ಬೆಲ್ಲಿ ಫ್ಯಾಟ್ ಅನ್ನು ಹೆಚ್ಚಿಸುವ 6 ಅಪರಿಚಿತ ಅಭ್ಯಾಸಗಳು, ಇಂದೇ ಬದಲಾಯಿಸಿ!|Health tips

untitled-design-2025-09-17t181220620-68caacb60da97
Published on

Health tips: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಧಿಕ ಪೌಷ್ಟಿಕಾಂಶವಿರುವಂತಹ ಆಹಾರವನ್ನು ತಿನ್ನಲು ಬಯಸುತ್ತಾರೆ. ಹಾಗೆಯೇ, ಎಥೇಚ್ಛವಾಗಿ ಬೇಯಿಸದ ಆಹಾರವನ್ನು ಅವಲಂಬಿಸಿರುತ್ತಾರೆ. ಈ ರೀತಿಯಾಗಿ ಅರೋಗ್ಯವನನು ಕಾಪಾಡಿಕೊಂಡರೂ ಸಹ ಅನೇಕರು ಹೊಟ್ಟೆಯ ಉಬ್ಬರದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಾವು ಮಾಡುವ ಕೆಲವೊಂದು ಅಭ್ಯಾಸಗಳು ಈ ರೀತಿಯಾಗಿ ಮಾಡುತ್ತವೆ ಎಂದು ತಿಳಿದಿದೆ. ಹಾಗಿದ್ದರೆ, ಬನ್ನಿ ಯಾವುದು ಎಂದು ನೋಡೋಣ...

ಉಬ್ಬರಕ್ಕೆ ಕಾರಣವಾಗುವ ಅಭ್ಯಾಸಗಳು

1. ಅಧಿಕ ಹಸಿರು ತರಕಾರಿಗಳನ್ನು ತಿನ್ನುವುದು

ಹಸಿರು ತರಕಾರಿಗಳಲ್ಲಿ ಅಧಿಕ ಪೋಷಕಾಂಶಗಳು ಇರುತ್ತವೆ. ಆದರಿಂದ ಜನರು ಹೆಚ್ಚಾಗಿ ಹಸಿರು ತರಕಾರಿಗಳನ್ನು ತಿನ್ನಲು ಬಯಸುತ್ತಾರೆ. ಈ ರೀತಿಯ ಸೇವನೆಗಳು ಕೆಲವೊಂದು ವರ್ಗದವರಿಗೆ ಅರಗಿಸಿಕೊಳ್ಳಲು ಕಷ್ಟವಾಗಬಹುದು. ಹಾಗೆಯೇ ಹೊಟ್ಟೆಯ ಉಬ್ಬರಕ್ಕೆ ಕಾರಣವಾಗುತ್ತದೆ. ಹಾಗಾಗಿ ಹಸಿರು ತರಕಾರಿಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿಸು ಸೇವಿಸಿ. ಇದು ಜೀರ್ಣಾಂಗ ಕ್ರಿಯೆಗೆ ಸಹಾಯವಾಗುತ್ತದೆ.

2. ಚಹಾ ಅಥವಾ ಕಾಫಿಗೆ ಹಾಲು ಸೇರಿಸುವುದು

ಅನೇಕ ಭಾರತೀಯರು ಜೀರ್ಣಕ್ರಿಯೆಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದು ಅವರಿಗೆ ತಿಳಿಯದೇ ಬರುತ್ತದೆ. ಇದರಿಂದ ಹೊಟ್ಟೆಯು ಉಬ್ಬುವುದು, ಜೀರ್ಣಕಾರಿ ಕ್ರಿಯೆಯ ತೊಂದರೆ ಉಂಟಾಗುತ್ತದೆ. ಹಾಗಾಗಿ ಜೀಣ್ವಾಗುವ ಪದಾರ್ಥಗಳಾದ ಲ್ಯಾಕ್ಟೋಸ್ ಮುಕ್ತ ಮೊಸರು, ಹಾಲು, ಬಾದಾಮಿ ಹಾಲ್ನು ಸೇವಿಸಿ.

3. ಅತಿ ಬೇಗನೆ ತಿನ್ನುವುದು

ಪ್ರತಿನಿತ್ಯ ಆಹಾರವನ್ನು ಸೇವಿಸುವಾಗ ಅತಿ ಬೇಗನೆ ಸೇವಿಸುವುದರಿಂದ ಗಾಳಿ ನಿಮ್ಮ ಹೊಟ್ಟೆಯೊಳಗೆ ಹೋಗಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಹೊಟ್ಟೆ ಉಬ್ಬರವಾಗಲು ಪ್ರಾರಂಭಿಸುತ್ತದೆ. ಆದರಿಂದ ನೀವು ಸೇವಿಸುವಾಗ ಆಹಾರವನ್ನು ನಿಧಾನವಾಗಿ ಅಗಿದು ಸೇವಿಸಿರಿ..

4. ರಾತ್ರಿ ಸಮಯದಲ್ಲಿ ಅತಿಯಾದ ಊಟ

ರಾತ್ರಿಯ ಸಮಯದಲ್ಲಿ ಚಯಾಪಚಯ ಕ್ರಿಯೆಗಳು ನಿಧಾನವಾಗಿ ಸಾಗುವುದರಿಂದ ಅತಿಯದ ಆಹಾರವನ್ನು ಸೇವಿಸುವುದು ಜೀರ್ಣಕ್ರಿಯೆಯ ತೊಂದರೆಗೆ ಕಷ್ಟವಾಗುತ್ತದೆ. ಇದು ಹೊಟ್ಟೆಯನ್ನು ಉಬ್ಬಿಸುವುದು ಮತ್ತು ಅಜೀರ್ಣದಿಂದ ನಿಮ್ಮನ್ನು ಅಸ್ವಸ್ಥತೆಯಾಗಿರುವಂತೆ ಮಾಡುತ್ತದೆ.

5. ಊಟದ  ನಂತರ ಹಣ್ಣುಗಳನ್ನು ಸೇವಿಸಿ

ಬೇಗನೆ ಜೀರ್ಣವಾಗುವಂತಹ ಹಣ್ಣುಗಳೊಂದಿಗೆ ಬ್ರೆಡ್,​ ಅನ್ನದ ಪದಾರ್ಥಗಳನ್ನು ಸೇವಿಸುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಆದರಿಂದ ಹಣ್ಣುಗಳನ್ನು ತಿನ್ನುವ ಸಮಯದಲ್ಲಿ ಮಾತ್ರ ಅವುಗಳನ್ನು ಸೇವಿಸಿ. ಊಟಕ್ಕಿಂತ ಒಂದು ಗಂಟೆ ಮುಂಚೆ ಸವಿಯಿರಿ.

6. ಸಕ್ಕರೆ ರಹಿತ ಆಹಾರಗಳನ್ನು ಸೇವಿಸಿರಿ

ನಾವು ಸೇವಿಸುವಂತಹ ಆಹಾರಗಳಲ್ಲಿ ಸೋರ್ಬಿಟೋಲ್, ಮಾಲ್ಟಿಟಾಲ್ ಮತ್ತು ಕ್ಸಿಲಿಟಾಲ್ ನಂತಹ ಸಿಹಿಕಾರಕಗಳು ಹೆಚ್ಚಾಗಿ ಕಂಡುಬರುತ್ತದೆ. ಇವು ನಿಮ್ಮ ಹೊಟ್ಟೆಯಲ್ಲಿ ಉಬ್ಬರಕ್ಕೆ ಕಾರಣವಾಗುತ್ತದೆ. ಇನ್ನು ಆರೋಗ್ಯಕರ ಪ್ರೋಟೀನ್ ಬಾರ್‌ಗಳು ಅಥವಾ ಕಡಿಮೆ ಕ್ಯಾಲೋರಿ ಐಸ್ ಕ್ರೀಮ್‌ಗಳ ಮೇಲೆಯೂ ಇರುವುದರಿಂದ ಇವುಗಳ ಸೇವನೆ ಕಡಿಮೆ ಮಾಡಿ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net