

ನ್ಯೂಯಾರ್ಕ್: ಒಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಎಲ್ಲಿಗೆ ದೇಶದಲ್ಲಿ ಎಲ್ಲಿಯೇ ಹೋಗಬೇಕೆಂದರೂ ಯಾರ ಅನುಮತಿಯೂ ಬೇಕಿಲ್ಲ. ಅವರ ಭೇಟಿಯನ್ನು ಅಧಿಕೃತವೆಂದೇ ಪರಿಗಣಿಸಿ ಶಿಷ್ಟಾಚಾರವನ್ನು ಪಾಲಿಸಬೇಕಾದದ್ದು ಎಲ್ಲ ರಾಜ್ಯಗಳ ಕರ್ತವ್ಯ.
ಆದರೆ, ಅಮೆರಿಕದಲ್ಲಿ ರಾಜ್ಯಪಾಲರೊಬ್ಬರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವುದು ಅಗತ್ಯವಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ವಿಸ್ಕೋನ್ಸಿನ್ ರಾಜ್ಯಪಾಲ ಮಂಡೇಲಾ ಬಾರ್ನ್ಸ್ ಅಧ್ಯಕ್ಷರ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ರಾಜ್ಯದ ಕೆನೋಶಾದಲ್ಲಿ ನಡೆದ ಪ್ರತಿಭಟನೆಗೆ ಜನಾಂಗೀಯ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಬಾರ್ನ್ಸ್ ಈ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಟ್ರಂಪ್ ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಪ್ರತಿಭಟನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಅವರ ಈ ಹೇಳಿಕೆಗಳು ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ ಎಂಬ ಟೀಕೆಯೂ ಕೇಳಿ ಬಂದಿದೆ.
ಕಪ್ಪವರ್ಣದ ಜಾಕೋಬ್ ಬ್ಲೇಕ್ ಬಿಳಿಯ ಪೊಲೀಸ್ ಅಧಿಕಾರಿ ಗುಂಡಿಗೆ ಬಲಿಯಾದ ಬಳಿಕ ನಗರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಇಡೀ ಸಮಾವೇಶವನ್ನೇ ವೈರತ್ವ ಹಾಗೂ ಪ್ರತ್ಯೇಕ ಭಾವ ಮೂಡಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಬಾರ್ನ್ಸ್ ಟೀಕಿಸಿದ್ದಾರೆ.
ಇಲ್ಲಿನ ಜನರ ನೆರವಿಗಾಗಿ ಭೇಟಿ ನೀಡುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಆದರೆ, ನಮಗೆ ಖಂಡಿತ ಅದರ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ರಾಜ್ಯಪಾಲ ಬಾರ್ನ್ಸ್ ಹೇಳಿದ್ದಾರೆ. ಈ ನಡುವೆ ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಾಯ್ ಬಿಡೆನ್ ಜನಾಂಗೀಯ ತಾರತಮ್ಯ ನಿವಾರಣೆಗಾಗಿ ಸ್ಪಷ್ಟ ನಿಲುವು ಪ್ರಕಟಿಸಿಬೇಕೆಂದು ಕೋರಿದ್ದಾರೆ.