳೆಯಿರಿ ಮತ್ತು ಸಿಪ್ಪೆ ಮಾಡಿ ಮತ್ತು ಬ್ಲೆಂಡರ್ಗೆ ಸೇರಿಸಿ. ಮೃದುವಾದ ಮಿಶ್ರಣವನ್ನು ಮಾಡಿ, ನಂತರ ನೀವು ಸ್ವಲ್ಪ ತುರಿದ ಶುಂಠಿಯನ್ನು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಬಹುದು. ಈ ಹಣ್ಣಿನ ರಸಕ್ಕೆ ನಿಂಬೆ ರಸ ಮಿಶ್ರಣ ಮಾಡಿ ಆನಂದಿಸಿ.

ಈ ಹಣ್ಣಿನ ರಸದ ಆರೋಗ್ಯ ಪ್ರಯೋಜನಗಳು:

  • ಬೆಳಿಗ್ಗೆ ಒಂದು ಲೋಟ ಜ್ಯೂಸ್ ಉತ್ತಮ ಆರೋಗ್ಯ, ಹೊಳಪಿನ ಚರ್ಮ, ಹೊಳಪು ಕೂದಲು ಮತ್ತು ಆರೋಗ್ಯಕರ ಚಯಾಪಚಯವನ್ನು ಖಚಿತಪಡಿಸುತ್ತದೆ.ಈ ಜ್ಯೂಸ್‌ನಲ್ಲಿರುವ ಪೋಷಕಾಂಶಗಳು ನಿಮ್ಮ ದೇಹದಿಂದ ಕಳೆದುಹೋದ ಪೋಷಕಾಂಶಗಳನ್ನು ಪುನಃ ತುಂಬಿಸಲು ಮತ್ತು ದೇಹವನ್ನು ಚೆನ್ನಾಗಿ ಹೈಡ್ರೀಕರಿಸಲು ಸಹಾಯ ಮಾಡುತ್ತದೆ.
  • ಹಣ್ಣಿನ ರಸವು ಉತ್ತಮ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ.
  • ಇದು ಕರುಳಿನ ಆರೋಗ್ಯ ಮತ್ತು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
  • ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.
  • ಈ ರಸವು ಪ್ರತಿ ಸೇವೆಗೆ ಕೇವಲ 150-60 ಕ್ಯಾಲೊರಿಗಳನ್ನು ಹೊಂದಿರುತ್ತದೆ. ತೂಕ ನಷ್ಟವನ್ನು ಮಾಡಲು ಸಹಾಯ ಮಾಡುತ್ತದೆ.

ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದ ಸಕ್ಕರೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಎಬಿಸಿ ಜ್ಯೂಸ್ ಉತ್ತಮ ಚರ್ಮವನ್ನು ಉತ್ತೇಜಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net