

ಕಡಬ: ವಿದ್ಯಾರ್ಥಿಗಳು ಓದಿಗೆ ಮಾತ್ರ ಸೀಮಿತವಾಗದೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಗುಣಗಳನ್ಬು ಮೈಗೂಡಿಸಿ ಮೌಲ್ಯಯುತ ಜೀವನ ನಡೆಸಬೇಕು ಎಂದು ಮಂಗಳೂರು ಬ್ರೈಟ್‌ವೇ ಇಂಡಿಯಾದ ಆಡಳಿತ ನಿರ್ದೇಶಕ ಡಾ.ಹರ್ಷ ಕುಮಾರ್ ರೈ ಮಾಡಾವು ಹೇಳಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣಾ ಸಮಾರಂಭ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ, ಸಂಸ್ಥೆಯ ಹಳೇ ವಿದ್ಯಾರ್ಥಿನಿ ಸಂಧ್ಯಾ ಬಿ.ಎನ್.ಮುರುಳ್ಯ ಶುಭಹಾರೈಸಿದರು. ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎಂ.ಬಿ, ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಸದಸ್ಯರಾದ ನಾಗೇಶ್ ರೈ ಮಾಳ, ಉದಯ ರೈ ಮಾದೋಡಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಉಪಾಧ್ಯಕ್ಷೆ ಜ್ಞಾನೇಶ್ವರಿ ಕೆ, ಟ್ರಸ್ಟಿಗಳಾದ ವೃಂದಾ ಜೆ.ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ದೆಹಲಿ ಕನ್ನಡ ಸಂಘದ ವಸಂತ ಶೆಟ್ಟಿ ಬೆಳ್ಳಾರೆ, ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಬಂಡಾಜೆ, ಸಂಸ್ಥೆಯ ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಮಾಳ, ಕನ್ನಡ ವಿಭಾಗದ ಮುಖ್ಯಶಿಕ್ಷಕ ವಿನಯ ವಿ.ಶೆಟ್ಟಿ, ಸಹಾಯಕ ಮುಖ್ಯಶಿಕ್ಷಕಿ ಅನಿತಾ ಜೆ.ರೈ, ವಿದ್ಯಾರ್ಥಿ ನಾಯಕ ಪ್ರಸ್ತುತ್ ಕೆ. ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಸ್ತಾವಿಸಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ನಾರಾಯಣ ಭಟ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಾಧಕರಿಗೆ ಗೌರವಾರ್ಪಣೆ
ಸಾಧಕರಿಗೆ ಸನ್ಮಾನ ನಡೆಯಿತು. ನಿವೃತ್ತ ಯೋಧ ಗಿರೀಶ್ ಅರ್ನೂಜಿ, ನಾಟಿ ವೈದ್ಯ ಕುಶಾಲಪ್ಪ ಗೌಡ ಕಳುವಾಜೆ, ಪೋಸ್ಟ್‌ಮನ್ ಉಮೇಶ್ ಬಂಡಾಜೆ, ಮೆಸ್ಕಾಂನ ಪವರ್‌ಮನ್‌ಗಳಾದ ಶಿವಾನಂದ ರಂಗಣ್ಣವರ, ಮುಕ್ತಾರ್ ಆಹ್ಮದ್ ನಾಲತ್ವಾಡ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.