

ಕಿನ್ನಿಗೋಳಿ: ತುಳುನಾಡಿನ ಗ್ರಾಮೀಣ ಕ್ರೀಡೆಗಳ ಮೂಲಕ ನಮ್ಮ ಸಂಸ್ಕೃತಿಗೆ ಜೀವ ನೀಡಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು.
ಅವರು ಕೊಡೆತ್ತೂರು ಗುತ್ತುವಿನ ಬಳಿಯಲ್ಲಿ ಕೊಡತ್ತೂರು ಆದರ್ಶ ಬಳಗದ ಆಶ್ರಯದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ವಾತನಾಡಿದರು.
ಆದರ್ಶ ಬಳಗದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕೊಡೆತ್ತೂರು ಅವರು ಅಧ್ಯಕ್ಷತೆ ವಹಿಸಿ ವಾತನಾಡಿ, ಗ್ರಾಮದ ಜನರರನ್ನು ಒಂದುಗೂಡಿಸಿ ಯುವಕ ಯುವತಿಯರಲ್ಲಿ ಸಂಟನಾ ಮನೋಭಾವ ಹಾಗೂ ಗ್ರಾಮದ ಜನರಲ್ಲಿ ನಶಿಸಿ ಹೋಗುವ ಕೆಸರು ಗದ್ದೆಯ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಜಯಂತ ಕರ್ಕೇರ ಅಡ್ಡಣಗುತ್ತು, ತಾ.ಪಂ. ವಾಜಿ ಸದಸ್ಯ ದಿವಾಕರ ಕರ್ಕೇರ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷೆ ಸರೋಜಿನಿ ಗುಜರನ್, ಶಾಂತಾರಾಮ ಕೋಟ್ಯಾನ್, ಸುಧಾಕರ ಶೆಟ್ಟಿ, ಕಿಶೋರ್ ಶೆಟ್ಟಿ, ದಾಮೋದರ ಶೆಟ್ಟಿ ಕೊಡೆತ್ತೂರು, ಮೀರಾ ಶೆಟ್ಟಿ, ಅನುಷಾ ಕೊಡೆತ್ತೂರು, ದೇವಿಪ್ರಸಾದ್ ಸುವರ್ಣ, ಅಭಿಷೇಕ್, ಮಹೇಶ್ ಮತ್ತಿತರರಿದ್ದರು. ಕೇಶವ ಕರ್ಕೇರ ನಿರೂಪಿಸಿದರು.