ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ಪರಿಹಾರ ಮಾಡುತ್ತವೆ ಈ ಸರಳ ಯೋಗಾಸನಗಳು...

yogasana
Published on

ಬೆಂಗಳೂರು: ಮನಸ್ಸು ಮತ್ತು ದೇಹದ ಸಂಪರ್ಕವನ್ನು ಹೆಚ್ಚಿಸಲು ಯೋಗವು ಒಂದು ಪ್ರಾಚೀನ ಕಾಲದಿಂದಲೂ ಅನುಸರಿಸಕೊಂಡು ಬಂದಿರುವ ಕ್ರಮವಾಗಿದ್ದು, ಇದು ಆರೋಗ್ಯ ರಕ್ಷಣೆಯನ್ನು ಮಾಡುತ್ತದೆ. ಯೋಗವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಂಬಂಧ ಹೊಂದಿದ್ದು, ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಹೊಂದಿರುವ ಜನರು ತಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಕೆಲವು ಆಸನಗಳನ್ನು ಅಭ್ಯಾಸ ಮಾಡಬಹುದಾಗಿದೆ.

ಭುಜಂಗಾಸ: ಈ ಆಸನವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವುದರ ಜತೆಗೆ ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಹೆತ್ತ ಮಗುವನ್ನೇ 800 ರೂ.ಗೆ ಮಾರಾಟ ಮಾಡಿದ ತಾಯಿ…

ಪವನಮುಕ್ತಾಸನ: ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಈ ಆಸನ, ಕಿಬ್ಬೊಟ್ಟೆಯ ಅಂಗಗಳಿಗೆ  ಆಂತರಿಕವಾಗಿ ಮಸಾಜ್ ಮಾಡುವ ಮೂಲಕ ಹೊಟ್ಟೆಯಲ್ಲಿನ ಗಾಳಿ ಮತ್ತು ಉಬ್ಬುವಿಕೆಯನ್ನು ಸರಾಗಗೊಳಿಸುತ್ತದೆ.

ಧನುರಾಸನ: ಚಯಾಪಚಯವನ್ನು ಸುಧಾರಿಸಲು ನೆರವಾಗುವ ಧನುರಾಸನ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದರ ಜತೆಗೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತೇಜಿಸುತ್ತದೆ.

ಅರ್ಧ ಮತ್ಸ್ಯೇಂದ್ರಾಸನ: ಈ ಆಸನವು ತಿರುಚಿದ ಸ್ಥಾನವು ಜೀರ್ಣಕಾರಿ ಅಂಗಗಳಿಗೆ ಮಸಾಜ್ ಮಾಡುವ ಮೂಲಕ ಮತ್ತು ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಶೀಘ್ರವೇ ಈ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ..!?

ಪಶ್ಚಿಮೋತ್ತನಾಸನ: ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜತೆಗೆ ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುವ ಈ ಆಸನವು ಮಲಬದ್ಧತೆಯನ್ನು ಸಹ ನಿವಾರಿಸುತ್ತದೆ.

ಸೂರ್ಯ ನಮಸ್ಕಾರ: ಯೋಗದ ಈ ಸರಣಿಯು ಚಯಾಪಚಯವನ್ನು ಉತ್ತೇಜಿಸುತ್ತದೆ, ಒಟ್ಟಾರೆ ಕ್ಷೇಮವನ್ನು ಬೆಂಬಲಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಯೋಗಾಸನವು ಒಂದು ಕಲೆಯಾಗಿದ್ದು, ಇದನ್ನು ಮನಬಂದಂತೆ ಮಾಡುವಂತಿಲ್ಲ. ಇಲ್ಲದಿದ್ದರೆ ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ವೈದ್ಯರ ಸಲಹೆ ಅಥವಾ ಪರಿಣಿತರ ಸಮ್ಮುಖದಲ್ಲಿ ಇದನ್ನ ಅಭ್ಯಸಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net