ಎನ್ನೆಸ್ಸೆಸ್‌ನಿಂದ ಸಿಗುತ್ತದೆ ಜೀವನಾನುಭವ

Bel_NSS
Published on

ಬೆಳ್ತಂಗಡಿ: ದೇಶದ ಬೆಳವಣಿಗೆಯಲ್ಲಿ ಯುವ ಜನಾಂಗ ತೊಡಗಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಕನ್ಯಾಡಿಯ ಸಹಶಿಕ್ಷಕ ವಿಕಾಸ್ ರಾವ್ ಹೇಳಿದರು.

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯಲ್ಲಿ ನಡೆದ ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಕರಾತ್ಮಕ ಚಿಂತನೆಗಳೊಂದಿಗೆ ನಿಸ್ವಾರ್ಥ ಸೇವೆ, ಭಾವೈಕ್ಯ, ಸೌಹಾರ್ದ ಹಾಗೂ ಜೀವನಾನುಭವಗಳನ್ನು ಎನ್ನೆಸ್ಸೆಸ್‌ನಿಂದ ಪಡೆಯಲು ಸಾಧ್ಯ. ಇಂಥ ಚಟುವಟಿಕೆಗಳಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ರಾಜಶೇಖರ ಅಜ್ರಿ, ಬೆಳ್ತಂಗಡಿ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್, ನಾವೂರು ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟಿ ಗಣೇಶ್ ಕನಾಲು, ಬೆಳ್ತಂಗಡಿ ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಬೆಳ್ತಂಗಡಿ ಜೈನ್ ರೆಸ್ಟೋರೆಂಟ್‌ನ ಮಾಲೀಕ ಸಂತೋಷ್ ಕುಮಾರ್ ಜೈನ್, ನಡ ಗ್ರಾಪಂ ಸದಸ್ಯರಾದ ಪ್ರವೀಣ್ ವಿ.ಜೆ., ವಾಣಿ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿಯ ಮುಖ್ಯಶಿಕ್ಷಕ ಹನುಮಂತರಾಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೋಣಯ್ಯ ಗೌಡ, ಜನಾರ್ದನ ಗೌಡ ಕಡ್ತಿಯಾರ್, ನಾರಾಯಣ ಗೌಡ ಕೈಲಾಜೆ ಉಪಸಿತರಿದ್ದರು.

ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ.ಸ್ವಾಗತಿಸಿ. ಎನ್ನೆಸ್ಸೆಸ್ ಸಹಕಾರ್ಯಕ್ರಮಾಧಿಕಾರಿ ದೀಕ್ಷಾ ವರದಿ ವಾಚಿಸಿದರು. ಎನ್ನೆಸ್ಸೆಸ್ ಮುಖ್ಯಕಾರ್ಯಕ್ರಮಾಧಿಕಾರಿ ಶಂಕರ್ ರಾವ್ ವಂದಿಸಿದರು. ಉಪನ್ಯಾಸಕ ಸುಧೀರ್ ಕೆ.ಎನ್.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net